ಮೂಡುಬಿದಿರೆಯಲ್ಲಿ ಜು. 19ರಂದು "ಅನನಾಸು ಮತ್ತು ಡ್ರಾಗಾನ್ ಹಣ್ಣುಗಳ ಉಪ ಉತ್ಪನ್ನ ಘಟಕ" ಸ್ಥಾಪನೆ ಬಗ್ಗೆ ವಿಚಾರ ವಿನಿಮಯ
ಮೂಡುಬಿದಿರೆ: ಕೃಷಿ ವಿಚಾರ ವಿನಿಮಯ ಕೇಂದ್ರ, ಸಮಾಜ ಮಂದಿರ ಮೂಡುಬಿದಿರೆ ಮತ್ತು ರೈತಜನ್ಯ ಫಾಮ೯ರ್ ಪ್ರೊಡ್ಯುಸರ್ ಕಂಪನಿ ಲಿಮಿಟೆಡ್ ಆಲಂಗಾರು ಇವುಗಳ ಜಂಟಿ ಆಶ್ರಯದಲ್ಲಿ "ಅನನಾಸು ಮತ್ತು ಡ್ರಾಗಾನ್ ಹಣ್ಣುಗಳ ಉಪ ಉತ್ಪನ್ನ ಘಟಕ" ಸ್ಥಾಪನೆ ಬಗ್ಗೆ ವಿಚಾರ ವಿನಿಮಯವು ಜು. 19ರಂದು ಬೆಳಿಗ್ಗೆ 10.30ಕ್ಕೆ ಸಮಾಜ ಮಂದಿರದಲ್ಲಿ ನಡೆಯಲಿದೆ.
ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾಯ೯ಕ್ರಮದಲ್ಲಿ ಮಂಗಳೂರು ತೋಟಗಾರಿಕೆ ಇಲಾಖೆಯ ಉಪ ನಿದೇ೯ಶಕ ಮಂಜುನಾಥ ಡಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಬನ್ನಡ್ಕ ಸೋನ್ಸ್ ಫಾಮ್೯ನ ವಿವೇಕ್ ಸೋನ್ಸ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿದೇ೯ಶಕ ಪ್ರವೀಣ್ ಕೆ., ಕೃಷಿ ವಿಚಾರ ವಿನಿಮಯ ಕೇಂದ್ರದ ಮೂಡುಬಿದಿರೆ ಅಧ್ಯಕ್ಷ ಬಿ. ಅಭಯ ಕುಮಾರ್, ರೈತಜನ್ಯ ಫಾಮ೯ರ್ ಪ್ರೊಡ್ಯುಸರ್ ಲಿ. ಕಂಪನಿಯ ಮೂಡುಬಿದಿರೆ ಅಧ್ಯಕ್ಷ ಲಿಯೋ ವಾಲ್ಟರ್ ನಝ್ರತ್ ಉಪಸ್ಥಿತರಿರುವರು.
0 Comments