ರೈತರಿಂದ ಹೆಚ್ಚಿನ ದರ ವಸೂಲಿ ಮಾಡಿದರೆ ಪರವಾನಿಗೆ ರದ್ದು : ಡಾ. ವೀಣಾ ರೈ ಎಚ್ಚರಿಕೆ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ರೈತರಿಂದ ಹೆಚ್ಚಿನ ದರ ವಸೂಲಿ ಮಾಡಿದರೆ ಪರವಾನಿಗೆ ರದ್ದು : ಡಾ. ವೀಣಾ ರೈ ಎಚ್ಚರಿಕೆ

ಮೂಡುಬಿದಿರೆ: ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ರೈತರಿಗೆ  ವಿವಿಧ ಬೆಳೆಗಳ ಕೃಷಿ ಮಾಹಿತಿ ಕಾರ್ಯಕ್ರಮ ನಡೆಯಿತು.


ಜಿಲ್ಲಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ರೈ ಭಾಗವಹಿಸಿ ಮಾತನಾಡಿ ಕೃಷಿ ಇಲಾಖೆಯಿಂದ ಮಾನ್ಯತೆ ಪಡೆದ ಅಗ್ರಿಕಲ್ಚರಲ್ ಸ್ಟೋರ್ ಗಳಲ್ಲಿ ರಸಗೊಬ್ಬರಗಳಿಗೆ ಸರಕಾರ ನಿಗದಿಪಡಿಸಿದಕ್ಕಿಂತ ಹೆಚ್ಚಿನ ದರವನ್ನು ರೈತರಿಂದ ಪಡೆದರೆ ಅಂತಹ ಅಂಗಡಿಗಳ ಪರವಾನಿಗೆಯನ್ನು ರದ್ದು ಪಡಿಸಲಾಗುವುದು ಎಂದು  ಎಚ್ಚರಿಸಿದರು. 

   ರೈತರ ಜೀವನಮಟ್ಟ ಸುಧಾರಣೆಗೆ ಮಿಶ್ರ ಬೆಳೆಗಳು ಹಾಗೂ ಯಾಂತ್ರೀಕೃತ ಸವಲತ್ತುಗಳ ಬಳಕೆಯ ಅಗತ್ಯತೆ ಬಗ್ಗೆ ಅವರು ಮಾಹಿತಿ ನೀಡಿದರು. 

ಮೂಡುಬಿದಿರೆಯ ಕೆಲವು ಅಗ್ರಿಕಲ್ಚರಲ್ ಸ್ಟೋರ್‌ಗಳಲ್ಲಿ ರೈತರು ಖರೀದಿಸುವ ರಸಗೊಬ್ಬರ ಚೀಲಗಳಿಗೆ ಸರಕಾರ ನಿಗದಿಪಡಿಸಿದ ದರಕ್ಕಿಂತ ರೂಪಾಯಿ ೨೦೦ರಿಂದ ೩೦೦ಹೆಚ್ಚಿಗೆ ದರ ವಿಧಿಸುತ್ತಾರೆ, ಅಂತವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೆಲವು ರೈತರು ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರು.  


ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ ಮಾತನಾಡಿ ಸರಕಾರದಿಂದ ಸಿಗುವ ಸವಲತ್ತುಗಳಲ್ಲಿ ರೈತರಿಗೆ ವಂಚನೆ, ಅನ್ಯಾಯವಾಗಬಾರದು. ರೈತರು ದೂರು ಕೊಟ್ಟರೆ ಅದನ್ನು ಪರಿಶೀಲಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು  ಕೃಷಿ ಇಲಾಖೆಯ ಉಪನಿರ್ದೇಕರಿಗೆ ತಿಳಿಸಿದ ಅವರು ದೇಶದ ಬೆನ್ನೆಲುಬು ಎನಿಸಿಕೊಂಡಿರುವ ರೈತನಿಗೆ ಸರಕಾರ ಪ್ರೋತ್ಸಾಹ ನೀಡಬೇಕು. ರೈತ ಗೌರವಯುತವಾಗಿ ಜೀವನ ನಡೆಸಿದಾಗ ದೇಶ ಸಮೃದ್ಧಿಯಾಗುತ್ತದೆ ಎಂದರು. 

 ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ.ಪ್ರವೀಣ್ ಬೆಳೆ ಸಮೀಕ್ಷೆ ಮತ್ತು ಬೆಳೆ ವಿಮೆ ಬಗ್ಗೆ ಮಾಹಿತಿ ನೀಡಿದರು. ದೀಪಾ ಜೇನುಕೃಷಿ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಸಂಪತ್ ಸಾಮ್ರಾಜ್ಯ, ಹಿರಿಯ ಕೃಷಿಕ ಸೀತಾರಾಮ ಶೆಟ್ಟಿ,   ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಹರೀಶ್ ಶೆಣೈ, ತೋಟಗಾರಿಕೆ ಇಲಾಖೆಯ ವಿಜ್ಞಾನಿ ಡಾ. ರಶ್ಮಿ ಆರ್, ಪುತ್ತೂರು ಗೇರು ನಿದೇ೯ಶನಾಲಯದ ವಿಜ್ಞಾನಿ ಡಾ. ಭಾಗ್ಯ, ಪಶುಸಂಗೋಪನೆ ಇಲಾಖೆಯ ಡಾ.ಮಂಜುನಾಥ, ಪಶು ವೈದ್ಯಾಧಿಕಾರಿ ಡಾ. ಮಲ್ಲಿಕಾಜು೯ನ್ ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments

Advertisement