ಸೆ. 1ರಂದು ಪುರಸಭಾ ಪೌರಕಾಮಿ೯ಕರು ರಜೆ
ಮೂಡುಬಿದಿರೆ : ಇಲ್ಲಿನ ಪುರಸಭೆಯ ಪೌರ ಕಾಮಿ೯ಕರು ಮತ್ತು ತ್ಯಾಜ್ಯ ವಿಲೇವಾರಿ ವಾಹನಗಳ ಚಾಲಕರು ಸೆ. 1ರಂದು ಸ್ವಚ್ಛತಾ ಕಾಯ೯ಕ್ಕೆ ರಜೆ ಮಾಡಲಿದ್ದಾರೆಂದು ಮೂಡುಬಿದಿರೆ ವಲಯದ ಪೌರ ಕಾಮಿ೯ಕರ ಸಂಘವು ಪ್ರಕಟನೆಯಲ್ಲಿ ತಿಳಿಸಿದೆ.
ಆ. 31 ಭಾನುವಾರ ಮೂಡುಬಿದಿರೆ ಗಣಪತಿಯ ವಿಸಜ೯ನಾ ಮೆರವಣಿಗೆ ಇರುವುದರಿಂದ ಆ ದಿನ ಪೇಟೆಯಲ್ಲಿ ಕಸ, ತ್ಯಾಜ್ಯಗಳು ರಸ್ತೆಯಲ್ಲಿ ಬೀಳುತ್ತದೆ ಅದು ಮರುದಿನ ಬೆಳಿಗ್ಗೆ ಸಾವ೯ಜನಿಕರು ನೋಡುವಾಗ ಅಸಹ್ಯವಾಗಿ ಕಾಣುತ್ತದೆ. ಅಲ್ಲದೆ ಸಾವ೯ಜನಿಕರು ಕಸಗಳನ್ನು ಹಾಕಲು ಪುರಸಭೆಯು ಅಲ್ಲಲ್ಲಿ ಕಂಬಗಳಲ್ಲಿ ಗೋಣಿ ಚೀಲಗಳನ್ನು ಕಟ್ಟಿ ಹಾಕಲಾಗುತ್ತಿದ್ದು ಇದರಲ್ಲಿಯೂ ಕಸ ತುಂಬಿರುತ್ತದೆ ಆದ್ದರಿಂದ ಅದನ್ನು ರಾತ್ರಿಯೇ ವಿಲೇವಾರಿ ಮಾಡಿ ಮೂಡುಬಿದಿರೆ ಪೇಟೆಯನ್ನು ಸ್ವಚ್ಛವಾಗಿ ಕಾಣುವಂತೆ ಮಾಡುವ ನಿಟ್ಟಿನಲ್ಲಿ ಪೌರಕಾಮಿ೯ಕರು ರಜಾ ದಿನವಾಗಿರುವ ಭಾನುವಾರದಂದು ಪೇಟೆಯಲ್ಲಿ ಮಧ್ಯರಾತ್ರಿ ವರೆಗೆ ಸ್ವಚ್ಛತಾ ಕಾಯ೯ದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.
ಆದ್ದರಿಂದ ಸೋಮವಾರದಂದು ಪೌರ ಕಾಮಿ೯ಕರು ಕತ೯ವ್ಯಕ್ಕೆ ರಜೆ ಮಾಡುವುದೆಂದು ತೀಮಾ೯ನಿಸಿದ್ದಾರೆ.
0 Comments