ಮೂಡುಬಿದರೆ ಮಾಣಿಕ್ಯಗಳಿಗೆ ಸಿಂಗಾಪುರದಲ್ಲಿ ಗೌರವ
ಮೂಡುಬಿದಿರೆ: ಬೆಂಗಳೂರಿನ ಸುಹಾಸ್ತಿ ಯುವ ಜೈನ್ ಸಿಂಗಾಪುರದಲ್ಲಿ ಆಯೋಜಿಸಿರುವ ಜಿನ ಸಮ್ಮಿಲನ ಕಾರ್ಯಕ್ರಮದಲ್ಲಿ ಮಂಜುಳಾ ಅಭಯಚಂದ್ರ ಅವರಿಗೆ ‘ ಆದರ್ಶ ಜೈನ ಶ್ರಾವಕಿ ‘ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮೂಡುಬಿದಿರೆಯ ಜೈನ್ ಮಿಲನ್ ಹಾಗೂ ಸರ್ವಮಂಗಳ ಮಹಿಳಾ ಸಂಘದ ಹಿರಿಯ ಸದಸ್ಯರಾಗಿರುವ ಮಂಜುಳಾ ಅವರು ಕಳೆದ ಹಲವು ವರ್ಷಗಳಿಂದ ಜೈನ್ ಮಿಲನ್ ಹಾಗೂ ಸರ್ವಮಂಗಳ ಮಹಿಳಾ ಸಂಘದಲ್ಲಿ ಸಕ್ರಿಯರಾಗಿದ್ದು ಇವರು ಮಾಜಿ ಸಚಿವ ಕೆ. ಅಭಯಚಂದ್ರ ಜೈ ನ್ ಅವರ ಪತ್ನಿ.
ಇದೇ ಕಾರ್ಯಕ್ರಮದಲ್ಲಿ ಯುವ ಸಾಧಕಿ ಪ್ರಮಯಿ ಜೈನ್ ಅವರಿಗೆ ಯೂತ್ ಐಕಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರು ವಕೀಲೆ ಶ್ವೇತಾ ಜೈನ್ ಅವರ ಪುತ್ರಿ.
0 Comments