ಯೋಗದಿಂದ ಜೀವನದಲ್ಲಿ ಬದಲಾವಣೆ ಸಾಧ್ಯ : ಸಂಸದ ಕ್ಯಾ. ಬ್ರಿಜೇಶ್ ಚೌಟ
ಮೂಡುಬಿದಿರೆ: ಆರೋಗ್ಯಕ್ಕೆ ಚೈತನ್ಯ ನೀಡುವ ಯೋಗದಿಂದ ಜೀವನದಲ್ಲಿ ಬದಲಾವಣೆ ತರಲು ಸಾಧ್ಯ. ಇಂದು ವಿಶ್ವದಾದ್ಯಂತ ಯೋಗವನ್ನು ಅಳವಡಿಸಿಕೊಳ್ಳಲು ಭಾರತ ನಾಯಕತ್ವ ವಹಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾಗಿ ಯೋಗ ವಿಶ್ವಾದ್ಯಂತ ಮಹತ್ವ ಪಡೆದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾ. ಬ್ರಿಜೇಶ್ ಚೌಟ ಅಭಿಪ್ರಾಯ ಪಟ್ಟರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವಿದ್ಯಾಭಾರತಿ ಹಾಗೂ ಪ್ರೇರಣ ಅನುದಾನಿತ ಹಿ ಪ್ರಾ ಶಾಲೆ ಕಡಲಕೆರೆ ಸಹಯೋಗದೊಂದಿಗೆ ಪ್ರೇರಣಾ ಶಾಲೆಯಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ಸಂಚಾಲಕ ಶಾಂತರಾಮ ಕುಡ್ವ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಶಾಲೆಯಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ನೀಡಲಾಗುತ್ತಿರುವ ಆದ್ಯತೆಯನ್ನು ತಿಳಿಸಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಟ್ರಷ್ಟಿ ವಿವೇಕ್ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಯೋಗ ಆತ್ಮ ಪರಮಾತ್ಮನೊಂದಿಗೆ ಸಮಾಗಮಗೊಳಿಸಲು ಸಾಧನವಾಗಿದೆ ಎಂದು ಹೇಳಿದರು.
ವಿದ್ಯಾಭಾರತಿ ಜಿಲ್ಲಾ ಪ್ರಮುಖ ಕರುಣಾಕರ್ ವೇದಿಕೆಯಲ್ಲಿದ್ದರು.
ಪ್ರೇರಣಾ ಶಾಲಾ ಟ್ರಸ್ಟ್ ಅಧ್ಯಕ್ಷ ರಾಜೇಶ್ ಬಂಗೇರ ಸ್ವಾಗತಿಸಿದರು.ಶಾಲಾ ಮುಖ್ಯ ಶಿಕ್ಷಕಿ ವತ್ಸಲ ರಾಜೇಶ್ ಧನ್ಯವಾದಗೈದರು. ಶಿಕ್ಷಕಿ ಸುಚಿತ್ರ ಕಾರ್ಯಕ್ರಮ ನಿರೂ ಪಿಸಿದರು.
0 Comments