ಸವೋ೯ದಯ ಫ್ರೆಂಡ್ಸ್ ಬೆದ್ರ ಇದರ 17ನೇ ವಷ೯ದ ಹುಲಿವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ

ಜಾಹೀರಾತು/Advertisment
ಜಾಹೀರಾತು/Advertisment

 ಸವೋ೯ದಯ ಫ್ರೆಂಡ್ಸ್ ಬೆದ್ರ ಇದರ 17ನೇ ವಷ೯ದ ಹುಲಿವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಡುಬಿದಿರೆ: ಇಲ್ಲಿನ ಸಾರ್ವಜನಿಕ ಶ್ರೀ ಗಣೋಶೋತ್ಸವದ ಪ್ರಯುಕ್ತ, ಸರ್ವೋದಯ ಫ್ರೆಂಡ್ಸ್ ಬೆದ್ರ (ರಿ) ಇದರ 17ನೇ ವರ್ಷದ ಹುಲಿವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಸಮಾಜ ಮಂದಿರದಲ್ಲಿ‌ ಸೋಮವಾರ ನಡೆಯಿತು.


 ಸರ್ವೋದಯ ಫ್ರೆಂಡ್ಸ್ ಅಧ್ಯಕ್ಷ ಗುರು ಒಂಟಿಕಟ್ಟೆ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ   ಗಣೇಶೋತ್ಸವದ ಉದ್ದೇಶವೇ ಯುವ ಜನರನ್ನು  ಸಂಘಟಿಸುವುದು. ಈ ನಿಟ್ಟಿನಲ್ಲಿ ಮೂಡುಬಿದಿರೆಯಲ್ಲಿ  ಭವಿಷ್ಯದಲ್ಲಿ ಗಣೇಶೋತ್ಸವದ ಮುಂದಾಳುತ್ವ ವಹಿಸಬೇಕಾದ ಯುವಜನರು ಒಟ್ಟಾಗಿ ಸಮಾಜಮುಖಿ ಸೇವಾ ಕಾರ್ಯ ಕೈಗೊಳ್ಳುವ ಮೂಲಕ ಆಧ್ಯಾತ್ಮಿಕ ಚಿಂತನೆಗೂ ಒತ್ತು ಕೊಡುತ್ತಿರುವುದು ಅಭಿನಂದನೀಯ' ಎಂದರು.


ಪುರಸಭಾ ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸರ್ವೋದಯ ಫ್ರೆಂಡ್ಸ್ ಇದರ ಗೌರವಾಧ್ಯಕ್ಷ ರಂಜಿತ್ ಪೂಜಾರಿ, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ಗೌತಮ್‌, ವಕೀಲೆ ಸುಚಿತಾ,  ಉಪಸ್ಥಿತರಿದ್ದರು.


ಅಕ್ಷಯ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ದಿವ್ಯವರ್ಮ ಜೈನ್ ವಂದಿಸಿದರು.

Post a Comment

0 Comments