ಅಖಂಡ ಏಕಾಹ ಭಜನ ಅಮೃತ ಮಹೋತ್ಸವ *ಸುಂದರಕಾಂಡ ಹವನ ಪೂಣಾ೯ಹುತಿ

ಜಾಹೀರಾತು/Advertisment
ಜಾಹೀರಾತು/Advertisment

 ಅಖಂಡ ಏಕಾಹ ಭಜನ ಅಮೃತ ಮಹೋತ್ಸವ 

*ಸುಂದರಕಾಂಡ ಹವನ ಪೂಣಾ೯ಹುತಿ

ಮೂಡುವೇಣುಪುರ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಶ್ರೀ ವೆಕಟರಮಣ ಭಜನ ಮಂಡಳಿಯ ಅಖಂಡ ಏಕಾಹ ಭಜನ ಅಮೃತ ಮಹೋತ್ಸವ-2015 (ನ. 26- ಡಿ. 2) ರಂಗವಾಗಿ ಶನಿವಾರ ವೇ। ಮೂ। ಪವನ್ ಭಟ್ ಮತ್ತು ವೈದಿಕ ಬಳಗದವರು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಸುಂದರ ಕಾಂಡ ಹವನವನ್ನು ನೆರವೇರಿಸಿದರು.

ಬೆಳಗ್ಗೆ 7.30ರಿಂದ ಹವನ ಪ್ರಾರಂಭವಾಗಿ, 10ಕ್ಕೆ ಹವನದ ಪೂರ್ಣಾಹುತಿ ಸಾಹಿತ್ಯವನ್ನು ಶ್ರೀ ಹನುಮಂತ ದೇಗುಲದಿಂದ ವಾದ್ಯಘೋಷ, ಭಜನ ಸಂಕೀರ್ತನೆಯೊಂದಿಗೆ ಯಜ್ಞ ಮಂಟಪಕ್ಕೆ ತರಲಾಯಿತು. 10.30ಕ್ಕೆ ಶ್ರೀ ಸುಂದರ ಕಾಂಡ ಹವನದ ಮಹಾ ಪೂರ್ಣಾಹುತಿ


ನಡೆಯಿತು. ಚೇಂಪಿ ಅರವಿಂದ ಭಟ್, ಕಾರ್ಕಳದ ಕೃಷ್ಣಾನಂದ ತಂತ್ರಿಯವರು ಶುಭಹಾರೈಸಿದರು. ದೇವಸ್ಥಾನದ ಆಡಳಿತ ಮೊಕೇಸರ ಜಿ. ಉಮೇಶ ಪೈ, ಟ್ರಸ್ಟಿಗಳು, ಪ್ರಧಾನ ಅರ್ಚಕ ವೇ। ಮೂ। ಹರೀಶ್ ಭಟ್, ಶ್ರೀ ವೇಂಕಟರಮಣ ಭಜನ ಮಂಡಳಿಯ ಅಧ್ಯಕ್ಷ ಎಂ. ತುಕಾರಾಮ ಮಲ್ಯ, ನಾಗೇಂದ್ರ ಭಟ್, ವಿಶ್ಲೇಶ ಪ್ರಭು ಸಹಿತ ಮಂಡಲಳಿಯ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು. ಸಾರ್ವಜನಿಕ ಮಹಾಅನ್ನ ಸಂತರ್ಪಣೆ ಜರಗಿತು.

Post a Comment

0 Comments