ಭಜನೆಯಿಂದಾಗಿ ಸುಸಂಸ್ಕೃತ ಸಮಾಜ ನಿರ್ಮಾಣ : ಲಕ್ಷ್ಮಣ ಸುವರ್ಣ ಪೆರಿಬೆಟ್ಟು ಅಳಿಯೂರು.

ಜಾಹೀರಾತು/Advertisment
ಜಾಹೀರಾತು/Advertisment


 ಭಜನೆಯಿಂದಾಗಿ ಸುಸಂಸ್ಕೃತ ಸಮಾಜ ನಿರ್ಮಾಣ : ಲಕ್ಷ್ಮಣ ಸುವರ್ಣ ಪೆರಿಬೆಟ್ಟು ಅಳಿಯೂರು.

ಪಣಪಿಲ ಗ್ರಾಮದಲ್ಲಿ ಇಟಲ ಶ್ರೀ ಸೋಮನಾಥೇಶ್ವರ ಭಜನಾ ತಂಡ‌ ಉದ್ಘಾಟನೆ.

ಭಜನೆ ಮಾಡುವುದರಿಂದಾಗಿ ಮಕ್ಕಳಲ್ಲಿ ಜ್ಞಾನವೃದ್ಧಿ ಆಗುವುದು ಹಾಗೂ ಕುಣಿತ ಭಜನೆಯಿಂದಾಗಿ ದೈಹಿಕವಾಗಿಯೂ ಸದೃಢರಾಗುತ್ತಾರೆ. ಭಜನಾ ಕಾರ್ಯಕ್ರಮದ ಜೊತೆಗೆ ಸಂಸ್ಕಾರಯುತ ಶಿಕ್ಷಣವನ್ನು ಕೊಡುವುದು ಅಗತ್ಯವಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು ಮೂಡುಬಿದಿರೆ ತಾಲೂಕು ಇದರ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಸುವರ್ಣ ಇವರು ಪಡ್ಡಾಯಡ್ಕ ಮನೆ ಪಣಪಿಲದಲ್ಲಿ ನಡೆದ ಭಜನಾ ಮಂಡಳಿ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ ಅಳಿಯೂರು ರವರು ಮಾಹಿತಿ ನೀಡಿದರು.

ಭಜನಾ ತರಬೇತಿ ಗುರುಗಳಾದ ನಾಗೇಶ್ ನೆರಿಯ ,ಅಭಿಷೇಕ್ ಚಾರ್ಮಾಡಿ ಭಜನಾ ತರಬೇತಿ ನೀಡಿದರು.

ಗ್ರಾಮ ಪಂಚಾಯತ್ ಸದಸ್ಯರಾದ ದೀಕ್ಷಿತ್ ಪಣಪಿಲ, ಸುನಿಲ್ ಪಣಪಿಲ,ಸದಾನಂದ ಕಂಬಳಬೆಟ್ಟು,  ಪ್ರಶಾಂತ್ ಪಡ್ಡಾಯಡ್ಕ ಹಾಗೂ ಹರೀಶ್ ಗುಡೆದಮೇಲು 

ರವರು ಹಾಗೂ ವಿದ್ಯಾರ್ಥಿ ಪೋಷಕರು,ಊರವರು  ಉಪಸ್ಥಿತರಿದ್ದರು. 

 ಸಂತೋಷ್ ಪೂಜಾರಿ ಪಡ್ಡಾಯಡ್ಕ ಪಣಪಿಲ ಸರ್ವರನ್ನೂ ಸ್ವಾಗತಿಸಿದರು.ಶ್ರೀಮತಿ ಸಂಜೀವಿ ಅಂಗನವಾಡಿ ಶಿಕ್ಷಕಿ ಪಣಪಿಲ ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.💐

Post a Comment

0 Comments