ಎಸ್‌ಎಸ್‌ಎಲ್‌ಸಿ ಫಲಿತಾಂಶ: ಎಕ್ಸಲೆಂಟ್ ವಿದ್ಯಾರ್ಥಿ ರಾಜ್ಯಕ್ಕೆ ದ್ವಿತೀಯ

ಜಾಹೀರಾತು/Advertisment
ಜಾಹೀರಾತು/Advertisment

 ಎಸ್‌ಎಸ್‌ಎಲ್‌ಸಿ ಫಲಿತಾಂಶ: ಎಕ್ಸಲೆಂಟ್ ವಿದ್ಯಾರ್ಥಿ ರಾಜ್ಯಕ್ಕೆ ದ್ವಿತೀಯ

* ಅಗ್ರ ಹತ್ತು ಸ್ಥಾನಗಳನ್ನು ಪಡೆದ ಎಕ್ಸಲೆಂಟ್ ವಿದ್ಯಾರ್ಥಿಗಳು 


ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಪ್ರೌಢ ಶಾಲೆಯ ಸಾನಿಧ್ಯ ರಾವ್ 624 ಅಂಕಗಳನ್ನು ಗಳಿಸುವುದರೊಂದಿಗೆ ರಾಜ್ಯದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. 12 ವಿದ್ಯಾರ್ಥಿಗಳು ರಾಜ್ಯದ ಮೊದಲ 10 ರ‍್ಯಾಂಕ್‌ಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಎಕ್ಸಲೆಂಟ್ ಶೇ.100 ಫಲಿತಾಂಶ ದಾಖಲಿಸಿದೆ. 


ಭರತ್ ಜಿ.ಗೌಡ (623) ಮೂರನೇಯ ಸ್ಥಾನ, ಮಂಗಳಾ ಜಿ.(622), ಅಖಿಲೇಶ್ ಕೆ.ಬಿ (622), ಪರಿಣಿತ ಹೆಚ್.ಎಸ್(621) ಐದನೇ ಸ್ಥಾನ, ಕೃತಿಕಾ ಎಂ (618), ತೀಕ್ಷ÷್ಣ ಎಂ. (618) ಎಂಟನೇ ಸ್ಥಾನ, ಮಂಥನ್ ಜೈನ್(617), ಅಭಿಷೇಕ್ ಆರ್.ಪಾಟೀಲ್ (617) 9ನೇ ಸ್ಥಾನ, ನಿಶಾಂತ್ ಎ. (616), ನಿತ್ಯಾ ಆರ್.ಎಚ್ (616), ರೋಶಿನಿ ಎಸ್.(616) ಹತ್ತನೇ ಸ್ಥಾನವನ್ನು ಪಡೆದಿದ್ದಾರೆ. 

ಹಾಜರಾದ 196 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕಗಳು, 107 ವಿದ್ಯಾರ್ಥಿಗಳು ಶೆಕಡಾ 90ಕ್ಕಿಂತ ಹೆಚ್ಚು ಮತ್ತು 142 ವಿದ್ಯಾರ್ಥಿಗಳು ಡಿಸ್ಟಿಂಕ್ಷಣ್ ಪಡೆದಿರುತ್ತಾರೆ. ಕನ್ನಡ-49 ವಿದ್ಯಾರ್ಥಿಗಳು, ಸಂಸ್ಕöÈತ-20 ವಿದ್ಯಾರ್ಥಿಗಳು, ಸಮಾಜ ವಿಜ್ಞಾನ-17 ವಿದ್ಯಾರ್ಥಿಗಳು, ಗಣಿತ-15 ವಿದ್ಯಾರ್ಥಿಗಳು, ಹಿಂದಿ-15 ವಿದ್ಯಾರ್ಥಿಗಳು, ವಿಜ್ಞಾನ-5 ವಿದ್ಯಾರ್ಥಿಗಳು ಮತ್ತು ಪ್ರಥಮ ಭಾಷೆ ಇಂಗ್ಲೀಷ್-2 ವಿದ್ಯಾರ್ಥಿಗಳು ವಿಷಯವಾರು 100ಕ್ಕೆ 100 ಅಂಕಗಳನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. 

ಸಾಧಕ ವಿದ್ಯಾರ್ಥಿಗಳನ್ನು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಅಭಿನಂದಿಸಿದ್ದಾರೆ. 

---

ಎಕ್ಸಲೆಂಟ್ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣವಿದೆ. ಅತ್ಯುತ್ತಮ ಶೈಕ್ಷಣಿಕ ಯೋಜನೆಯಿಂದಾಗಿ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು. ಇದರೊಂದಿಗೆ ಹೆತ್ತವರು ನೀಡಿದ ಬೆಂಬಲ, ಶಿಕ್ಷಕರ ಅತ್ಯುತ್ತಮ ಕಲಿಕಾ ವಿಧಾನಗಳು ಹೆಚ್ಚು ಅಂಕ ಪಡೆಯಲು ನೆರವಾಗಿದೆ.

- ಸಾನಿದ್ಯ ರಾವ್

---

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಗುಣಮಟ್ಟದ ಶಿಕ್ಷಣದಿಂದಾಗಿ ನನ್ನ ಮಗಲು ಇಂದು ರಾಜ್ಯಮಟ್ಟದ ಗಮನ ಸೆಳೆಯುವಂತಾಗಿದೆ. ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಶಿಕ್ಷಕ ವೃಂದದವರ ಸತತ ಪ್ರೋತ್ಸಾಹ ಹಾಗೂ ಮಗಳ ಕಠಿಣ ಪರಿಶ್ರಮ ಅವಳ ಸಾಧನೆಗೆ ಪೂರಕವಾಗಿದೆ. 

- ವಸಂತ ರಾವ್, ಸಾನಿಧ್ಯಳ ತಂದೆ

Post a Comment

0 Comments