ಕಲ್ಲಮುಂಡ್ಕೂರಿನಲ್ಲಿ ಬ್ರಹ್ಮಶ್ರೀ ಟ್ರೋಫಿ ಕ್ರೀಡಾಕೂಟ

ಜಾಹೀರಾತು/Advertisment
ಜಾಹೀರಾತು/Advertisment
ಕಲ್ಲಮುಂಡ್ಕೂರಿನಲ್ಲಿ ಬ್ರಹ್ಮಶ್ರೀ ಟ್ರೋಫಿ ಕ್ರೀಡಾಕೂಟ
ಮೂಡುಬಿದಿರೆ: ಬಿಲ್ಲವರ ಸಮಾಜ ಸೇವಾ ಸಂಘದ ಅಂಗಸಂಸ್ಥೆಯಾದ ಬ್ರಹ್ಮಶ್ರೀ ನಾರಾಯಣ ಗುರು ಯುವ ಘಟಕದ ಆಶ್ರಯದಲ್ಲಿ ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲೆಯ ಮೈದಾನದಲ್ಲಿ ಭಾನುವಾರ 'ಬ್ರಹ್ಮಶ್ರೀ ಟ್ರೋಫಿ -2026' ಕ್ರೀಡಾಕೂಟವು ನಡೆಯಿತು.
 
ಸರ್ವೋದಯ ಪ್ರೌಢಶಾಲೆ ಕಲ್ಲಮುಂಡ್ಕೂರಿನ ಸಂಚಾಲಕ ಜಯಪ್ರಕಾಶ್‌ ಪಡಿವಾಳ್, ಪುರೋಹಿತ ಶ್ರೀಧ‌ರ್ ಭಟ್, ಬಿಲ್ಲವರ ಸಂಘ ಕಲ್ಲಮುಂಡ್ಕೂರಿನ ಅಧ್ಯಕ್ಷ ಸಂದೀಪ್ ಸಾಲ್ಯಾನ್ ಹಾಗೂ ಬ್ರಹ್ಮ ಬೈದರ್ಕಳ ಗರಡಿ ಕಲ್ಲಮುಂಡ್ಕೂರಿನ ಅಧ್ಯಕ್ಷ ಕೇಶವ ಪೂಜಾರಿ ಪಂಜಾಡಿ ಅವರು 
ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಸಾದ್ ಕುಮಾರ್, ಸದಾನಂದ ಪೂಜಾರಿ , ಶೀನ ಪರವ , ಶ್ರೀಧರ ಭಟ್, ದೇವದಾಸ್ ಕಾಮತ್ ಹಾಗೂ ಸ್ಟ್ಯಾನಿ ರೊನಾಲ್ಡ್ ಡಿಸೋಜಾ ಇವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಎಂ.ಪಿ.ಪಿ. ಕಳಸ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನದೊಂದಿಗೆ 'ಬ್ರಹ್ಮಶ್ರೀ ಟ್ರೋಫಿ - 2026' ಅನ್ನು ತನ್ನದಾಗಿಸಿಕೊಂಡಿತು. ಬಿಲ್ಲವಾಸ್ ಕಲ್ಲಮುಂಡ್ಕೂರು ತಂಡವು ದ್ವಿತೀಯ ಸ್ಥಾನವನ್ನು ಪಡೆದು ರನ್ನರ್-ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ವಿಜೇತ ತಂಡಗಳಿಗೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.

ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ನಾರಾಯಣ ಗುರು ವೇದಿಕೆಯ ಅಧ್ಯಕ್ಷ ಸತ್ಯಜಿತ್‌ ಸುರತ್ಕಲ್, ನಿಡ್ಡೋಡಿ ಜ್ಞಾನರತ್ನ ಎಜುಕೇಶನ್ ಫೌಂಡೇಶನ್‌ನ ಅಧ್ಯಕ್ಷ ಭಾಸ್ಕ‌ರ್ ದೇವಸ್ಯ, ನಿಡ್ಡೋಡಿ ಸುಂದರ್‌ ಪೂಜಾರಿ, ಬ್ರಹ್ಮಶ್ರೀ ನಾರಾಯಣ ಗುರು ಯುವ ಘಟಕದ ಅಧ್ಯಕ್ಷ ಮನೋಜ್ ಪೂಜಾರಿ, ಬಿಲ್ಲವರ ಸಂಘ ಕಲ್ಲಮುಂಡ್ಕೂರಿನ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಮೋಹನ್ ದಾಸ್ ಉಪಸ್ಥಿತರಿದ್ದರು. 

ಸುಕುಮಾರ್ ಅಮೀನ್ ಮತ್ತು ಸೌಜನ್ಯ ಡಿ.ಎಸ್ ಕಾಯ೯ಕ್ರಮ ನಿರೂಪಿಸಿದರು.

Post a Comment

0 Comments