ಬೆಳುವಾಯಿ ಮೈನ್ ಶಾಲೆಯ 114ನೇ ವಾಷಿ೯ಕೋತ್ಸವ : ನಿವೃತ್ತ ಶಿಕ್ಷಕಿ ಮತ್ತು ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರಿಗೆ ಸನ್ಮಾನ

ಜಾಹೀರಾತು/Advertisment
ಜಾಹೀರಾತು/Advertisment

 ಬೆಳುವಾಯಿ ಮೈನ್ ಶಾಲೆಯ 114ನೇ ವಾಷಿ೯ಕೋತ್ಸವ : ನಿವೃತ್ತ ಶಿಕ್ಷಕಿ ಮತ್ತು ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರಿಗೆ ಸನ್ಮಾನ

ಮೂಡುಬಿದಿರೆ : ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬೆಳುವಾಯಿ ಮೈನ್ ಇದರ 114 ನೇ ವಷ೯ದ ವಾಷಿ೯ಕೋತ್ಸವದ ಸಭಾ ಕಾಯ೯ಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಭಾಸ್ಕರ ಆಚಾಯ೯ ಮತ್ತು ನಿವೃತ್ತ ಶಿಕ್ಷಕಿ ಚೈತ್ರಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. 

 ಬೆಳುವಾಯಿ ಗ್ರಾ. ಪಂ. ಉಪಾಧ್ಯಕ್ಷೆ ಜಯಂತಿ ಪೂಜಾರಿ, ಸದಸ್ಯರಾದ ರಘು ಪೆಲಕುಂಜ, ಪ್ರವೀಣ್ ಮಸ್ಕರೇನಸ್, ಪಡುಮಾನಾ೯ಡು ಗ್ರಾ. ಪಂ. ಸದಸ್ಯ ಸತೀಶ್ ಕಕೇ೯ರಾ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಶಿರೂರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಿಜಯ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಕಾಯ೯ದಶಿ೯ ಪ್ರವೀಣ್ ಭಂಡಾರಿ, ಮುಖ್ಯ ಶಿಕ್ಷಕಿ ರಾಜಶ್ರೀ ನಾಯಕ್ ಈ ಸಂದಭ೯ ಉಪಸ್ಥಿತರಿದ್ದರು. 

  ಸೀಮಾ ನಾಯಕ್ ಕಾಯ೯ಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಅರುಣಾ ಶೆಟ್ಟಿ ವಂದಿಸಿದರು.

Post a Comment

0 Comments