ಸಾಯಿ ಮಾನಾ೯ಡ್ ಸೇವಾ ಸಂಘದಿಂದ ಸಹಾಯಧನ

ಜಾಹೀರಾತು/Advertisment
ಜಾಹೀರಾತು/Advertisment

 ಸಾಯಿ ಮಾನಾ೯ಡ್ ಸೇವಾ ಸಂಘದಿಂದ ಸಹಾಯಧನ 


ಮೂಡುಬಿದಿರೆ : ಇತ್ತೀಚೆಗೆ ಅಪಘಾತಕ್ಕೊಳಗಾಗಿರುವ ಮೂಡುಬಿದಿರೆ ತಾಲೂಕಿನ ತೋಡಾರ್ ಗ್ರಾಮದ ಪ್ರಸಾದ್ ಆಚಾರ್ಯ ಮತ್ತು ಶಮಿತಾ ದಂಪತಿಗಳ ಚಿಕಿತ್ಸೆಗಾಗಿ ಸಾಯಿ ಮಾರ್ನಾಡ್ ಸೇವಾ ಸಂಘ ದಿಂದ 61ನೇ ಸೇವಾ ಯೋಜನೆಯ ರೂ 10,000ನ್ನು ನೀಡಿದೆ.

ವಿವಿಧ ಮೇಳಗಳಲ್ಲಿ ಕಲಾವಿದರಾಗಿ ಹಾಗೂ ವೃತ್ತಿ ಯಲ್ಲಿ ಚಿನ್ನ ಬೆಳ್ಳಿಯ ಕೆಲಸ  ಹಾಗೂ ಜ್ಯುವೆಲ್ ಅಪ್ರೆಸರ್ ಆಗಿ ಕಾರ್ಯನಿರ್ವಹಿಸುತ್ತಿರುವ  ಪ್ರಸಾದ್ ಆಚಾರ್ಯ ಅವರು ತನ್ನ ಪತ್ನಿ ಶಮಿತಾ ದಂಪತಿ ತಿಂಗಳ ಹಿಂದೆ ಬೆಳುವಾಯಿಯಲ್ಲಿ ನಡೆದ ವಾಹನ ಅಪಘಾತ ದಲ್ಲಿ ತೀವ್ರ ವಾಗಿ ಗಾಯಗೊಂಡಿದ್ದು ವೈದ್ಯರು ಸುಮಾರು 20ಲಕ್ಷ ಚಿಕಿತ್ಸಾ ವೆಚ್ಚವನ್ನು ಅಂದಾಜಿಸಿರುತ್ತಾರೆ. ಅವರಿಗೆ 6ವರ್ಷ ದ ಮಗನಿದ್ದು ಆತ ಅದ್ರಷ್ಟವಶಾತ್  ಅಪಘಾತ ದಿಂದ ಪಾರಾಗಿದ್ದಾನೆ. 

 ಕುಟುಂಬವು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಚಿಕಿತ್ಸಾ ವೆಚ್ಚವನ್ನು ಭರಿಸಲು ಅಸಾಧ್ಯ ವಾಗಿರುವುದರಿಂದ  ಸಾಯಿ ಮಾರ್ನಾಡ್ ಸೇವಾ ಸಂಘವು ಸಹಾಯಧನವನ್ನು ನೀಡುವ ಮೂಲಕ ಚಿಕಿತ್ಸೆಗೆ ಸ್ಪಂದಿಸಿದೆ.

Post a Comment

0 Comments