ದಿ.ವಿಜೇಶ್ ಅಮೀನ್ ಸ್ಮರಣಾಥ೯ 'ಸೂರು ಯೋಜನೆ'
*ಪುತ್ತಿಗೆಯಲ್ಲಿ ನೂತನ ಮನೆಗೆ ಭೂಮಿ ಪೂಜೆ
ಮೂಡುಬಿದಿರೆ : ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ
ಇದರ 'ಸೂರು ಯೋಜನೆ" ಅಡಿಯಲ್ಲಿ ತಂಡದ ಟ್ರಸ್ಟಿ "ದಿ. ವಿಜೇಶ್ ಅಮೀನ್ ಅವರ ಸ್ಮರಣಾಥ೯ ಅಸಹಾಯಕ ಕುಟುಂಬ ಪುತ್ತಿಗೆಯ ಕುಲ್ಲಂಗಾಲು ಗ್ರಾಮದಲ್ಲಿ ವಾಸಿಸುತ್ತಿರುವ " ವೀರಪ್ಪ ಮೂಲ್ಯ- ಬೇಬಿ ದಂಪತಿಗೆ ನೂತನವಾಗಿ ನಿಮಿ೯ಸಲು ಹೊರಟಿರುವ ಮನೆಗೆ ಭಾನುವಾರ ಭೂಮಿಪೂಜೆ ನಡೆಯಿತು.
ರಾಮಚಂದ್ರ ಮಠ ಪುತ್ತಿಗೆ ಇಲ್ಲಿನ ಶ್ರೀ ದುರ್ಗಾಪ್ರಸಾದ್ ಭಟ್, ಮತ್ತು ನಿತಿನ್ ಭಟ್ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟಿ"ದಿ. ವಿಜೇಶ ಅಮೀನ್" ಅವರ ತಾಯಿ "ಲಕ್ಷ್ಮೀ ದಯಾನಂದ್" ಸಹೋದರಿ ಜಯಶ್ರೀ ಅಮೀನ್, ಸ್ಥಳೀಯ ಪ್ರಮುಖರಾದ ದಿನೇಶ್ ಪೇಲತಡ್ಕ, ವಿಜೇಶ್ ಅಮೀನ್ ರವರ ಕುಟುಂಬಸ್ಥರು, ನೇತಾಜಿ ಬ್ರಿಗೇಡ್ ಸ್ಥಾಪಕರು, ಅಧ್ಯಕ್ಷರು,ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ವೀರಪ್ಪ ಮೂಲ್ಯ ಅವರ ಮನೆಯು ಬೀಳುವ ಹಂತದಲ್ಲಿದ್ದುದ್ದನ್ನು ಕಂಡು ನೇತಾಜಿ ಬ್ರಿಗೇಡ್ ಸಂಸ್ಥೆಯು ನೂತನ ಮನೆಯನ್ನು ನಿರ್ಮಿಸಿ ಕೊಡುವುದಾಗಿ ನಿರ್ಣಯಿಸಿತ್ತು.
0 Comments