ಸಾಯೀ ಮಾನಾ೯ಡ್ ನಿಂದ 75ನೇ ಸೇವಾ ಯೋಜನೆ ಹಸ್ತಾಂತರ


ಜಾಹೀರಾತು/Advertisment
ಜಾಹೀರಾತು/Advertisment

 ಸಾಯೀ ಮಾನಾ೯ಡ್ ನಿಂದ 75ನೇ ಸೇವಾ ಯೋಜನೆ ಹಸ್ತಾಂತರ

ಮೂಡುಬಿದಿರೆ : ಸಾಯೀ ಮಾರ್ನಾಡ್ ಸೇವಾ ಸಂಘ ಟ್ರಸ್ಟ್( ರಿ.)ಅಮನಬೆಟ್ಟು, ಪಡುಮಾರ್ನಾಡ್.

ಸೇವಾ ಸಂಘ ದ 75ನೇ ಸೇವಾ ಯೋಜನೆಯ ಆಗಸ್ಟ್ ತಿಂಗಳ 3ನೇ ಯೋಜನೆಯನ್ನು ಅನಾರೋಗ್ಯವನ್ನು ಹೊಂದಿರುವ ಕಾರ್ಕಳ ತಾಲೂಕಿನ ಈದು -ನಾರಾವಿ ಪರಿಸರದ ಶ್ರವಣ್ ಎಂಬವರ ಚಿಕಿತ್ಸೆಗೆ ನೆರವು ನೀಡಲಾಗಿದೆ.


ಈದು-ನಾರಾವಿ ಪರಿಸರದ ಲತಾ ಹಾಗೂ ಸದಾನಂದ ದಂಪತಿಯ ಪುತ್ರ ಶ್ರವಣ್ ಮನೆಗೆ ಆಧಾರವಾಗಿದ್ದರು. 2025ರ ಜುಲೈ 18ರಂದು ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಶ್ರವಣ್ ಅವರು ಗಂಭೀರ ಗಾಯಗೊಂಡು ಮಂಗಳೂರಿನ ಎ. ಜೆ.ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಶಸ್ತ್ರ ಚಿಕಿತ್ಸೆಗೆ ಸುಮಾರು 5.ಲಕ್ಷ ಹಣ ದ ಅವಶ್ಯಕತೆ ಇದ್ದು, ಬಡತನದಲ್ಲಿರುವ ಕುಟುಂಬಕ್ಕೆ ಚಿಕಿತ್ಸೆಗೆ ಹಣ ಹೊಂದಿಸಲು ಕಷ್ಟಸಾಧ್ಯವಾಗಿರುವುದನ್ನು ಅರಿತ ಸಾಯೀ ಮಾನಾ೯ಡ್ ಸೇವಾ ಸಂಘವು ಆ. 25ರಂದು ರೂ.10,000ದ ಚೆಕ್ಕ್ ಅನ್ನು ಹಸ್ತಾಂತರಿಸಿದೆ.

Post a Comment

0 Comments