ಇರುವೈಲು ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭ
ಮೂಡುಬಿದಿರೆ: ತಾಲೂಕಿನ ಇರುವೈಲು ಸರಕಾರಿ ಶಾಲೆಯಲ್ಲಿ ಶುಕ್ರವಾರ ಆಂಗ್ಲ ಮಾಧ್ಯಮ ತರಗತಿಯ ಪ್ರಾರಂಭೋತ್ಸವ ನಡೆಯಿತು.
ಪಂಚಾಯತ್ ಸದಸ್ಯರಾದ ರುಕ್ಮಿಣಿ, ಮಲ್ಲಿಕಾ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸುನೀಲ್ ಕುಮಾರ್ ಕಟ್ಟಣಿಗೆ ಮತ್ತು ಶಾಲಾ ಶಿಕ್ಷಕರು ದೀಪ ಬೆಳಗಿಸಿ ಆಂಗ್ಲ ಮಾಧ್ಯಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಂಗ್ಲ ಮಾಧ್ಯಮದ ಪಠ್ಯ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಫೆರ್ನಾಂಡಿಸ್ ಸ್ವಾಗತಿಸಿದರು.
ಶಿಕ್ಷಕಿ ಉಷಾ ಪ್ರಾಸ್ತಾವಿಕವಾಗಿ ಮಾತನಾಡಿ ದ.ಕ ಜಿಲ್ಲೆಯ 115 ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮಕ್ಕೆ ಸರಕಾರ ಆದೇಶ ನೀಡಿದ್ದು, ಮೂಡುಬಿದಿರೆ ತಾಲೂಕಿನ 15 ಶಾಲೆಗಳಿಗೆ ಅನುಮತಿ ಸಿಕ್ಕಿದೆ ಅವುಗಳಲ್ಲಿ ಇರುವೈಲು ಶಾಲೆಗೂ ಅನುಮತಿ ದೊರೆತಿದೆ ಎಂದರು .ಶಾಲಾ ಶಿಕ್ಷಕಿ ಅನುಪಮ ನಿರೂಪಿಸಿದರು. ಶ್ವೇತಾ ವಂದಿಸಿದರು.
0 Comments