ದರೆಗುಡ್ಡೆ ಇಟಲ ದೇವಸ್ಥಾನ ಬ್ರಹ್ಮಕಲಶ - ಹೊರೆಕಾಣಿಕೆ ಮೆರವಣಿಗೆ

ಜಾಹೀರಾತು/Advertisment
ಜಾಹೀರಾತು/Advertisment

 ದರೆಗುಡ್ಡೆ ಇಟಲ ದೇವಸ್ಥಾನ ಬ್ರಹ್ಮಕಲಶ - ಹೊರೆಕಾಣಿಕೆ ಮೆರವಣಿಗೆ


ಮೂಡುಬಿದಿರೆ : ಶಿಲಾಮಯವಾಗಿ ಪುನರ್‌ನಿರ್ಮಾಣಗೊಂಡಿರುವ   ಮಹತೋಭಾರ ಸೋಮನಾಥೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಇಟಲ ದರೆಗುಡ್ಡೆ  ಇದರ ಬ್ರಹ್ಮಕಲಶೋತ್ಸವವು ಮೆ.೨ರಂದು ನಡೆಯಲಿದ್ದು ಆದರ ಪೂವ೯ಭಾವಿಯಾಗಿ ಭಾನುವಾರ ಸಂಜೆ ವೈಭವದ ಹೊರೆಕಾಣಿಕೆ ಮೆರವಣಿಗೆಯು  ನಡೆಯಿತು.


ಅಳಿಯೂರು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮೈದಾನದಿಂದ ಹೊರಟ ವೈಭವಯುತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.


  ಬಳಿಕ ಸುಮಾರು ೨.ಕಿ.ಮೀ ದೂರದ ದರೆಗುಡ್ಡೆ ಇಟಲ ದೇವಸ್ಥಾನದವರೆಗೆ ನಡೆದ ಮೆರವಣಿಗೆಯಲ್ಲಿ ಹತ್ತಾರು ವಾಹನಗಳಲ್ಲಿ ಭಕ್ತರು ಅಕ್ಕಿ, ತೆಂಗಿನಕಾಯಿ, ತರಕಾರಿ, ಧವಸಧಾನ್ಯಗಳನ್ನು ಕೊಂಡೊಯ್ದು ಕ್ಷೇತ್ರಕ್ಕೆ ಸಮರ್ಪಿಸಿದರು.

ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರ, ಪಣಪಿಲ ಅರಮನೆಯ ಬಿ. ವಿಮಲ್ ಕುಮಾರ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ, ಕಾರ್ಯಧ್ಯಕ್ಷ ಸಂತೋಷ್ ಕೆ. ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಕೇಶ್ ಶೆಟ್ಟಿ ಎದಮಾರು, ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕರಾದ ಪ್ರಮೋದ್ ಆರಿಗ, ಪೂರನ್‌ವರ್ಮ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕೋಟ್ಯಾನ್, ಉಪಾಧ್ಯಕ್ಷ ವಿನೋದರ ಪೂಜಾರಿ, ಬಿಜೆಪಿ ಮುಖಂಡ ರಂಜಿತ್ ಪೂಜಾರಿ ತೋಡಾರು ಮತ್ತಿತರರು ಪಾಲ್ಗೊಂಡರು.

ಇದೇ ಸಂಧರ್ಭದಲ್ಲಿ ಉಗ್ರಾಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ದೀಪ ಬೆಳಗಿಸಿ ಉದ್ಘಾಟಿಸಿದರು.

Post a Comment

0 Comments