ಆಯೋಧ್ಯೆ ಶ್ರೀ ರಾಮೋತ್ಸವ : ಇರುವೈಲಿನಲ್ಲಿ ಭಜನಾ ಕಮ್ಮಟೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment
ಆಯೋಧ್ಯೆ ಶ್ರೀ ರಾಮೋತ್ಸವ : ಇರುವೈಲಿನಲ್ಲಿ ಭಜನಾ ಕಮ್ಮಟೋತ್ಸವ

ಮೂಡುಬಿದಿರೆ: ಅಯೋಧ್ಯೆ ಶ್ರೀ ರಾಮೋತ್ಸವದ ಎರಡನೇ ವರುಷದ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇರುವೈಲಿನಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಹಾಗೂ ಶ್ರೀ ರಾಮೋತ್ಸವ ಸಮಿತಿ ಇರುವೈಲು ಇವುಗಳ ಜಂಟಿ ಆಶ್ರಯದಲ್ಲಿ ಗುರುವಾರ ರಾತ್ರಿ ಭಜನಾ ಕಮ್ಮಟೋತ್ಸವ ಕಾರ್ಯಕ್ರಮ ನಡೆಯಿತು. 
ದೇವಾಲಯದ ಪ್ರಧಾನ ಅರ್ಚಕ ಐ ರಾಘವೇಂದ್ರ ಆಸ್ರಣ್ಣ ಅವರು ಭಜನಾ ಕಮ್ಮಟೋತ್ಸವಕ್ಕೆ ಚಾಲನೆ ನೀಡಿದರು. 
ಪಂಚಾಯತ್ ಸದಸ್ಯ ನಾಗೇಶ್ ಅಮೀನ್, ಭಜನಾ ಮಂಡಳಿ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಾರಾಯಣ ದೇವಾಡಿಗ, ಶ್ರೀ ರಾಮೋತ್ಸವ ಸಮಿತಿ ಸಂಚಾಲಕ ಪದ್ಮನಾಭ ಕುಲಾಲ್ ಶೆಟ್ಟಿಪದವು, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶುಭಕರ ಕಾಜವ, ಶಿವಾನಂದ ನಾಯ್ಕ್, ಹೊಸಬೆಟ್ಟು ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಪೂಜಾರಿ ಕಾಳೂರು, ಪ್ರಮುಖರಾದ ದಿನೇಶ್ ಶೆಟ್ಟಿ ದೊಡ್ಡಗುತ್ತು, ಹಾಗೂ ಗ್ರಾಮಸ್ಥರು, ಊರ-ಪರವೂರ ಭಕ್ತಾದಿಗಳು ಭಾಗವಹಿಸಿದ್ದರು.
 
ಇರುವೈಲು ದುರ್ಗಾಪರಮೇಶ್ವರಿ ಭಜನಾ ಮಂಡಳಿ, ದುರ್ಗಾಪರಮೇಶ್ವರಿ ಕುಣಿತ ಭಜನಾ ಮಂಡಳಿ, ವೀರ ಶಿವಾಜಿ ಭಜನಾ ಮಂಡಳಿ ಕಲ್ಲಾಡಿ, ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಪೂಪಾಡಿಕಲ್ಲು ಈ ತಂಡಗಳು ಕುಣಿತ ಭಜನೆಯಲ್ಲಿ ಪಾಲ್ಗೊಂಡಿದ್ದವು.


ಕೆಕೆಬಿ-ಭಜನಾ ಕಮ್ಮಟೋತ್ಸವ-೨೩.೦೧.೨೦೨೬

Post a Comment

0 Comments