ಮೂಡುಬಿದಿರೆ : ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನ ಬೆಟ್ಟು, ಪಡುಮಾರ್ನಾಡ್ ಇದರ
87ನೇ ಸೇವಾ ಯೋಜನೆಯ
ಜನವರಿ ತಿಂಗಳ 2ನೇ ಯೋಜನೆಯ 10,000ವನ್ನು ಕಾರ್ಕಳ ತಾಲೂಕಿನನಿಟ್ಟೆ ಗ್ರಾಮದ ಐಶ್ವರ್ಯ ಅವರ ಚಿಕಿತ್ಸೆಗೆ ನೀಡಲಾಯಿತು.
ಐಶ್ವರ್ಯ ಅವರು ತನ್ನ ಪತಿ ಜಗದೀಶ್ ಆಚಾರ್ಯ ಅವರೊಂದಿಗೆ 13-11-2025 ರಂದು ತಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಮನೆಯಿಂದ ದ್ವಿಚಕ್ರ ವಾಹನ ದಲ್ಲಿ ಹೋಗುತ್ತಿರುವಾಗ ಮುಂಡ್ಕೂರು ದ್ವಾರದ ಬಳಿ ಅತೀ ವೇಗದಲ್ಲಿ ಬರುತ್ತಿದ್ದ ಕಾರೊಂದು ಇವರ ವಾಹನಕ್ಕೆ ಗುದ್ದಿ ದೂರ ಕ್ಕೆ ಎಸೆಯಲ್ಪಟ್ಟ ರಭಸಕ್ಕೆ ಜಗದೀಶ್ ಅವರ ಹೊಟ್ಟೆ ಹಾಗೂ ಸೊಂಟದ ಕೆಳ ಭಾಗ ಸಂಪೂರ್ಣ ಘಾಸಿ ಯಾಗಿದ್ದು ಮೂತ್ರ ಕೋಶ ಕೂಡ ಹಾನಿಯಾಗಿರುತ್ತದೆ. ಪತ್ನಿ ಐಶ್ವರ್ಯ ಇವರ ಬೆನ್ನು ಮೂಳೆ ತೀವ್ರ ವಾದ ಮುರಿತಕ್ಕೊಳಗಾಗಿ ಸಂಪೂರ್ಣ ದೇಹದ ಸ್ವಾಧೀನ ಕಳೆದು ಕೊಂಡು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಡ ಕುಟುಂಬ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಈಗಾಗಲೇ 12ಲಕ್ಷ ಹಣ ವನ್ನು ಖರ್ಚು ಮಾಡಿದ್ದು ಇನ್ನೂ 20ಲಕ್ಷ ಲಕ್ಷ ಬೇಕಾಗಬಹುದು ಎಂದು ವೈದ್ಯರು ಹೇಳಿರುತ್ತಾರೆ. ಇವರ ಕಷ್ಟಕ್ಕೆ ಸ್ಪಂದಿಸಿ ನಮ್ಮ ಸೇವಾ ಸಂಘ ದಿಂದ 10000ರೂಪಾಯಿ ಯ ಚೆಕ್ ಜ. 18ರಂದು ನಡೆದ ವಾರ್ಷಿಕ ಸಭೆಯಲ್ಲಿ ನೀಡಲಾಯಿತು.


0 Comments