ಮೂಡುಬಿದಿರೆ ಬಿಜೆಪಿ ಎಸ್.ಸಿ, ಎಸ್ಟೀ ಮೋಚಾ೯ದಿಂದ ಸ್ವಚ್ಛತಾ ಕಾಯ೯ಕ್ರಮ
ಮೂಡುಬಿದಿರೆ: ಡಾ. ಬಿ.ಆರ್ ಅಂಬೇಡ್ಕರ್ ರವರ 135ನೇ ಜನುಮದಿನದ ಅಂಗವಾಗಿ ಬಿಜೆಪಿ ಮೂಡುಬಿದಿರೆ ಮಂಡಲದ ಎಸ್ ಸಿ, ಎಸ್ಟಿ ಮೋಚಾ೯ದ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ ಮತ್ತು ಗಾಂಧಿನಗರ ಕಡದಬೆಟ್ಟುವಿನಲ್ಲಿ ಸೋಮವಾರ ಬೆಳಿಗ್ಗೆ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಎಸ್ಸಿ ಮೋರ್ಚಾದ ಅಧ್ಯಕ್ಷ ಗೋಪಾಲಕೃಷ್ಣ ಪುನುರೂರು, ಎಸ್ಟಿ ಮೋರ್ಚಾ ಅಧ್ಯಕ್ಷ ಅಣ್ಣಪ್ಪ ಕೆ.ಎಸ್, ಮೂಡುಬಿದಿರೆ ನಗರ ಮಹಾಶಕ್ತಿಕೇಂದ್ರದ ಅಧ್ಯಕ್ಷ ಲಕ್ಷ್ಮಣ ಪೂಜಾರಿ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗರಾಜ ಪೂಜಾರಿ ಒಂಟಿಕಟ್ಟೆ, ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಪುರಸಭಾ ಸದಸ್ಯರಾದ ದಿವ್ಯಾ ಜಗದೀಶ್, ಮಂಡಲ ಎಸ್ಸಿ ಮೋರ್ಚಾ ಉಪಾಧ್ಯಕ್ಷರಾದ ಕಪಿಲ್ ಎಸ್ ಅಂಚನ್, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಈ ಸಂದಭ೯ದಲ್ಲಿದ್ದರು.
0 Comments