ನೋಟರಿಯಾಗಿ ನ್ಯಾಯವಾದಿ ಪ್ರವೀಣ್ ಎಸ್. ಲೋಬೋ ನೇಮಕ
ಮೂಡುಬಿದಿರೆ: ಇಲ್ಲಿನ ಖ್ಯಾತ ನ್ಯಾಯವಾದಿ ಪ್ರವೀಣ್ ಸಂದೀಪ್ ಲೋಬೋ ಅವರು ಮೂಡುಬಿದಿರೆ ತಾಲೂಕು ನೋಟರಿಯಾಗಿ ಕರ್ನಾಟಕ ಸರಕಾರದಿಂದ ನೇಮಕಗೊಂಡಿದ್ದಾರೆ.
ಮೂಡುಬಿದಿರೆಯಲ್ಲಿ ಕಳೆದ ಕೆಲ ವರ್ಷಗಳಿಂದ ನ್ಯಾಯವಾದಿಯಾಗಿ ಗುರುತಿಸಿಕೊಂಡಿರುವ ಅವರು ಈ ಭಾಗದ ಕ್ರೈಸ್ತ ವಿವಾಹ ನೋಂದಣಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇದೀಗ ಅವರನ್ನು ಕರ್ನಾಟಕ ಸರಕಾರವು ನೋಟರಿಯನ್ನಾಗಿ ನೇಮಕಗೊಳಿಸಿದೆ.
ನೂತನ ನೋಟರಿಯಾಗಿ ನೇಮಕಗೊಂಡಿರುವ ಪ್ರವೀಣ್ ಲೋಬೋ ಅವರನ್ನು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ,ಸ್ಪೀಕರ್ ಯು.ಟಿ.ಖಾದರ್,ಮಾಜಿ ಸಚಿವ ಕೆ.ಅಭಯಚಂದ್ರ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ,ಮೂಡುಬಿದಿರೆಯ ವಕೀಲರು ಸಹಿತ ಹಲವಾರು ಪ್ರಮುಖರು ಅಭಿನಂದಿಸಿದ್ದಾರೆ.
0 Comments