ಗ್ರಾಮಸ್ಥರ ಉತ್ಸಾಹವೇ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ: ಇಟಲಕ್ಕೆ ಭೇಟಿ ನೀಡಿದ ಶ್ರದ್ಧಾ ಅಮಿತ್ ಧರ್ಮಸ್ಥಳ
ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿರುವ ಮೂಡುಬಿದಿರೆಯ ದರೆಗುಡ್ಡೆ ಗ್ರಾಮದಲ್ಲಿನ ಪುರಾಣ ಪ್ರಸಿದ್ಧ ಮಹಾತೋಭಾರ ಶ್ರೀ ಸೋಮನಾಥೇಶ್ವರ ಕ್ಷೇತ್ರ ಇಟಲ ಇಲ್ಲಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪುತ್ರಿ ಶ್ರೀಮತಿ ಶ್ರದ್ಧಾ ಅಮಿತ್ ರವರು ಕುಟುಂಬದೊಂದಿಗೆ ಭೇಟಿ ನೀಡಿ ದೇಗುಲ ವೀಕ್ಷಣೆ ಮಾಡಿದರು.
ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಹಾಗೂ ಈ ಕಾರ್ಯಕ್ಕೆ ಮಾಗಣೆಯ ಜನತೆ ತೋರುತ್ತಿರುವ ಉತ್ಸಾಹ ಕಂಡು ಸಂತಸ ವ್ಯಕ್ತಪಡಿಸಿದರು. ಈಗಾಗಲೇ ತಮ್ಮ ಕ್ಷೇತ್ರದ ವತಿಯಿಂದ ಭರಪೂರ ನೆರವು ಒದಗಿಸಿದ್ದು ಮತ್ತಷ್ಟು ಸಹಕರಿಸುವ ಭರವಸೆ ನೀಡಿದರು.
ಮತ್ತು ಶ್ರಮ ಸೇವಕರ ಕಾರ್ಯವನ್ನು ಗಮನಿಸಿ ಅಚ್ಚರಿಗೊಂಡ ಅವರು, ಕ್ಷೇತ್ರದ ವತಿಯಿಂದ ಅವರನ್ನು ಗುರುತಿಸುವ ಸಲುವಾಗಿ ಅಮೂಲ್ಯವಾದ ಸಲಹೆಗಳನ್ನು ನೀಡಿದರು.
0 Comments