ಇರುವೈಲಿನಲ್ಲಿ ಇಸ್ಪೀಟ್ ಅಡ್ಡೆಗೆ ದಾಳಿ : ಏಳು ಮಂದಿಯ ಬಂಧನ


ಜಾಹೀರಾತು/Advertisment
ಜಾಹೀರಾತು/Advertisment

 ಇರುವೈಲಿನಲ್ಲಿ ಇಸ್ಪೀಟ್ ಅಡ್ಡೆಗೆ ದಾಳಿ : ಏಳು ಮಂದಿಯ ಬಂಧನ

ಮೂಡುಬಿದಿರೆ : ತಾಲೂಕಿನ ಇರುವೈಲು ಗ್ರಾ. ಪಂ. ವ್ಯಾಪ್ತಿಯ ಕೋರಿಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಇಸ್ಪೀಟು ಅಡ್ಡೆಗೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ನೇತೃತ್ವದ ಪೊಲೀಸರ ತಂಡವು ದಾಳಿ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದಾರೆ. 


ಅಕ್ಬರ್,ಸಂತೋಷ್,ಪ್ರಶಾಂತ್,ಮಹಾಬಲ ಪೂಜಾರಿ,ಪ್ರಜ್ವಲ್,ಗಿರೀಶ್, ರಾಜೇಶ್ ಬಂಧಿತರು.

ಗಣೇಶ್, ಶ್ರೀನಾಥ್,ದಿನೇಶ್ ಕೆಂಪುಗುಡ್ಡೆ,ಕೇಶವ ಯಾನೆ ಅಪ್ಪು ಹಾಗೂ  ಓಡಿ ತಪ್ಪಿಸಿಕೊಂಡಿದ್ದಾರೆ.


ಆರೋಪಿಗಳಿಂದ 10,100 ನಗದು, ಎರಡು ದ್ವಿಚಕ್ರ ವಾಹನಗಳು , 52 ಇಸ್ಪೀಟು ಎಲೆಗಳು ಹಾಗೂ ಎರಡು ಮೇಣದ ಬತ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

 ದಾಳಿಯಲ್ಲಿ ಸಿಬ್ಬಂದಿಗಳಾದ ರಾಜೇಶ್,ನಾಗರಾಜ್, ಸುರೇಶ್,ವೆಂಕಟೇಶ್, ಚಂದ್ರಶೇಖರ ಹಾಗೂ ಚಾಲಕ ಉಮೇಶ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Post a Comment

0 Comments