ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆಯಲ್ಲಿರುವ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಕರೆಯನ್ನು ರೂ. 35 ಲಕ್ಷ ವೆಚ್ಚದಲ್ಲಿ ಸಂಪೂರ್ಣವಾಗಿ ನವೀಕರಿಸಲಾಗಿದೆ.
ಜ. 31ರಂದು ಮೂಡುಬಿದಿರೆ ಕಂಬಳವು ನಡೆಯಲಿದ್ದು ಕೋಣಗಳ ಓಟಕ್ಕೆ ಕರೆಯು ಸರಿಯಾಗಿಲ್ಲ ಆದ್ದರಿಂದ ಕರೆಯನ್ನು ಸರಿಪಡಿಸಬೇಕೆಂದು ಕೋಣಗಳ ಯಜಮಾನರುಗಳು ಶಾಸಕ, ಮೂಡುಬಿದಿರೆ ಕಂಬಳ ಸಮಿತಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಅವರಲ್ಲಿ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಕರೆಯನ್ನು ಅಭಿವೃದ್ಧಿ ಪಡಿಸಲಾಗಿದೆ.


0 Comments