ಮೂಡುಬಿದಿರೆ : ಲಯನ್ಸ್ ಕ್ಲಬ್ ನ ಸುವಣ೯ ಮಹೋತ್ಸವದ ಪದಾಧಿಕಾರಿಗಳ ಪದಗ್ರಹಣ
ಮೂಡುಬಿದಿರೆ: ಲಯನ್ಸ್ ಕ್ಲಬ್ ಮೂಡುಬಿದಿರೆ ಇದರ ಸುವರ್ಣ ಮಹೋತ್ಸವ ವರ್ಷದ ಅಧ್ಯಕ್ಷ ಪದಾಧಿಕಾರಿಗಳ ಹಾಗೂ ಲಿಯೋ ಕ್ಲಬ್ ಅಧ್ಯಕ್ಷ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಗುರುವಾರ ಸಂಜೆ ಪಂಚರತ್ನ ಹೋಟೆಲ್ ನ ಇಂಟರ್‌ನ್ಯಾಷನಲ್ ಸಭಾಭವನದಲ್ಲಿ ನಡೆಯಿತು.
ಲಯನ್ಸ್ ಜಿಲ್ಲೆ 317ಡಿ ಯ ಪೂರ್ವ ರಾಜ್ಯಪಾಲ ಹಾಗೂ ಲಯನ್ಸ್ ಬಹು ಜಿಲ್ಲಾ ಪೂರ್ವ ಸಭಾಪತಿ ವಸಂತಕುವಕಾರ್ ಶೆಟ್ಟಿ ಅವರು ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಕಣಜಾರು ಮತ್ತು ಲಿಯೋ ಕ್ಲಬ್ ನ ಅಧ್ಯಕ್ಷ ಪ್ರಖ್ಯಾತ್ ಹೆಗ್ಡೆ ಹಾಗೂ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿ ಒಂದು ಕ್ಲಬ್ ಉತ್ತಮ ರೀತಿಯಲ್ಲಿ ತೊಡಗಿಸಿ ಕೊಳ್ಳುವುದೆಂದರೆ ಅದು ಸದಸ್ಯರ ಒಗ್ಗಟ್ಟಿನ ಪಲವಾಗಿರುತ್ತದೆ. ಕ್ಲಬ್‌ನ ದೀರ್ಘ ಬಾಳ್ವಿಕೆ ಸದಸ್ಯರಲ್ಲಿರುವ ಸೌಜನ್ಯತೆ, ಪರಸ್ಪರ ಸಹಕರಿಸುವ ಮನೋಭಾವ ಮತ್ತು ಕ್ಲಬ್ಬಿನ ಪಾರದರ್ಶಕತೆಯನ್ನು ತೋರಿಸು ಇದೆ ಎಂದರು.
ನೂತನ ಅಧ್ಯಕ್ಷ ಲ. ಶಿವಪ್ರಸಾದ್ ಹೆಗ್ಡೆ ಅವರು ಮಾತನಾಡಿ ಲಯನ್ಸ್ ಪಾರ್ಕ್ ನಲ್ಲಿ ಬಯಲು ರಂಗಮಂದಿರ ನಿರ್ಮಾಣ ಈ ವರ್ಷದ ಮೊದಲ ಆಧ್ಯತೆಯಾಗಿದ್ದು ಈ ಕಾರ್ಯಕ್ಕೆ ಕ್ಲಬ್‌ನ ಎಲ್ಲಾ ಸದಸ್ಯರ ಸಹಕಾರ ಕೋರಿದರು.
ಪೂರ್ವ ರಾಜ್ಯಪಾಲ ಲ. ಮೆಲ್ವಿನ್ ಡಿಸೋಜ, ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷ ಲ, ವೆಂಕಟೇಶ ಹೆಬ್ಬಾರ್. ನೂತನ ಪ್ರಾಂತೀಯ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ.. ವಲಯಾಧ್ಯಕ್ಷ ಜೊಸ್ಸಿ ಮಿನೇಜಸ್ ಅವರು ಶುಭಾಶಂಸನೆಗೈದರು.
ನಿರ್ಗಮನ ಅಧ್ಯಕ್ಷ ೮. ಬೊನವೆಂಚರ್ ಮಿನೇಜಸ್ ಅವರು ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ತುಂಬು ಹೃದಯದಿಂದ ಸಹಕಾರ ನೀಡಿರುವ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಸೇವಾ ಚಟುವಟಿಕೆಗಳ ಅಂಗವಾಗಿ ಮೂಡು ಬಿದಿರೆ ಟೌನ್ ವ್ಯಾಪ್ತಿಯ ಕನ್ನಡ ಮಾಧ್ಯಮ ಶಾಲೆಯಲ್ಲಿ ಖಖವಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಹೋಲಿ ರೋಸರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಉಜ್ವಲ, ಬಾಬು
ರಾಜೇಂದ್ರ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕ್ರಿಶಾಲ, ಪ್ರಾಂತ್ಯ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ತಿಲಕ ಹಾಗೂ ಜೈನ್ ಪ್ರೌಢಶಾಲೆಯ ವಿದ್ಯಾರ್ಥಿನಿ ಚೈತ್ರ ನಗದು ಪುರಸ್ಕಾರ ಸಹಿತ ಸನ್ಮಾನಿಸಲಾಯಿತು. ಆಳ್ವಾಸ್ ವಿದ್ಯಾ ಸಂಸ್ಥೆಯ ಎರಡನೇ ವರ್ಷದ ಬಿಎಸ್ ಪಡಿಎ ಓದುತ್ತಿರುವ ಕು. ಶ್ರಿಯಾ ಅವರಿಗೆ ಶಿವಪ್ರಸಾದ್ ಹೆಗ್ಡೆ ಪ್ರಾಯೋಜಕತ್ವದ ವಿದ್ಯಾರ್ಥಿ ಸಹಾಯ ಧನ, ಜೈನ್ ಪಿ.ಯು. ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಶ್ರಾವ್ಯಳಿಗೆ ಲ. ರತ್ನಾಕರ್ ಹೆಗ್ಡೆ ಪ್ರಯೋಜಕತ್ವದ ರೂ. 12,000 ವಿದ್ಯಾರ್ಥಿ ಸಹಾಯಧನ ವಿತರಿಸಲಾಯಿತು. ಪಾಲಡ್ಕ ಶಾಲೆಯ ಶಿಕ್ಷಕಿಗೆ ಲ. ಬೊನವೆಂಚರ್ ಮಿನೇಜಸ್, ಲ, ಆಂಡ್ರೂ ಡಿಸೋಜಾ, ವಿನೋದ್ ಡೇಸಾ ಪ್ರಾಯೋಜಕತ್ವದ ಮಾಸಿಕ ಗೌರವ ಧನ ರೂ. 18,000 ಮತ್ತು ಕೋಟೆ ಬಾಗಿಲು ಸರ್ಕಾರಿ ಶಾಲೆಯ ಶಿಕ್ಷಕಿಗೆ ಲ. ಬೋನವೆಂಚರ್ ಮಿನೇಜಸ್ ಪ್ರಾಯೋಜಕತ್ವದ ಮಾಸಿಕ ಗೌರವ ಧನ ರೂ 10,000 ವಿತರಿಸಲಾಯಿತು. ಕ್ಯಾನ್ಸರ್ ಪೀಡಿತ ರೋಗಿಗೆ ಚಿಕಿತ್ಸೆಗಾಗಿ ಲ. ಬೊನವೆಂಚರ್ ಮಿನೇಜೆಸ್ ಪ್ರಾಯೋಜಿಸಿರುವರೂ.15.000 ಸಹಾಯ ಹಸ್ತ ವಿತರಿಸಲಾಯಿತು. ಆಲಂಗಾರಿನ ಮೌಂಟ್ ರೋಸರಿ ವೃದ್ಧಾಶ್ರಮದ ಮಹಿಳಾ ವಿಭಾಗದ ಕಟ್ಟಡ ನಿರ್ಮಾಣಕ್ಕಾಗಿ ಲ. ವೆಂಕಟೇಶ್ ಪ್ರಭು ಪ್ರಾಯೋಜಿಸಿರುವ ರೂ. ಒಂದು ಲಕ್ಷ ಧನಸಹಾಯ, ಮತ್ತು ಲ. ಜೋಸ್ಸಿ ಮಿನೇಜಸ್ ಪ್ರಾಯೋಜಿಸಿರುವ ರೂ. 50 ಸಾವಿರ ಧನಸಹಾಯವನ್ನು ವೃದ್ಧಾಶ್ರಮಕ್ಕೆ ಹಸ್ತಾಂತರಿಸಲಾಯಿತು.
ಕ್ಲಬ್ ಪ್ರಥಮ ಮಹಿಳೆ ಕಾರ್ಯದರ್ಶಿಗಳಾದ ವಿನೋದ್ ಡೇಸಾ, ಓಸ್ವಾಲ್ಸ್ ಡಿಕೋಸ್ತ, ಹರೀಶ್ ತಂತ್ರಿ, ಖಜಾಂಚಿ ಪ್ರಶಾಂತ್ ಶೆಟ್ಟಿ, ಲಿಯೋಕ್ಲಬ್ ಅಧ್ಯಕ್ಷ ಪ್ರಖ್ಯಾತ್ ಹೆಗ್ಡೆ, ಪದಾಧಿಕಾರಿಗಳಾದ ಸ್ವಯಂ ಪೂಜಾರಿ, ಶಶಾಂಕ್, ಅಡೆಲ್ ಪ್ರಿನ್ಸಿಟಾ ಮಿನೇಜಸ್ ಮತ್ತಿತರರು ಶೋಭಾ ಎಸ್. ಹೆಗ್ಡೆ, ಉಪಸ್ಥಿತರಿದ್ದರು.
ಪದಗ್ರಹಣ ಅಧಿಕಾರಿ ಲ. ವಸಂತ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪಿಯುಸಿ ಪರೀಕ್ಷೆಯಲ್ಲಿ ಅಂತೆಯೇ ರಾಜ್ಯ, ರಾಷ್ಟ್ರ ಮಟ್ಟದ ಪರೀಕ್ಷೆಗಳಲ್ಲಿ ಅಪ್ರತಿಮ ಸಾಧನೆ ಮಾಡಿರುವ ಎಕ್ಸಲೆಂಟ್ ಪಿ.ಯು. ಕಾಲೇಜಿನ ಶಿಶಿರ್ ಎಚ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು."
ಸುಕೇಶ್ ಶೆಟ್ಟಿ ಎದಮೇರು ಮತ್ತು ವಿನಯ ಕುಮಾರ್ ಶೆಟ್ಟಿ ನೂತನ ಸದಸ್ಯರಾಗಿ ಕ್ಲಬ್‌ಗೆ ಸೇರ್ಪಡೆಗೊಂಡರು. ಮಾರ್ಕ್ ಮೆಂಡೋನ್ಸಾ ನೂತನ ಸದಸ್ಯರನ್ನು ಸಭೆಗೆ ಪರಿಚಯಿಸಿದರು. ನೂತನ ಲಯನ್ಸ್ ಪದಾಧಿಕಾರಿಗಳನ್ನು ವಲೇರಿಯನ್ ಪದಾಧಿಕಾರಿಗಳನ್ನು ಆಡೆಲ್ ಪ್ರಿನ್ಸಿಟಾ ಮಿನೇಜಸ್ ಸಭೆಗೆ ಪರಿಚಯಿಸಿದರು. ವಿನೋದ್ ಡೇಸಾ ಸನ್ಮಾನ ಪತ್ರ ವಾಚಿಸಿದರು. ವಿನೋದ್ ಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಓಸ್ವಾಲ್ ಡಿಕೋಸ್ತ ವಂದಿಸಿದರು.
0 Comments