ಎರಡನೇ ಬಾರಿ ವೃತ್ತ ಏರಿ ಕುಳಿತ ಮಾನಸಿಕ ಅಸ್ವಸ್ಥೆ * ಸಮಸ್ಯೆ ಆಲಿಸಲು ಡಿಸಿ ಬರಲಿ ಎಂದಾಕೆ

ಜಾಹೀರಾತು/Advertisment
ಜಾಹೀರಾತು/Advertisment

 ಎರಡನೇ ಬಾರಿ ವೃತ್ತ ಏರಿ ಕುಳಿತ ಮಾನಸಿಕ ಅಸ್ವಸ್ಥೆ

* ಸಮಸ್ಯೆ ಆಲಿಸಲು ಡಿಸಿ ಬರಲಿ ಎಂದಾಕೆ

ಮೂಡುಬಿದಿರೆ: ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿರುವ ಮಹಿಳೆಯೋವ೯ರು ಖಾಸಗಿ ಬಸ್ ನಿಲ್ದಾಣದಲ್ಲಿರುವ ವೃತ್ತವನ್ನು ಏರಿ ಮೇಲೆ ಕುಳಿತು " ತನ್ನ ಸಮಸ್ಯೆಯನ್ನು ಆಲಿಸಲು ಡಿಸಿ ಬರಬೇಕೆಂದು" ಹಠ ಹಿಡಿದು ಕುಳಿತ ಘಟನೆ ಮೂಡುಬಿದಿರೆಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.


ತಾನು ಮೂಡುಬಿದಿರೆ ನಿವಾಸಿಯೆಂದು ಹೇಳುತ್ತಿರುವ ಈಕೆ ಬೆಳ್ತಂಗಡಿ ತಾಲೂಕಿನ ಪೆರಿಂಜೆಯವರು ಎಂದು ತಿಳಿದು ಬಂದಿದ್ದು ಮಹಿಳೆ ತನಗೆ ಮೂವರು ಮಕ್ಕಳಿದ್ದರೆ ಎಂದು ತಿಳಿಸಿದ್ದಾರೆ. ಪೊಲೀಸರು ಹಾಗೂ ಸಾರ್ವಜನಿಕರು ಅವರ ಬಳಿ ಮಾತನಾಡಿದಾಗ, `ನಿಮ್ಮಲ್ಲಿ ಮಾತಾಡುವುದಿಲ್ಲ, ನೇರ ಡಿಸಿ ಜೊತೆಗೆ ಮಾತನಾಡಬೇಕು. ನನ್ನ ಸಮಸ್ಯೆಯನ್ನು ಅವರ ಮುಂದೆ ಮಾತ್ರ ಹೇಳುತ್ತೇನೆ' ಎಂದು ಹಠ ತೊಟ್ಟಿದ್ದಾರೆ.

 ಈ ಮಹಿಳೆ ಎರಡು ದಿನಗಳ ಹಿಂದೆ ರಾತ್ರಿ ವೇಳೆ ಇದೇ ರೀತಿ ವೃತ್ತವನ್ನು ಏರಿ ಕುಳಿತಿದ್ದು ಆ ಸಂದಭ೯ ಮೂಡುಬಿದಿರೆ ಪೊಲೀಸರು ಕೆಳಗಿಳಿಸಿದ್ದಾರೆನ್ನಲಾಗಿದ್ದು ಇದೀಗ ಮತ್ತೆ ಎರಡನೇ ವೃತ್ತವನ್ನು ಏರಿ ಕುಳಿತಿದ್ದಾರೆನ್ನಲಾಗಿದೆ.

Post a Comment

0 Comments