ತೋಡಾರಿನಲ್ಲಿ ಮಹಿಳೆ ಆತ್ಮಹತ್ಯೆ : ಪ್ರಚೋದನೆ ನೀಡಿದ ಅಟೋ ಚಾಲಕನ ಮೇಲೆ ದೂರು


ಜಾಹೀರಾತು/Advertisment
ಜಾಹೀರಾತು/Advertisment

 ತೋಡಾರಿನಲ್ಲಿ ಮಹಿಳೆ ಆತ್ಮಹತ್ಯೆ : ಪ್ರಚೋದನೆ ನೀಡಿದ ಅಟೋ ಚಾಲಕನ ಮೇಲೆ ದೂರು

ಮೂಡುಬಿದಿರೆ : ಕೊಟ್ಟ ಹಣ ಮತ್ತು ಬಂಗಾರವನ್ನು ಮರಳಿಕೊಡುವಂತೆ ತನ್ನ ಪತ್ನಿ ಕೇಳಿದಾಗ ಉಡಾಫೆಯಾಗಿ ಮಾತನಾಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆಂದು ಆರೋಪಿಸಿ ಪತಿ ಪುತ್ತಿಗೆಯ ಆಟೋ ಚಾಲಕನ ವಿರುದ್ಧ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. 


ಘಟನೆಯ ಹಿನ್ನೆಲೆ : ತೋಡಾರು ಗ್ರಾಮದ ಏರ್ ಇಂಡಿಯಾ ಎಂಬ ಹೆಸರಿನ ಅಪಾಟ್ ೯ಮೆಂಟಿನಲ್ಲಿ ವಾಸಿಸುತ್ತಿದ್ದ ನವಾಝ್ ಎಂಬವರ ಪತ್ನಿ ಶಫ್ರೀನಾ ಬಾನು ಎಂಬವರಿಂದ ಪುತ್ತಿಗೆಯ ಆಟೋ ಚಾಲಕ ಅಶ್ರಫ್ ಎಂಬಾತ ಏಳು ತಿಂಗಳ ಹಿಂದೆ ರೂ 2 ಲಕ್ಷ ನಗದು ಮತ್ತು ರೂ. 3 ಲಕ್ಷ ಮೌಲ್ಯದ ಚಿನ್ನವನ್ನು ಪಡೆದುಕೊಂಡಿದ್ದನು. ಹಿಂತಿರುಗಿಸುವಂತೆ ಶಫ್ರೀನಾ ಕೇಳಿದಾಗ "ಇವತ್ತು ಕೊಡುವೆ-ನಾಳೆ ಕೊಡುವೆ" ಎಂದು ಹೇಳುತ್ತಾ ಬಂದಿದ್ದ ಎನ್ನಲಾಗಿದೆ. 


ಆ. 26ರಂದು ಖಂಡಿತವಾಗಿಯೂ ನೀಡುತ್ತೇನೆ ಎಂದು ಹೇಳಿದ್ದು, ಆ ದಿನ ಬೆಳಿಗ್ಗೆ 6 ಗಂಟೆಗೆ ಮಹಿಳೆ ಕರೆ ಮಾಡಿ ವಿಚಾರಿಸಿದ್ದು ಆಗ ಅಶ್ರಫ್ "ಒಂದೋ ನೀನು ನನಗೆ ಕಾಲಾವಕಾಶ ನೀಡಬೇಕು ಇಲ್ಲವಾದಲ್ಲಿ ನೀನು ನೀಡಿದ ಹಣ ಮತ್ತು  ಒಡವೆಗೆ ಏನು ಫ್ರೂಫ್ ಇದೆ" ಎಂದು ಉಡಾಫೆಯಾಗಿ ಮಾತನಾಡಿದ್ದ ಎನ್ನಲಾಗಿದೆ.

 ಈ ಕಾರಣದಿಂದಾಗಿ ಆ. 26ರಂದು 31ರ ಹರೆಯದ,  ಇಬ್ಬರು  ಮಕ್ಕಳ ತಾಯಿ ಶಫ್ರೀನಾ ಬಾನು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

 ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಆಟೋ ಚಾಲಕ ಅಶ್ರಫ್ ನೇ ಕಾರಣವೆಂದು ಪತಿ ನವಾಝ್  ಠಾಣೆಗೆ ದೂರು ನೀಡಿದ್ದು, ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ. ಜಿ. ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Post a Comment

0 Comments