ಆರೋಗ್ಯ ಸಮಸ್ಯೆ : ಚಿಕಿತ್ಸೆಗೆ ನೆರವು ನೀಡಿದ ಸಾಯಿ ಮಾನಾ೯ಡ್
ಮೂಡುಬಿದಿರೆ : ಬೆನ್ನು ನೋವಿನಿಂದ ಬಳಲುತ್ತಿರುವ ವ್ಯಕ್ತಿಯೋವ೯ರ ಚಿಕಿತ್ಸೆಗೆ ಪಡುಮಾರ್ನಾಡಿನ ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನಬೆಟ್ಟು ತನ್ನ
78ನೇ ಸೇವಾ ಯೋಜನೆಯ
ಸೆಪ್ಟೆಂಬರ್ ತಿಂಗಳ 2ನೇ ಯೋಜನೆಯ ರೂ. 10,000ದ ನೆರವು ನೀಡಿದೆ.
ಮೂಡುಬಿದಿರೆ ತಾಲೂಕಿನ ಮಾರ್ಪಡಿ ಗ್ರಾಮ ಸುಭಾಸ್ ನಗರದ 37ರ ಹರೆಯದ ಆದರ್ಶ್ ಜೆ. ಆಚಾರ್ಯ ಅವರು ಕಳೆದ 2ವರ್ಷದಿಂದ ಬೆನ್ನು ನೋವಿನಿಂದ ಬಳಲುತ್ತಿದ್ದು ಈಗಾಗಲೇ ಹಲವು ಕಡೆಯಿಂದ ಔಷಧಿ ಮಾಡಿರುತ್ತಾರೆ ಆದರೆ ಗುಣಮುಖರಾಗಿಲ್ಲ. ಪೈಂಟಿಂಗ್ ಕೆಲಸ ಮಾಡುತ್ತಿದ್ದ ಅವರಿಗೆ ಇದೀಗ ಕೆಲಸ ಮಾಡಲಾಗದೆ ಮನೆಯಲ್ಲೇ ಉಳಿದುಕೊಂಡಿದ್ದಾರೆ.
ಮನೆಯಲ್ಲಿ ಇವರ ಜೊತೆ ತಾಯಿ ಇದ್ದಾರೆ.ಮನೆಯ ಜವಾಬ್ದಾರಿ ವಹಿಸಿಕೊಳ್ಳಬೇಕಾದವರು ಹಾಸಿಗೆಯಲ್ಲಿರುವುದರಿಂದ ಇವರ ದೈನಂದಿನ ಖರ್ಚಿಗೆ ಹಾಗೂ ಇವರ ಔಷಧಿಗೆ ಹಣ ಹೊಂದಿಸಲು ಕಷ್ಟ ಆಗಿರುವುದರಿಂದ ಸಾಯಿ ಮಾನಾ೯ಡ್ ಸೇವಾ ಸಂಘವು ಆದಿತ್ಯವಾರದಂದು ಚೆಕ್ ಮೂಲಕ ರೂ 10,000ವನ್ನು ಹಸ್ತಾಂತರಿಸಿದೆ.
0 Comments