ಯಕ್ಷಧ್ರುವ ವಿದ್ಯಾಥಿ೯ ಸಮ್ಮಿಲನ :2025-26'

ಜಾಹೀರಾತು/Advertisment
ಜಾಹೀರಾತು/Advertisment
'ಯಕ್ಷಧ್ರುವ ವಿದ್ಯಾಥಿ೯ ಸಮ್ಮಿಲನ :2025-26'


*ಯಕ್ಷಗಾನ ಕಲಿಕೆಯಿಂದ ವಿದ್ಯಾಥಿ೯ಗಳ ಜ್ಞಾನ ವೃದ್ಧಿ : ಶಾಸಕ ಉಮಾನಾಥ್ ಕೋಟ್ಯಾನ್ 

 ಮೂಡುಬಿದಿರೆ : ಮೆದುಳಿಗೆ ಮೇವು ನೀಡುವ ಶಿಕ್ಷಣ ಯಕ್ಷಗಾನ. ವಿದ್ಯಾರ್ಥಿಗಳ ಮಾನಸಿಕ, ಶಾರೀರಿಕ ಬೆಳವಣಿಗೆಗೆ ಯಕ್ಷ ಶಿಕ್ಷಣವು ಸಹಕಾರಿಯಾಗುತ್ತದೆ ಎಂದು ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು 

ಅವರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು, ಮೊರಾಜಿ೯ ದೇಸಾಯಿ ಬಾಲಕಿಯರ ವಸತಿ ಶಾಲೆ ಕಲ್ಲಬೆಟ್ಟು ಇದರ ಸಹಯೋಗದೊಂದಿಗೆ ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಕ್ಷಧ್ರುವ -ಯಕ್ಷ ಶಿಕ್ಷಣ ಯೋಜನೆಯಡಿ ಯಕ್ಷಗಾನಾಭ್ಯಾಸ ನಿರತ ಸರಕಾರಿ ವಸತಿ ಶಾಲೆ ಮತ್ತು ಫ್ರೌಢಶಾಲಾ ವಿದ್ಯಾಥಿ೯ಗಳಿಂದ ನಡೆಯುವ 'ಯಕ್ಷಧ್ರುವ ವಿದ್ಯಾಥಿ೯ ಸಮ್ಮಿಲನ :2025-26' ಕಾಯ೯ಕ್ರಮವನ್ನು ಕಲ್ಲಬೆಟ್ಟು ಮೊರಾಜಿ೯ ದೇಸಾಯಿ ಬಾಲಕಿಯರ ವಸತಿ ಶಾಲೆಯ ರಾಣಿ ಚೆನ್ನಮ್ಮ ಸಭಾಂಗಣದ ಚಕ್ರವತಿ೯ ಬಂಟ್ವಾಳ ಜಯರಾಮ ಆಚಾಯ೯ ವೇದಿಕೆಯಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.
  ಪಠ್ಯ ಶಿಕ್ಷಣದಲ್ಲಿ ಹಿಂದೆ ಇರುವ ವಿದ್ಯಾಥಿ೯ಗಳು ಯಕ್ಷ ಶಿಕ್ಷಣದಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಉತ್ತಮ ಜ್ಞಾನವೂ ಲಭಿಸುತ್ತದೆ. ಯಕ್ಷಗಾನದಲ್ಲಿ ಉದ್ಯೋಗದ ಅವಕಾಶವೂ ಇದೆ. ಅಲ್ಲದೆ ಬೇರೆ ಬೇರೆ ಉದ್ಯೋಗದಲ್ಲಿದ್ದುಕೊಂಡೇ ಯಕ್ಷಗಾನದಲ್ಲಿ ಹವ್ಯಾಸಿ ಕಲಾವಿದರಾಗಿಯೂ ದುಡಿಯಲು ಅವಕಾಶವಿದೆ ಎಂದ ಅವರು ಮಕ್ಕಳಲ್ಲಿ ಬೇರೆ ಬೇರೆ ರೀತಿಯ ಪ್ರತಿಭೆಗಳಿವೆ ಅದನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕೆಂದರು.
   
   
ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಕಟೀಲು-ಎಕ್ಕಾರು ಘಟಕದ ಅಧ್ಯಕ್ಷ ಗಿರೀಶ್ ಎಂ. ಕಟೀಲು ಅಧ್ಯಕ್ಷತೆ ವಹಿಸಿ ಮಾತನಾಡಿ ಸುಂದರವಾದ ಕಲೆಯಾಗಿರುವ ಯಕ್ಷಗಾನದಲ್ಲಿ ಭಾವಾನಾತ್ಮಕವಾದ ಸಂಬಂಧವಿದೆ. ಯಕ್ಷಗಾನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಕ್ಕಳಲ್ಲಿ ಯಕ್ಷಗಾನದ ಅಭಿರುಚಿಯನ್ನು ಬೆಳೆಸುತ್ತಿದೆ ಎಂದ ಅವರು ಗಂಡು ಕಲೆಯಾಗಿರುವ ಯಕ್ಷಗಾನದಲ್ಲಿ ಇದೀಗ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು ಶ್ಲಾಘನೀಯ.

 ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ವಕೀಲ ಅರುಣ್ ಬಂಗೇರ ಮಾತನಾಡಿ ಶ್ರೀಮಂತ ಕಲೆಯಾಗಿರುವ ಯಕ್ಷಗಾನವನ್ನು ಮುಂದಿನ ಜನಾಂಗಕ್ಕೆ ವಗಾ೯ಯಿಸಲು ಮಕ್ಕಳಿಂದ ಮಾತ್ರ ಸಾಧ್ಯ ಎಂದರು.

 ಉದ್ಯಮಿ ಈಶ್ವರ್ ಕಟೀಲು,ಎಕ್ಕಾರು ಗ್ರಾ. ಪಂ. ಸದಸ್ಯ ಸತೀಶ್ ಶೆಟ್ಟಿ, ದ. ಕ ವಸತಿ ಶಾಲಾ ವಿಭಾಗದ ಜಿಲ್ಲಾ ಸಮನ್ವಯಾಧಿಕಾರಿ ಸತೀಶ್ ಟಿ. ವಸತಿ ಶಾಲೆಯ ಪಾಲಕ ಸಮಿತಿಯ ಅಧ್ಯಕ್ಷ ಯಲ್ಲಪ್ಪ ಕುರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ದಿವಾಕರ ಶೆಟ್ಟಿ ಬೆಳುವಾಯಿ, ಸಂಘಟನಾ ಕಾಯ೯ದಶಿ೯ ಮನೋಜ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. 
 ಕಲ್ಲಬೆಟ್ಟು ಮೊರಾಜಿ೯ ದೇಸಾಯಿ ವಸತಿ ಶಾಲೆಯ ಪ್ರಾಚಾಯ೯ ಸಂಗನಬಸಯ್ಯ ಜಿ. ಹೀರೆಮಠ ಸ್ವಾಗತಿಸಿದರು. ಯಕ್ಷಧ್ರುವ ಯಕ್ಷಶಿಕ್ಷಣದ ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಪ್ರಾಸ್ತಾವಿಕವಾಗಿ ಮಾತನಾಡಿ
 ಶಿಕ್ಷಕಿ ಸವಿತಾ ಕಾಯ೯ಕ್ರಮ ನಿರೂಪಿಸಿದರು. ಶಿಕ್ಷಕ ವಿವೇಕ್ ಪಡಿಯಾರ್ ವಂದಿಸಿದರು.

Post a Comment

0 Comments