ನ. 15ರಿಂದ ಈ ವಷ೯ದ ಕಂಬಳ ಋತು ಆರಂಭ *ಜ. 24 ರಂದು ಮೂಡುಬಿದಿರೆ ಕಂಬಳ

ಜಾಹೀರಾತು/Advertisment
ಜಾಹೀರಾತು/Advertisment

 ನ. 15ರಿಂದ ಈ ವಷ೯ದ ಕಂಬಳ ಋತು ಆರಂಭ

*ಜ. 24 ರಂದು ಮೂಡುಬಿದಿರೆ ಕಂಬಳ

ಮೂಡುಬಿದಿರೆ : 2025-26 ನೇ ಸಾಲಿನ ಕಂಬಳ ಋತು ನವೆಂಬರ್ 15ರಂದು ಪಣಪಿಲ   ಕಂಬಳ ಮೂಲಕ ಆರಂಭಗೊಳ್ಳಲಿದ್ದು ಜ. 24 ಮತ್ತು 25ರಂದು ಮೂಡುಬಿದಿರೆಯ ಕೋಟಿ-ಚೆನ್ನಯ ಜೋಡುಕರೆ ಕಂಬಳ ನಡೆಯಲಿದೆ ಎಂದು ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

 ಅವರು ಮೂಡುಬಿದಿರೆ ಒಂಟಿಕಟ್ಟೆಯ ಸೃಷ್ಟಿ ಗಾಡ೯ನ್ ನಲ್ಲಿ ಭಾನುವಾರ  ನಡೆದ ದ. ಕ, ಉಡುಪಿ, ಕಾಸರಗೋಡು ಉಭಯ ಜಿಲ್ಲಾ ಕಂಬಳ ಸಮಿತಿ ಮತ್ತು ದ. ಕ, ಉಡುಪಿ ಕಂಬಳ ವ್ಯವಸ್ಥಾಪಕರ ಜಂಟಿ ಸಭೆಯಲ್ಲಿ ಕಂಬಳದ ಲೋಗೋವನ್ನು ಅನಾವರಣಗೊಳಿಸಿ ಅವಿಭಜಿತ ಜಿಲ್ಲೆಗಳಲ್ಲಿ ನಡೆಯುವ ಕಂಬಳಗಳ ದಿನಾಂಕವನ್ನು ನಿಗದಿ ಪಡಿಸಿ ಮಾತನಾಡಿದರು.


ರಾಜ್ಯ ಕಂಬಳ ಅಸೋಸಿಯೇಷನ್ ಮತ್ತು ಕೇಂದ್ರ ಸರಕಾರದಿಂದ ಕೂಡ ಕಂಬಳಕ್ಕೆ ವಿಶೇಷ ಮಾನ್ಯತೆ ನೀಡಲು ಕಂಬಳ ಫೆಡರೇಶನ್ ಆಫ್ ಇಂಡಿಯಾ ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ಮುಂದೆ  ಕೇಂದ್ರ ಕ್ರೀಡಾ ಪ್ರಾಧಿಕಾರದಲ್ಲಿ ಕಂಬಳಕ್ಕೆ ಮಾನ್ಯತೆ ನೀಡಲು ಪ್ರಯತ್ನಿಸಲಾಗುವುದು. 


ಕಂಬಳದ ಅನುದಾನದ ಸ೦ಹಿತೆಗೆ  ಕಾನೂನು ರೂಪಿಸಲು ಪ್ರಾಧಿಕಾರವು ವಿಶೇಷವಾಗಿ ಬೈಲಾವನ್ನು ರಚಿಸಿ ಸರಕಾರವು  ಮಾನ್ಯತೆ ನೀಡಿ  ಕಂಬಳವನ್ನು ಗುರುತಿಸಿದೆ.  ರಾಜ್ಯ ಸರ್ಕಾರ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಾನ್ಯ ಮುಖ್ಯಮಂತ್ರಿಗಳ ಆದೇಶದಂತೆ ಪ್ರಾಧಿಕಾರದಲ್ಲಿ ಮಾನ್ಯತೆಯನ್ನು ನೀಡಿ ಪುರಸ್ಕರಿಸಿರುವುದು ಎಲ್ಲಾ ಕಂಬಳ ಅಭಿಮಾನಿಗಳಿಗೆ ಸಂತೋಷವನ್ನು ತಂದಿರುತ್ತದೆ ಎಂದ ಅವರು ಕಂಬಳಕ್ಕೆ ನಮ್ಮ ಹಿರಿಯರ ಕೊಡುಗೆ ಅಪಾರವಾಗಿದ್ದು ಈ ಕಂಬಳವನ್ನು ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಗುರುತಿಸಿ ಬೆಳೆಸಲು ಎಲ್ಲರ  ಸಹಕಾರ ಅಗತ್ಯವಿದೆ ಎಂದರು.


 ಮೂಡುಬಿದಿರೆ ತಾಲೂಕಿನ ಪಣಪಿಲ ಕಂಬಳ ನ.15, 22-ಕೊಡಂಗೆ, 29-ಕಕ್ಕೆಪದವು, ಡಿಸೆಂಬರ್ 6-ಹೊಕ್ಕಾಡಿ, 7- ಬಳ್ಳಮಂಜ, 13-ಬಾರಾಡಿ, 20-ಮುಲ್ಕಿ, 27-ಮಂಗಳೂರು, ಜನವರಿ 3-ಮಿಯ್ಯಾರು, 10-ನರಿಂಗಾಣ, 17-ಅಡ್ವೆ, 24-ಮೂಡುಬಿದಿರೆ, 31-ಐಕಳ.  


  ಫೆಬ್ರವರಿ 7-ಪುತ್ತೂರು, 14-ಜೆಪ್ಪು. 21-ವಾಮಂಜೂರು, 28-ಎಮಾ೯ಳು, ಮಾಚ್೯  7 ಬಂಟ್ವಾಳ, 15-ಬಂಗಾಡಿ, 31-ವೇಣೂರು, 28-ಉಪ್ಪಿನಂಗಡಿ, ಏಪ್ರಿಲ್ 4 ಗುರುಪುರ, 11-ಬಳ್ಕುಂಜೆ, 18-ಹರೇಕಳ ಹಾಗೂ ಕೊನೆಯದಾಗಿ ಏ. 25ರಂದು ಬಡಗಬೆಟ್ಟು ಕಂಬಳ ನಡೆಯಲಿದೆ ಎಂದು ತಿಳಿಸಿದರು. 


ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷ ಶ್ರೀಕಾಂತ್ ಭಟ್, ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್, ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ,  ಜಿಲ್ಲಾ ಕಂಬಳ ಸಮಿತಿಯ ಕೋಶಾಧಿಕಾರಿ ಚಂದ್ರಹಾಸ್ ಸಾಧು ಸನಿಲ್,

ತೀರ್ಪುಗಾರರ ವಿಭಾಗದ ಸಂಚಾಲಕ  ವಿಜಯ ಕುಮಾರ್ ಕಂಗಿನಮನೆ,

 ಪಿ. ಆರ್ ಶೆಟ್ಟಿ, ಶಾಂತರಾಮ್ ಶೆಟ್ಟಿ,  ಜಿಲ್ಲಾ ಹಾಗೂ ಪದಾಧಿಕಾರಿಗಳು ಮತ್ತು ಎಲ್ಲಾ ಕಂಬಳದ ವ್ಯವಸ್ಥಾಪಕರು ಉಪಸ್ಥಿತರಿದ್ದರು.


ಕಾಯ೯ದಶಿ೯ ಲೋಕೇಶ್ ಶೆಟ್ಟಿ ಮುಚ್ಚೂರು ಕಾಯ೯ಕ್ರಮ ನಿರೂಪಿಸಿದರು.

Post a Comment

0 Comments