ಆಳ್ವಾಸ್ ನಲ್ಲಿ ಬರವಣಿಗೆ ಕಾರ್ಯಾಗಾರ

ಜಾಹೀರಾತು/Advertisment
ಜಾಹೀರಾತು/Advertisment
ಆಳ್ವಾಸ್ ನಲ್ಲಿ ಬರವಣಿಗೆ ಕಾರ್ಯಾಗಾರ 
ಮೂಡುಬಿದಿರೆ : ಆಳ್ವಾಸ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಬರವಣಿಗೆ ಕಾರ್ಯಗಾರವನ್ನು ಆಯೋಜಿಸಲಾಯಿತು. ರಾಷ್ಟ್ರೀಯ ತರಬೇತುದಾರ, ಬರಹಗಾರ ಮತ್ತು ವೃತ್ತಿ ಮಾರ್ಗದರ್ಶಕ ವಿಕ್ರಮ ನಾಯಕ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ನಮ್ಮ ಜೀವನದಲ್ಲಿ ಕೆಲವೊಂದು ಚಟುವಟಿಕೆಗಳಿಂದ ನಾವು ಹಣ, ಜನಪ್ರಿಯತೆ ಮುಂತಾದವುಗಳನಷ್ಟೇ ನಿರೀಕ್ಷಿಸಬಾರದು. ಬರವಣಿಗೆ ಒಂದು ಸೃಜನಶೀಲ ಕಲೆ. ಬರವಣಿಗೆ ಆಪ್ತ ಸಮಾಲೋಚನೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಎಲ್ಲರೂ ವೃತ್ತಿಪರ ಬರಹಗಾರರಾಗಬೇಕೆಂದೇನಿಲ್ಲಆದರೆ ತಾವು ಆಯ್ಕೆ ಮಾಡಿಕೊಂಡ ವೃತ್ತಿಯಲ್ಲಿ ಉನ್ನತ ಸ್ಥಾನಮಾನವನ್ನು ತಲುಪಲು ಪರೋಕ್ಷವಾಗಿ ನೆರವಾಗುತ್ತದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ವಿಭಾಗದ ಸಲಹೆಗಾರ ಡಾ ಪ್ರವೀಣ್ ರಾಜ್, ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಪಡಿಸುವ ಸಾಮರ್ಥ್ಯವಿದೆ. ಬರವಣಿಗೆ ಸವಾಲಾದರೂ ಸಾಧ್ಯವಿದೆ. ಪ್ರತಿಯೊಬ್ಬರೂ ತಮ್ಮದೇ ಆದ ಬರವಣಿಗೆ ಶೈಲಿಯನ್ನು ಬೆಳೆಸಿಕೊಳ್ಳಬೇಕು. ಒಬ್ಬ ಹೋಮಿಯೋಪತಿ ವೈದ್ಯನಾಗಿ ಗಮನಿಸುವ ಕಲೆಯನ್ನು ಬೆಳೆಸಿಕೊಳ್ಳುವ ಹಾಗೆ ಒಬ್ಬ ಬರಹಗಾರನಿಗೂ ತನ್ನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುವ ಕಲೆ ಇರಬೇಕು. ಹೋಮಿಯೋಪತಿ ವೈದ್ಯ ಪದ್ಧತಿಯ ಉತ್ತಮ ವಿಚಾರಧಾರೆಗಳನ್ನು ಜನರಿಗೆ ತಲುಪಬೇಕಾದರೆ ಒಂದು ಲೇಖನಕ್ಕೆ ಆ ಸಾಮರ್ಥ್ಯವಿದೆ. ಈ ನಿಟ್ಟಿನಲ್ಲಿ ಬರವಣಿಗೆಯ ಕಲೆಯನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.

ಕಾರ್ಯಾಗಾರದಲ್ಲಿ ಪತ್ರಿಕೆಗಳಿಗೆ ಸುದ್ದಿ ಬರೆಯುವುದು, ನುಡಿ ಚಿತ್ರ ಬರೆಯುವುದರ ಕುರಿತು ತರಬೇತಿ ನೀಡಲಾಯಿತು. ಕಾರ್ಯಾಗಾರದ ನಂತರ ಆಶು ಭಾಷಣ ಮತ್ತು ಪ್ರೇರಣಾತ್ಮಕ ಭಾಷಣ ಚಟುವಟಿಕೆಗಳನ್ನು ಆಯೋಜಿಸಲಾಯಿತು.

ಆಡಳಿತ ಅಧಿಕಾರಿ ಡಾ. ಪ್ರಜ್ಞಾ ಆಳ್ವ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ ಎಚ್ ರೋಷನ್ ಪಿಂಟೋ ಸ್ವಾಗತಿಸಿದರು. ಡಾ ಶ್ರೇಯಸ್ ಕೆ ಎಸ್ ವಂದಿಸಿದರು. ಕುಮಾರಿ ನಿತ್ಯ ಬಿ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments