ಕಲ್ಲಮುಂಡ್ಕೂರಿನಲ್ಲಿ ಮುಸುಕುಧಾರಿಗಳಿಂದ ದನ ಕಳ್ಳತನ
ಮೂಡುಬಿದಿರೆ : ರಸ್ತೆಯಲ್ಲಿ ಮಲಗಿರುವ ದನಗಳನ್ನು ಮುಸುಕುಧಾರಿ ವ್ಯಕ್ತಿಗಳು ಕದ್ದೋಯ್ದ ಘಟನೆ ಕಲ್ಲಮುಂಡ್ಕೂರಿನಲ್ಲಿ ನಡೆದಿರುವ ಬಗ್ಗೆ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.
ಕಲ್ಲಮುಂಡ್ಕೂರಿನ ಸರ್ವೋದಯ ಫ್ರೆಂಡ್ಸ್ ಕ್ಲಬ್ ಕಟ್ಟಡದ ಬಳಿ ಮಲಗಿದ್ದ ಬಲರಾಮ್ ಎಂಬವರ ಎರಡು ದನಗಳನ್ನು ಕಾರಿನಲ್ಲಿ ಬಂದ ಮುಸುಕುಧಾರಿಗಳು ಕಾರಿನಿಂದಿಳಿದು ಮಲಗಿದ್ದ ದನಗಳಿಗೆ ಏನೋ ತಿನ್ನಲು ನೀಡುತ್ತಾರೆ. ಬಳಿಕ ಆ ದನಗಳ ಕುತ್ತಿಗೆಗೆ ಹಗ್ಗ ಕಟ್ಟುತ್ತಾರೆ.ಬಳಿಕ ಕಾರಿಗೆ ಎತ್ತಿಹಾಕಿ ಕೊಂಡೊಯ್ಯುತ್ತಾರೆ.ಇದೆಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೂಡುಬಿದಿರೆ ಕಡೆಯಿಂದ ಹೋಗಿದ್ದ ಕಾರು ಮತ್ತೆ ಅದೇ ದಾರಿಯಾಗಿ ಹಿಂತಿರುಗಿದೆ ಎನ್ನಲಾಗಿದೆ.
ಈ ದನಕಳ್ಳತನದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಆರೋಪಿಗಳ ಪತ್ತೆಗೆ ಒತ್ತಾಯಗಳು ಕೇಳಿ ಬರುತ್ತಿದೆ.
0 Comments