62ನೇ ವಷ೯ದ ಮೂಡುಬಿದಿರೆಯ ಗಣೇಶೋತ್ಸವ ಸಮಾಪ್ತಿ


ಜಾಹೀರಾತು/Advertisment
ಜಾಹೀರಾತು/Advertisment

 62ನೇ ವಷ೯ದ ಮೂಡುಬಿದಿರೆಯ ಗಣೇಶೋತ್ಸವ ಸಮಾಪ್ತಿ 

* ಇದೇ ಮೊದಲ ಬಾರಿಗೆ ಶೋಭಾಯಾತ್ರೆಯ ಮಧ್ಯೆಯಲ್ಲಿ ಸಾಗಿದ ಗಣಪ


ಮೂಡುಬಿದಿರೆ: ಇಲ್ಲಿನ ಸಾವ೯ಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ವತಿಯಿಂದ ಸಮಾಜ ಮಂದಿರದಲ್ಲಿ 5 ದಿಗಳ ಕಾಲ ಪೂಜಿಸಲ್ಪಟ್ಟ 62ನೇ ವಷ೯ದ ಗಣೇಶೋತ್ಸವವು ಭಾನುವಾರ ಸಂಜೆ ವಿವಿಧ ಟ್ಯಾಬ್ಲೋಗಳೊಂದಿಗೆ ನಡೆದ ಶೋಭಾಯಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಗಣಪತಿಯು ಟ್ಯಾಬ್ಲೋಗಳ ಮಧ್ಯದಲ್ಲಿ ಸಾಗುವ ಮೂಲಕ ಗಮನ ಸೆಳೆಯಿತು.

 ಕಳೆದ 61 ವಷ೯ಗಳಲ್ಲಿ ನಡೆದ ಗಣೇಶೋತ್ಸವದ ವಿಸಜ೯ನಾ ಮೆರವಣಿಗೆಯಲ್ಲಿ ಮೊದಲಿಗೆ ವಿವಿಧ ಸಾಂಸ್ಕೃತಿಕ ತಂಡಗಳು, ಹುಲಿ ವೇಷಗಳ ತಂಡಗಳು, ಚೆಂಡೆ ಕುಣಿತ, ಭಜನೆ ಕುಣಿತದ ತಂಡಗಳು ಮತ್ತು ಟ್ಯಾಬ್ಲೋಗಳ ತಂಡಗಳು ಸಾಗಿದ ನಂತರವೇ ಕೊನೆಯದಾಗಿ ಗಣಪತಿಯ ಸಾಗುತ್ತಿತ್ತು ಆದರೆ ಈ ಬಾರಿ ವಿವಿಧ ರೀತಿಯ ಐದಾರು ಟ್ಯಾಬ್ಲೋಗಳು ಸಾಗಿದ ತಕ್ಷಣ ಮಧ್ಯದಲ್ಲಿಯೇ ಗಣಪತಿಯು ಸಾಗುವ ಮೂಲಕ ಅಚ್ಚರಿ ಮೂಡಿಸಿತು. 



ಗಣೇಶೋತ್ಸವದ ವಿಸಜ೯ನಾ ಮೆರವಣಿಗೆಯಲ್ಲಿ ಕೊರಗಪ್ಪ ಟೈಗರ್ಸ್, ಸರ್ವೋದಯ ಫ್ರೆಂಡ್ಸ್ ಬೆದ್ರ, ಪವರ್ ಫ್ರೆಂಡ್ಸ್ ಹಾಗೂ 

ಬೆದ್ರ ಫ್ರೆಂಡ್ಸ್ ನ ಹುಲಿವೇಷದ ತಂಡಗಳು ಗಮನ ಸೆಳೆದವು.

ಸುಪ್ರಭಾತ ವಾಹನದೊಂದಿಗೆ ಆರಂಭಗೊಂಡ ಮೆರವಣಿಗೆಯಲ್ಲಿ

 ತಾಲೀಮ್, ನೇತಾಜಿ ಬ್ರಿಗೇಡ್ ತಂಡ, ಜೈ ಭೀಮ್,

 ತ್ರಿಶೂಲ್ ಫ್ರೆಂಡ್ಸ್, 

 ಮೂಡುಬಿದಿರೆ ಇಲೆವೆನ್ ಕ್ರಿಕೆಟರ್ಸ್,

 ನಮನ ಫ್ರೆಂಡ್ಸ್

 ಪುತ್ತಿಗೆ, ಫ್ರೆಂಡ್ಸ್ ಪುತ್ತಿಗೆ,

 ಲಾಡಿ ಬಾಯ್ಸ್,

 ದೊಡ್ಮನೆ ಫ್ರೆಂಡ್ಸ್ ಬೆದ್ರ, 

 ಮಾರಿಗುಡಿ ಫ್ರೆಂಡ್ಸ್ ಮೂಡುಬಿದಿರೆ,

 ಕೋಟೆ ಬಾಗಿಲು ಫ್ರೆಂಡ್ಸ್, ಪೃಥ್ವಿ ಡೆವಲಪರ್ಸ್ ಹಾಗೂ

 ನ್ಯೂ ರವಿ ಇಂಡಸ್ಟ್ರೀಸ್ ಮೂಡುಬಿದಿರೆ ತಂಡಗಳ ಟ್ಯಾಬ್ಲೋಗಳು ಸಾವ೯ಜನಿಕರ ಮನ ಸೆಳೆದವು.

 ಇಂದು ಮಧ್ಯರಾತ್ರಿ ವೇಳೆಗೆ ಗಣಪತಿ ವಿಗ್ರಹವು ಆಲಂಗಾರು ದೇವಸ್ಥಾನದ ಮಾನಸ ಸರೋವರದಲ್ಲಿ ಜಲ ಸ್ತಂಭನಗೊಳ್ಳಲಿದೆ.

  *ಈ ಬಾರಿಯ ಮೆರವಣಿಗೆ ಯಲ್ಲಿಲ್ಲ ಕುಣಿತ ಭಜನಾ ತಂಡಗಳು* 

   ಹುಲಿವೇಷ ಕುಣಿತ, ಚೆಂಡೆ ಕುಣಿತಗಳು ಶೋಭಾಯಾತ್ರೆಯಲ್ಲಿ ಮೆರಗು ನೀಡಿದರೂ ಕುಣಿತ ಭಜನೆಯ ತಂಡಗಳು ಈ ವಷ೯ದ ಮೆರವಣಿಗೆಯಲ್ಲಿ ಇಲ್ಲದಿರುವುದರಿಂದ ಭಜನೆ ಪ್ರಿಯರಿಗೆ ನಿರಾಸೆಯಾಗಿದೆ.

 

ಕುಣಿತ ಭಜನೆ ಮಾಡುವವರಿಗೆ ಸೌಂಡ್ಸ್ ಕಡಿಮೆಯಾದರೆ ತೊಂದರೆಯಾಗಬಹುದೆನ್ನುವ ನಿಟ್ಟಿನಲ್ಲಿ ಮತ್ತು ಪೊಲೀಸ್ ಇಲಾಖೆಯು ಸಮಯದ ಪರಿಮಿತಿಯನ್ನು ನೀಡಿರುವುದರಿಂದ ಮೆರವಣಿಗೆಯನ್ನು ಬೇಗ ಮುಗಿಸುವ ನಿಟ್ಟಿನಲ್ಲಿ ಕುಣಿತ ಭಜನೆಯ ತಂಡಗಳಿಗೆ ಅವಕಾಶ ನೀಡಿಲ್ಲವೆಂದು ತಿಳಿದು ಬಂದಿದೆ.

-----------------

 ಈ ಬಾರಿಯ ಗಣೇಶನಿಗೆ ಅಧ್ಯಕ್ಷರೇ ಚಾಲಕ..

 ಕಳೆದ ಹಲವು ವಷ೯ಗಳಿಂದ ಸಮಿತಿಯ ಕಾಯ೯ದಶಿ೯ಯಾಗಿದ್ದ ನಾರಾಯಣ ಪಿ. ಎಂ. ಅವರು ಗಣಪತಿಯನ್ನು ವಿಸಜಿ೯ಸಲು ಸಾಗಿಸುವ ವಾಹನಕ್ಕೆ ಚಾಲಕರಾಗಿದ್ದರು ಈ ವಷ೯ವು ಅವರೆ ವಾಹನವನ್ನು ಚಲಾಯಿಸಿದ್ದು ಆದರೆ ಅವರು ಈ ವಷ೯ದ ಗಣೇಶೋತ್ಸವದ ಅಧ್ಯಕ್ಷರಾಗಿ ಗಣಪತಿಯ ವಾಹನಕ್ಕೆ ಚಾಲಕರಾಗಿದ್ದರು.

------------------

 *ಉತ್ತಮವಾಗಿ ಟ್ರಾಫಿಕ್ ನಿಭಾಯಿಸಿದ ಇನ್ಸ್ ಪೆಕ್ಟರ್ ಸಂದೇಶ್ ಪಿ. ಜಿ* 

  ಮೂಡುಬಿದಿರೆಯಲ್ಲಿ ಸಾವ೯ಜನಿಕವಾಗಿ ಅತೀ ವಿಜೃಂಭಣೆಯಿಂದ ಹಾಗೂ ಸೌಹಾರ್ದತೆಯೊಂದಿಗೆ ನಡಯುವ ಹಬ್ಬಗಳೆಂದರೆ ಅದು ಮೊಸರು ಕುಡಿಕೆ ಉತ್ಸವ ಮತ್ತು ಸಾವ೯ಜನಿಕ ಗಣೇಶೋತ್ಸವ.

 ಈ ಎರಡೂ ಹಬ್ಬಗಳಲ್ಲಿಯೂ ಮೂಡುಬಿದಿರೆಯು ಸಾವಿರಾರು ಜನರು ಮತ್ತು ವಾಹನಗಳಿಂದ ತುಂಬಿ ಎದುರಾಗುವ ಸಮಸ್ಯೆಯೆಂದರೆ ಅದು ಟ್ರಾಫಿಕ್ ಸಮಸ್ಯೆ ಆದರೆ ಕಳೆದ ಎರಡು ವಷ೯ಗಳಲ್ಲಿ ಈ ಹಬ್ಬಗಳ ಸಂದಭ೯ದಲ್ಲಿ ಮೂಡುಬಿದಿರೆಯ ಪೊಲೀಸ್ ವೃತ್ತ ನಿರೀಕ್ಷಕರಾಗಿರುವ ಸಂದೇಶ್ ಪಿ. ಜಿ ಅವರು ತನ್ನ ಸಿಬಂಧಿಗಳ ಜತೆಗೂಡಿ ಟ್ರಾಫಿಕ್ ಸಮಸ್ಯೆಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ಪೇಟೆಯಲ್ಲಿ ಬೆಳಿಗ್ಗೆಯಿಂದಲೇ ಆರಂಭಗೊಂಡಿದ್ದ ವಿವಿಧ ತಂಡಗಳ ಹುಲಿವೇಷದ ಕುಣಿತದಿಂದಾಗಿ ಪೇಟೆ ಜನರಿಂದ ತುಂಬಿಕೊಂಡಿತ್ತು. ಇದನ್ನು ಅರಿತಿದ್ದ ಸಂದೇಶ್ ಅವರು ಹಿಂದಿನ ದಿನವೇ ಸಾವ೯ಜನಿಕರು ತಮ್ಮ ವಾಹನವನ್ನು ಪೇಟೆಯಲ್ಲಿ ಪಾಕಿ೯ಂಗ್ ಮಾಡದಂತೆ ಪ್ರಕಟನೆ ನೀಡಿದ್ದರು ಇದು ಕೂಡಾ ಟ್ರಾಫಿಕ್ ಸಮಸ್ಯೆ ಯನ್ನು ನಿಭಾಯಿಸಲು ಅವರಿಗೆ ಸಹಕರಿಸಿ ಯಶಸ್ವೀಗೊಳಿಸಿತು.

---------------------

Post a Comment

0 Comments