ಪೊನ್ನೆಚಾರಿ ದೇವಳದಲ್ಲಿ ಮೂಡುಬಿದಿರೆ ದಸರಾ ಬಾಹುಬಲಿ ಪ್ರಸಾದ್ ಗೆ" ಶ್ರೀ ಶಾರಾದಾನುಗ್ರಹ" ಡಾ. ವಿನಯ ಕುಮಾರ್ ಹೆಗ್ಡೆಗೆ " ಸಿರಿಪುರ" ಪ್ರಶಸ್ತಿ ಪ್ರದಾನ

ಜಾಹೀರಾತು/Advertisment
ಜಾಹೀರಾತು/Advertisment

ಪೊನ್ನೆಚಾರಿ ದೇವಳದಲ್ಲಿ ಮೂಡುಬಿದಿರೆ ದಸರಾ

ಬಾಹುಬಲಿ ಪ್ರಸಾದ್ ಗೆ" ಶ್ರೀ ಶಾರಾದಾನುಗ್ರಹ" ಡಾ. ವಿನಯ ಕುಮಾರ್ ಹೆಗ್ಡೆಗೆ " ಸಿರಿಪುರ" ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಇಲ್ಲಿನ ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಮೂಡುಬಿದಿರೆ ದಸರಾ 2025- ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವದಂಗವಾಗಿ ಮಂಗಳವಾರ ನಡೆದ ಸಭಾ ಕಾಯ೯ಕ್ರಮದಲ್ಲಿ ಎಂಸಿಎಸ್ ಬ್ಯಾಂಕ್ ಅಧ್ಯಕ್ಷ, ವಕೀಲ ಬಾಹುಬಲಿ ಪ್ರಸಾದ್ ಅವರಿಗೆ "ಶ್ರೀ ಶಾರದಾನುಗ್ರಹ ಪ್ರಶಸ್ತಿ- 2025"ಹಾಗೂ ದಂತ ತಜ್ಞ ಡಾ.ವಿನಯ್ ಕುಮಾರ್ ಹೆಗ್ಡೆ ಅವರಿಗೆ "ಸಿರಿಪುರ ಪ್ರಶಸ್ತಿ- 2025"ನ್ನು ಪ್ರದಾನ ಮಾಡಲಾಯಿತು. 

   ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಾಹುಬಲಿ ಪ್ರಸಾದ್ ಅವರು ನಮ್ಮ ಬದುಕೇ ಶಾರದಾನುಗ್ರದಿಂದ ನಡೆಯುತ್ತಿದೆ. ನಮ್ಮ ಆಡಳಿತ ವ್ಯವಹಾರ ಹಾಗೂ ವಿದ್ಯೆ, ವಿನಯದ ಪ್ರತಿಬಿಂಬವೇ ಶಾರದೆಯಾಗಿದ್ದಾಳೆ.   ಜನ ಸೇರುವಲ್ಲಿ ದೇವರ ಶಕ್ತಿಯಿದೆ. ನಮ್ಮ ದೇಶದ  ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಲು ಧಾಮಿ೯ಕ ಕಾಯ೯ಕ್ರಮಗಳು ಅಗತ್ಯವಿದೆ ಎಂದ ಅವರು ದೇವರ ಹೆಸರಲ್ಲಿ ಸಿಕ್ಕಿರುವ ಈ ಪ್ರಶಸ್ತಿಯ ಬಗ್ಗೆ ಹೆಮ್ಮೆ ಮತ್ತು ಖುಷಿ ನೀಡಿದ್ದು ಜೀವನದಲ್ಲಿ ಎಂದೂ ಮರೆಯಲಾರೆ ಎಂದರು. 


ಸಿರಿಪುರ ಪ್ರಶಸ್ತಿ ಸ್ವೀಕರಿಸಿದ ಡಾ. ವಿನಯ ಕುಮಾರ್ ಅವರು ಸಂಸ್ಥೆಗೆ ಮತ್ತು ಮೂಡುಬಿದಿರೆಯ ಜನತೆಗೆ ಕೃತಜ್ಞತೆ ಸಲ್ಲಿಸಿದರು. 

ರೋಟರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ಉದ್ಯಮಿ ನಾರಾಯಣ ಪಿ. ಎಂ, ಹಿರಿಯ ನ್ಯಾಯವಾದಿ ಕೆ. ಆರ್. ಪಂಡಿತ್, ರೇಣುಕಾ ಪ್ರಸಾದ್ ಬೆಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. 


ಪುರಸಭಾ ಸದಸ್ಯ ಸುರೇಶ್ ಪ್ರಭು ಮತ್ತು ದೇವಳದ ಆಡಳಿತ ಮೊಕ್ತೇಸರ ಎಂ.ಪಿ ಅಶೋಕ್ ಕಾಮತ್ ಅವರು ವಿವಿಧ ಸ್ಪಧೆ೯ಗಳ ವಿಜೇತರಿಗೆ ಬಹುಮಾನವನ್ನು ವಿತರಿಸಿದರು.  

ಸ್ಪಧಾ೯ ಸಂಘಟಕ, ಸಿರಿಪುರ ಪ್ರತಿಷ್ಠಾನದ ಸ್ಥಾಪಕ ರಾಮಕೃಷ್ಣ ಶಿರೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. 

 ಪವನ್ ಆರ್. ಭಟ್ ಪ್ರಾಥಿ೯ಸಿದರು.

 ಸಿರಿಪುರ ಪ್ರತಿಷ್ಠಾನದ ಪ್ರಧಾನ ಕಾಯ೯ದಶಿ೯ ನಾಗರತ್ನ ಶಿರೂರು ಸನ್ಮಾನ ಪತ್ರ ವಾಚಿಸಿ ಕಾಯ೯ಕ್ರಮ ನಿರೂಪಿಸಿದರು.

Post a Comment

0 Comments