ಮೂಡುಬಿದಿರೆಯಲ್ಲಿ ನಡೆಯುವ ಕಂಬಳದಲ್ಲಿ ವಿದ್ಯಾಥಿ೯ಗಳು ಏಕಬಳಕೆಯ ವಸ್ತುಗಳನ್ನು ಬಳಸದಂತೆ ಮಕ್ಕಳಿಗೆ ಶಾಲೆಗಳಲ್ಲಿ ಜಾಗೃತಿಯನ್ನು ಮೂಡಿಸುವ ಕಾಯ೯ವನ್ನು ಈ ಬಾರಿ ಪುರಸಭೆಯು ಕೈಗೊಂಡಿದೆ.
ಒಂಟಿಕಟ್ಟೆಯ ಕಡಲಕೆರೆ ನಿಸಗ೯ಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಜ. 31ರಂದು ನಡೆಯುವ 23ನೇ ವಷ೯ದ ಹೊನಲು ಬೆಳಕಿನ "ಕೋಟಿ-ಚೆನ್ನಯ" ಜೋಡುಕರೆ ಕಂಬಳವನ್ನು ಶೂನ್ಯ ತ್ಯಾಜ್ಯ ಕಂಬಳವಾಗಿ ಮಾಪಾ೯ಡಿಸಬೇಕೆಂಬ ಉದ್ದೇಶವನ್ನು ಪುರಸಭೆಯು ಇಟ್ಟುಕೊಂಡಿದೆ.
ಮೂಡುಬಿದಿರೆ ಪುರಸಭೆಯು ಕಳೆದ ಐದು ವಷ೯ಗಳಿಂದ ಶೂನ್ಯ ತ್ಯಾಜ್ಯ ಕಂಬಳವನ್ನು ಆಯೋಜಿಸಲು ಶತತ ಪ್ರಯತ್ನವನ್ನು ಮಾಡುತ್ತಲೇ ಬಂದಿದೆ. ಕಂಬಳದಲ್ಲಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡುವ, ಹೊಟೇಲ್, ಅನನಾಸು, ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡುವ ಸ್ಟಾಲ್ ನವರಿಗೆ ಹಾಗೂ ಶರಬತ್ತು ಮಾರಾಟ ಮಾಡುವರಿಗೆ ಈ ಮೊದಲು ಏಕಬಳಕೆ ವಸ್ತುಗಳಾದ ಪ್ಲಾಸ್ಟಿಕ್, ಥರ್ಮಕೋಲ್, ಪ್ಲೇಟ್ ಬೌಲ್, ಪೇಪರ್ ಪ್ಲೇಟ್, ಸ್ಟ್ರಾ ಮುಂತಾದವುಗಳ ಬಳಕೆಯನ್ನು ನಿಷೇಧಿಸುವಂತೆ ಸೂಚನೆ ನೀಡಿತ್ತು ಆದರೆ ಇದು ಕೇವಲ ಶೇ 75ರಷ್ಟು ಮಾತ್ರ ಯಶಸ್ವಿಯಾಗಿತ್ತು.
ಇದೀಗ ಪುರಸಭೆಯು ಕಂಬಳವನ್ನು ಶೇ 100ರಷ್ಟು ಶೂನ್ಯ ತ್ಯಾಜ್ಯ ಕಂಬಳವನ್ನು ಮಾಡಬೇಕೆನ್ನುವ ನಿಟ್ಟಿನಲ್ಲಿ ವಿವಿಧ ಶಾಲೆಗಳಿಗೆ ತೆರಳಿ ಕಂಬಳಕ್ಕೆ ಹೋಗುವ ವಿದ್ಯಾಥಿ೯ಗಳು ಏಕ ಬಳಕೆಯ ವಸ್ತುಗಳಾದ ಪ್ಲಾಸ್ಟಿಕ್, ಪೇಪರ್ ಗ್ಲಾಸ್, ಪೇಪರ್ ಪ್ಲೇಟ್ ಗಳನ್ನು ಬಳಸದೆ ಸ್ಟೀಲ್ ಲೋಟ, ಸ್ಟೀಲ್ ಪ್ಲೇಟ್, ತೆಂಗಿನ ಗೆರಟೆ, ಅಡಿಕೆ ಹಾಳೆ ಪ್ಲೇಟ್, ಮರದ ಎಲೆಗಳಿಂದ ರಚಿತ ವಸ್ತುಗಳನ್ನು ಬಳಸಿ ತಿಂಡಿ ತಿನಸುಗಳ ಸೇವನೆ ಮಾಡುವಂತೆ ಹಾಗೂ ತಮ್ಮ ತಮ್ಮ ಮನೆಯವರಿಗೂ ಗಮನಕ್ಕೆ ತರುವಂತೆ ಜಾಗೃತಿ ಮೂಡಿಸಲಾಗಿದೆ.
ವರದಿ : ಪ್ರೇಮಶ್ರೀ ಕಲ್ಲಬೆಟ್ಟು
------------------------
ಮಕ್ಕಳ ದಿನಾಚರಣೆಯ ಸಂದಭ೯ದಲ್ಲಿ ಪುರಸಭಾ ವ್ಯಾಪ್ತಿಯ ಏಳು ಶಾಲೆಗಳಿಗೆ ತೆರಳಿ ಏಕ ಬಳಕೆಯ ವಸ್ತುಗಳನ್ನು ಬಳಸದಂತೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗಿದೆ ಮತ್ತು 5 ಶಾಲೆಗಳು ಈಗಾಗಲೇ "ಶೂನ್ಯ ತ್ಯಾಜ್ಯ ಕ್ಯಾಂಪಸ್ "ಗಳಾಗಿ ಮಾಪಾ೯ಡಾಗಿವೆ. ಪುರಸಭೆಯ ಪರಿಸರ ಅಭಿಯಂತರರು, ಕಮ್ಯೂನಿಟಿ ಮೊಬಿಲೈಸರ್ ಗಳು ವಿವಿಧ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ : ಇಂದು ಎಂ. ಪುರಸಭಾ ಮುಖ್ಯಾಧಿಕಾರಿ ಮೂಡುಬಿದಿರೆ
_________________


0 Comments