ಇಟಲ ಸೋಮನಾಥ ಗಡಿಯಲ್ಲಿ ರುದ್ರತಾಂಡವ ಆಡಲಿ-ಪಾಕಿಸ್ತಾನದ ನಾಶವಾಗಲಿ-ಚಕ್ರವರ್ತಿ ಸೂಲಿಬೆಲೆ

ಜಾಹೀರಾತು/Advertisment
ಜಾಹೀರಾತು/Advertisment

ಇಟಲ ಸೋಮನಾಥ ಗಡಿಯಲ್ಲಿ ರುದ್ರತಾಂಡವ ಆಡಲಿ-ಪಾಕಿಸ್ತಾನದ ನಾಶವಾಗಲಿ-ಚಕ್ರವರ್ತಿ ಸೂಲಿಬೆಲೆ

ಇಟಲ ಶ್ರೀ ಸೋಮನಾಥೇಶ್ವರ ದೇವರು ರುದ್ರತಾಂಡವ ಆಡಲಿ, ನಮ್ಮ ಭಾರತೀಯ ಯೋಧರಿಗೆ ಶಕ್ತಿಯನ್ನು ನೀಡಲಿ, ಈ ಮೂಲಕ ಕಾಶ್ಮೀರದ ಪಹಲ್ಗಾವ್ ಪ್ರದೇಶದಲ್ಲಿ ಧಾರುಣವಾಗಿ ಪಾಕ್ ಪ್ರೇರಿತ ಉಗ್ರರಿಂದ ಹತ್ಯೆಗೀಡಾದ ಹಿಂದುಗಳಿಗೆ ನ್ಯಾಯ ಸಿಗಲಿ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆಯವರು ಬ್ರಹ್ಮಕಲಶೋತ್ಸವದ ಕಾರ್ಯಕ್ರಮದಲ್ಲಿ ಹೇಳಿದರು 


ಮಹತೋಭಾರ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ ಅಂಕಣಕಾರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಯವರು ಮಾತನಾಡಿದರು. ನಮ್ಮ ಧರ್ಮ ಮತ್ತು ದೇಶ ನಮ್ಮ ಪ್ರಮುಖ ಅಸ್ಮಿತೆ ಆಗಿರಬೇಕು. ಧರ್ಮವನ್ನು ಉಳಿಸುವಲ್ಲಿ ನಮ್ಮ ಪ್ರಯತ್ನ, ಹೋರಾಟ ಮುಂದುವರಿಯುತ್ತಿರಬೇಕು. ಶ್ರೀರಾಮ ಮಂದಿರದ ಜೀವನೋದ್ಧಾರ ಸೇರಿದಂತೆ ದೇವರ ದೇವಾಲಯಗಳ ಜೀರ್ಣೋದ್ಧಾರಗಳಿಗೆ ಇದು ಅತ್ಯಂತ ಸುವರ್ಣ ಕಾಲ. ಹೀಗಾಗಿ ಈ ಪರ್ವಕಾಲದಲ್ಲಿ ನಾವೆಲ್ಲರೂ ಭಗವಂತನಲ್ಲಿ ದೇಶಕ್ಕಾಗಿ ಪ್ರಾರ್ಥಿಸೋಣ. ಸೋಮನಾಥೇಶ್ವರ ದೇವರು ಗಡಿಯಲ್ಲಿ ರುದ್ರ ತಾಂಡವ ಆಡಲಿ, ಪಾಕಿಸ್ತಾನದ ವಿರುದ್ಧ ನಮ್ಮ ಯೋಧರು ಜಯಗಳಿಸಲಿ. ಅತ್ಯಂತ ಶುಭ ಸುದ್ದಿಯನ್ನು ಭಗವಂತ ನೀಡಲಿ, ನಮ್ಮ ದೇಶ ಸದಾ ವಿಜಯದತ್ತ ನಡೆಯುತ್ತಿರಲಿ ಎಂದು ಪ್ರಾರ್ಥಿಸೋಣ ಎಂದು ಉದ್ಘೋಷಿಸಿದರು.

Post a Comment

0 Comments