ಯುವಕನ ಮೇಲೆ ದುಷ್ಕರ್ಮಿಗಳಿಂದ ದಾಳಿಗೆ ಯತ್ನ
ಮೂಡುಬಿದಿರೆ : ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಹನುಮಾನ್ ಮಂದಿರದ ಬಳಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಮತ್ತೊಂದು ಸ್ಕೂಟರ್‌ನಲ್ಲಿ ಬಂದವರು ದಾಳಿಗೆ ಯತ್ನಿಸಿರುವ ಘಟನೆ ಇಂದು ಸಂಜೆ ನಡೆದಿದೆ.
ಮೂಡುಬಿದಿರೆ ತಾಲೂಕಿನ ಇರುವೈಲು ಪೂಪಾಡಿಕಲ್ಲು ನಿವಾಸಿ ಅಖಿಲೇಶ್ (೨೮) ಗಾಯಾಳು.
ನಾಲ್ಕು-ಐದು ಮಂದಿಯಿಂದ ತಂಡದಾಳಿ ನಡೆಸಿರುವ ಶಂಕೆ ಇದ್ದು ಒಬ್ಬ ಪೊಲೀಸ್ ಅವರ ವಶದಲ್ಲಿರುವ ಮಾಹಿತಿ ಇದೆ. ಯುವಕನ ಕೈ ಭಾಗಕ್ಕೆ ಗಾಯಗಳಾಗಿದ್ದು, ಮೂಡುಬಿದಿರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆಯಾಗುತ್ತಿದ್ದಾರೆ. ಇನ್ನಷ್ಟು ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಾಗಿದೆ.




0 Comments