ವಿವಾಹಿತ ಮಹಿಳೆ ನಾಪತ್ತೆ
: ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲು
ಮೂಡುಬಿದಿರೆ: ಕಡಂದಲೆ ಗ್ರಾಮದ ವಿವಾಹಿತ ಮಹಿಳೆಯೋವ೯ರು ಮಕ್ಕಳನ್ನು ಶಾಲೆ ಬಿಡಲು ಹೋಗಿ ನಂತರ ಮನೆಗೆ ಮರಳಿ ಬಾರದೆ ನಾಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಮೂಡುಬಿದಿರೆ ಕಡಂದಲೆ ಗ್ರಾಮದ ಪೂಪಾಡಿಕಲ್ಲಿನ ಪವಿತ್ರಾ(29) ನಾಪತ್ತೆಯಾಗಿರುವ ಮಹಿಳೆ. 9 ವರ್ಷಗಳ ಹಿಂದೆ ಗಣೇಶ್ ಎಂಬವರನ್ನು ಮದುವೆಯಾಗಿದ್ದು, ಒಬ್ಬ ಮಗನಿದ್ದಾನೆ. ಈಕೆ ಬುಧವಾರ ಬೆಳಗ್ಗೆ ತನ್ನ ಮಗ ಹಾಗೂ ತಂಗಿಯ ಮಗನನ್ನು ಕಡಂದಲೆ ವಿದ್ಯಾಗಿರಿ ಶಾಲೆಗೆ ಬಿಡಲು ಹೋಗಿದ್ದು, ಬಳಿಕ ಮನೆಗೆ ಹಿಂದುರುಗಿಲ್ಲ. ಬೆಳಗ್ಗೆ 11.30ರ ವೇಳೆಗೆ ಆಕೆಯ ತಂಗಿ, ತಂದೆಗೆ ಕಾಲ್ ಮಾಡಿದ್ದು, ಅಕ್ಕನ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ತಿಳಿಸಿದ್ದಾಳೆ.
ಆಕೆ ಹಿಂತಿರುಗಿ ಬರುವಳೆಂದು ಮನೆಯವರು ಸಂಜೆಯವರೆಗೆ ಕಾದರೂ ಆಕೆಯ ಪತ್ತೆ ಇರಲಿಲ್ಲ. ಬಳಿಕ ಅಸುಪಾಸಿನಲ್ಲಿವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದರೂ, ಯಾವುದೇ ಸುಳಿವು ಸಿಗಲಿಲ್ಲ. ಗುರುವಾರ ಬೆಳಿಗ್ಗೆ ಪವಿತ್ರಾಳ ತಂದೆ ಕೇಶವ ಶೆಟ್ಟಿಗಾರ್ ಅವರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಹರೆ: 5.5 ಅಡಿ ಎತ್ತರ, ಕೋಲು ಮುಖ, ಸಪೂರ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ತುಳು ಕನ್ನಡ ಭಾಷೆ ಬಲ್ಲವರಾಗಿದ್ದಾರೆ. ನಾಪತ್ತೆಯಾಗುವ ಸಂದರ್ಭ ಕೇಸರಿ ಬಣ್ಣದ ಚೂಡಿದಾರ, ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ.
0 Comments