ಸಹಕಾರ ಸಪ್ತಾಹ ಸಂಭ್ರಮ ಸಮಾರೋಪ *ಕಸಮುಕ್ತ ಪರಿಸರವನ್ನು ಸೃಷ್ಠಿಸೋಣ : ರಾಯಪ್ಪ

ಜಾಹೀರಾತು/Advertisment
ಜಾಹೀರಾತು/Advertisment

 ಸಹಕಾರ ಸಪ್ತಾಹ ಸಂಭ್ರಮ ಸಮಾರೋಪ 

*ಕಸಮುಕ್ತ ಪರಿಸರವನ್ನು ಸೃಷ್ಠಿಸೋಣ : ರಾಯಪ್ಪ

ಮೂಡುಬಿದಿರೆ: ಪರಿಸರ ಅಮೂಲ್ಯವಾದುದು. ಆದರೆ ನಾವಿಂದು ಭೂಮಿ, ಗಾಳಿ, ನೀರನ್ನು ತ್ಯಾಜ್ಯದಿಂದ ತುಂಬಿ ನಾಶ ಮಾಡುತ್ತಿದ್ದೇವೆ. ನಮ್ಮ ಊರು, ನಮ್ಮ ಪರಿಸರ ಎಂಬ ಭಾವನೆೆ ನಮ್ಮಲ್ಲಿ ಮೂಡಿದಾಗ ಪರಿಸರದ ಬಗ್ಗೆ ಜವಾಬ್ದಾರಿ ಹೆಚ್ಚುತ್ತದೆ ಈ ಮೂಲಕ ಕಸಮುಕ್ತ ಪರಿಸರವನ್ನು ಸೃಷ್ಠಿಸೋಣ ಎಂದು ಉಡುಪಿ ನಗರಸಭೆಯ ನಿವೃತ್ತ ಆಯುಕ್ತ ರಾಯಪ್ಪ ಹೇಳಿದರು. 

ಮೂಡುಬಿದಿರೆ ಕೋ ಆಪರೇಟಿವ್ ಸೊಸೈಟಿಯ ಸಹಕಾರ ಸಪ್ತಾಹ ಸಂಭ್ರಮದ ಕೊನೆಯ ದಿನವಾಗಿರುವ ಗುರುವಾರದಂದು ನಡೆದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು 'ಯುವಜನ-ಸೇವೆ-ಸಹಕಾರ' ಎಂಬ ವಿಷಯದ ಬಗ್ಗೆ ಮಾತನಾಡಿದರು. 

 ತ್ಯಾಜ್ಯವನ್ನು ಮನೆಯಲ್ಲಿಯೆ ಹಸಿ ಮತ್ತು ಒಣ ಕಸಗಳನ್ನು ವಿಂಗಡಣೆ ಮಾಡಿ ಹಸಿ ಕಸವನ್ನು ಗೊಬ್ಬರವಾಗಿ ಬಳಸಿ ಇದರಿಂದ ಪೌರಕಾಮಿ೯ರ ಕೆಲಸ ಕಡಿಮೆ ಮಾಡಿದಂತ್ತಾಗುತ್ತದೆ. ಹಾನಿಕಾರಕ ಬಾಟಲ್ ನೀರು, ಪ್ಲಾಸ್ಟಿಕ್ ಬಳಕೆ, ಪೇಪರ್ ಗ್ಲಾಸ್ ನಿಷೇಧವಿದ್ದರೂ ನಾವು ಅದನ್ನೇ ಬಳಸುವ ಮೂಲಕ ಕ್ಯಾನ್ಸರ್ ನಂತಹ ರೋಗಗಳಿಗೆ ಆಹ್ವಾನ ನೀಡುತ್ತಿದ್ದೇವೆ ಎಂದು ಬೇಸರ ವ್ಯಕ್ತ ಪಡಿಸಿದ ಅವರು ಯುವ ಜನಾಂಗ ಸಹಕಾರಿ ಸಂಸ್ಥೆಗಳಲ್ಲಿ ಪಾಲ್ಗೊಂಡು ಎಲ್ಲಾ ಸಹಕಾರಗಳನ್ನು ಪಡೆದು ಅಭಿವೃದ್ಧಿಯನ್ನು ಹೊಂದಬೇಕೆಂದು ಸಲಹೆ ನೀಡಿದರು.  


  ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸತ್ತ ಮೇಲು ಬದುಕಿರುವಂತ ಶಾಶ್ವತ ಕೆಲಸವನ್ನು ಸಾಧಿಸಿ ತೋರಿಸಬೇಕಾಗಿದೆ. ಯುವಕರು ತಂದೆ ತಾಯಿಯರ ಮುಂದೆ ತಲೆತಗ್ಗಿಸಬೇಕೇ ಹೊರತು ತಂದೆ ತಾಯಿಯರೇ ಇತರರ ಮುಂದೆ ತಲೆತಗ್ಗಿಸುವಂತಹ ಕೆಲಸ ಮಾಡಬಾರದೆಂದು ಸಲಹೆ ನೀಡಿದರು. 


ಅಜ್ಜರಕಾಡು ಮಹಿಳಾ ಕಾಲೇಜಿನ ಪ್ರಾಂಶುಪಾಲೆ ನಿಕೇತನ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿ ಶಿಕ್ಷಣ, ಉದ್ಯಮಶೀಲತೆ, ಸಮಾಜದ ಯುವಕರಲ್ಲಿ ವಿವೇಕ, ವೈಚಾರಿಕ ಪ್ರಜ್ಞೆಯಿಂದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಒಡಮೂಡಿಸಿಕೊಂಡು ಗುಣಮಟ್ಟದಿಂದ ಮತ್ತು ಪ್ರೀತಿಯಿಂದ ಬೆಳೆದಲ್ಲಿ ನಗುಮುಖದ ತಾಯ್ತನದ ಸೇವೆ ಎಲ್ಲರಿಂದಲೂ ಸಾಧ್ಯ ಎಂದರು.

ಸೊಸೈಟಿಯ ಅಧ್ಯಕ್ಷ ಬಾಹುಬಲಿ ಪ್ರಸಾದ್ ಮಾತನಾಡಿ ಹಲವು ವರ್ಷಗಳಿಂದ ನಿರಂತರವಾಗಿ ಏಳು ದಿನಗಳ ಕಾಲವೂ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಸಂಸ್ಥೆ ಎಂದು ಹೆಮ್ಮಯಿಂದ ಹೇಳಿದರು.


 ಬೀಳ್ಕೊಡುಗೆ : ಸೊಸೈಟಿಯಿಂದ ಈ ವರ್ಷ ನಿವೃತ್ತರಾಗಲಿರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುವೀರ ಕಾಮತ್, ಹಾಗೂ ಜವಾನ ಶೇಖರ ಅವರನ್ನು ಸನ್ಮಾನಿಸಿ ಬಿಳ್ಕೊಡಲಾಯಿತು. 


ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ರಾಜೇಶ ಸೇರ್ವೆಗಾರ್, ರಾಜು, ಮಡಿವಾಳ, ಸೂರಜ್ ಜೈನ್, ಮೋಹನ ದೇವಾಡಿಗ, ವಿಶ್ವನಾಥ ದೇವಾಡಿಗ, ಅಬೂಬಕ್ಕರ್, ಪದ್ಮನಾಭ ದೇವಾಡಿಗ, ಗೋಪಾಲ ಸುವರ್ಣ, ಸಂಜೀವ ಪೂಜಾರಿ ಯರನ್ನು ಸನ್ಮಾನಿಸಲಾಯಿತು. 


ಮಂಗಳೂರು ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ತ್ರಿವೇಣಿ ಎಸ್ ರಾವ್, ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.


ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸೊಸೈಟಿ 120 ಕೋಟಿ ಸ್ವಂತ ನಿಧಿ ಹೊಂದಿದ್ದು ಲೆಕ್ಕ ಪರಿಶೋಧನೆಯಲ್ಲಿ ಎ ಗ್ರೇಡ್ ಪಡೆದಿದೆ. ಸರಕಾರದಿಂದ ಯಾವುದೇ ಸಹಾಯಧನವಿಲ್ಲದೆ ಮಂಚೂಣಿಯಲ್ಲಿರುವ ಸಂಸ್ಥೆ ಎಂದು ಹೆಮ್ಮೆಯಿಂದ ನುಡಿದರು. 

ಗಣೇಶ್ ಕಾಮತ್ ಅತಿಥಿಗಳನ್ನು ಪರಿಚಯ ಗೈದರು. ಚೇತನಾ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಸುದರ್ಶನ್ ಭಟ್ ವಂದಿಸಿದರು.

Post a Comment

0 Comments