ಶಾಸಕ ಕೋಟ್ಯಾನ್ ಮಾಡಿದ ಅಭಿವೃದ್ಧಿ ಸಹಿಲಾರದೆ ಕಾಂಗ್ರೆಸ್ ಪಕ್ಷದಿಂದ ತೇಜೋವಧೆ:ಸ್ಪೀಕರ್ ಖಾದರ್ ಕಾಂಗ್ರೆಸ್ ಅಡಿಯಾನಂತೆ ವರ್ತೆನೆ:ದಿನೇಶ್ ಪುತ್ರನ್ ಆಕ್ರೋಶ
ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್ ರವರನ್ನು ವಿಧಾನಸಭೆಯಿಂದ ಅಮಾನತು ಮಾಡಿರುವ ಸ್ಪೀಕರ್ ನಡೆ ದುರಾದೃಷ್ಟದಿಂದ ಕೂಡಿದೆ. ಸ್ಪೀಕರ್ ಯು.ಟಿ.ಖಾದರ್ ರವರು ನಮ್ಮದೇ ಜಿಲ್ಲೆಯವರು ಆಗಿದ್ದರಿಂದ ಅವರ ಮೇಲೆ ಪಕ್ಷಾತೀತವಾದ ಗೌರವ ಇತ್ತು ಹಾಗೂ ಜಿಲ್ಲೆಯ ಬಗೆಗಿನ ಕಾಳಜಿ ಇರಬಹುದು ಎಂಬ ನಂಬಿಕೆ ಇತ್ತು. ಆದರೆ ಈ ನಂಬಿಕೆಯನ್ನು ಅವರು ಹುಸಿಗೊಳಿಸಿದ್ದಾರೆ. ಕೇವಲ ಸ್ಪೀಕರ್ ಆಗಿಲ್ಲದೆ ಕಾಂಗ್ರೆಸ್ ಪಕ್ಷದ ಅಡಿಯಾಳಿನಂತೆ ವರ್ತಿಸಿ ಬಿಜೆಪಿ ಶಾಸಕರ ಮೇಲೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಿದ್ದರಾಮಯ್ಯ ನುಡಿದಂತೆ ನಡೆದ ಸ್ಪೀಕರ್ ಎನಿಸಿಕೊಂಡಿರುವುದು ದುರಂತ ಎಂದು ಭಾರತೀಯ ಜನತಾ ಪಾರ್ಟಿ, ಮುಲ್ಕಿ ಮೂಡುಬಿದ್ರಿ ಕ್ಷೇತ್ರಾಧ್ಯಕ್ಷ ದಿನೇಶ್ ಪುತ್ರನ್ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಬಂಧ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಶಾಸಕ ಉಮನಾಥ್ ಕೋಟ್ಯಾನ್ ರವರು ಮುಲ್ಕಿ ಮೂಡುಬಿದಿರೆಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಪಕ್ಷಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಾತ್ರವಲ್ಲದೆ ಮುಂದಿನ ಇನ್ನಷ್ಟು ಕಾಲ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವುದು ಮೂಡುಬಿದ್ರೆಯಲ್ಲಿ ಸಾಧ್ಯವಿಲ್ಲ ಎಂಬುದನ್ನು ಅರಿತ ಕಾಂಗ್ರೆಸ್ಸಿಗರು ಶಾಸಕರ ಮೇಲೆ ತೇಜೋವದೆ ಮಾಡುವ ನಿರಂತರ ಪ್ರಯತ್ನವನ್ನು ಮಾಡುತ್ತಲೇ ಬರುತ್ತಿದ್ದಾರೆ. ಯಾವುದೇ ಭ್ರಷ್ಟಾಚಾರ ಸ್ವಜನ ಪಕ್ಷಪಾತ ಮಾಡದೆ ಕೇವಲ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮ ಕೆಲಸ ಮಾಡುತ್ತಿರುವ ಶಾಸಕರಿಗೆ ಇದು ಸ್ಪೀಕರ್ ಹೇರಿದ ಅತಿ ದೊಡ್ಡ ಬಲೆ ಎಂದು ವ್ಯಾಖ್ಯಾನಿಸಬಹುದು. ಸ್ಪೀಕರ್ ಖಾದರ್ ರವರು ಕೂಡಲೇ ತಮ್ಮ ತಪ್ಪಿನ ಅರಿವಿನ ಮೂಲಕ ನಡೆಯನ್ನು ಸರಿಪಡಿಸಿಕೊಂಡು ಬಿಜೆಪಿ ಶಾಸಕರ ಮೇಲಿನ ಅಮಾನತು ಆದೇಶವನ್ನು ವಾಪಸ್ ಪಡೆಯಬೇಕು ಎಂದರು.
ಸ್ಪೀಕರ್ ಖಾದರ್ ರವರಿಗೆ ತಮ್ಮ ಮಂಗಳೂರು ಕ್ಷೇತ್ರವನ್ನು ಆರು ಅವಧಿಯಲ್ಲಿ ಅಭಿವೃದ್ಧಿ ಪಡಿಸಲಾಗಿಲ್ಲ ಎಂಬುದು ಜನರಿಗೆ ಗೊತ್ತಿರುವ ವಿಷಯ. ಆದರೆ ಶಾಸಕ ಕೋಟ್ಯಾನ್ ರವರು ಮೊದಲ ಪ್ರಯತ್ನದಲ್ಲೇ ಮೂಲ್ಕಿ ಮೂಡುಬಿದ್ರೆಯಲ್ಲಿ ಭಗೀರಥ ಪ್ರಯತ್ನದಿಂದ ಮೂಲಭೂತ ಸೌಕರ್ಯಗಳು ಶಿಕ್ಷಣ ವ್ಯವಸ್ಥೆ ಸಹಿತ ಅನೇಕ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಣಿಕೆಯನ್ನು ನೀಡಿದ್ದಾರೆ. ಹೀಗಾಗಿ ಅವರು ಮತ್ತೊಮ್ಮೆ ಜಯಭೇರಿ ಬಾರಿಸುವ ಮೂಲಕ ಜನತೆಯ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷವು ತಮ್ಮ ನಿಲುವನ್ನು ಬದಲಾಯಿಸಿಕೊಳ್ಳದಿದ್ದರೆ ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಸರ್ಕಾರದ ವಿರುದ್ಧ ಅಭಿಯಾನ ಮಾಡಬೇಕಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ತನ್ನ ವೋಟ್ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರನ್ನು ಒಲೈಸಿಕೊಂಡು ತುಷ್ಟೀಕರಣ ರಾಜಕೀಯ ಮಾಡುತ್ತಿರುವುದು ಈ ನಾಡಿಗೆ ಅಪ್ಪಳಿಸಿರುವ ಕೇಡುಗಾಲವಾಗಿದೆ. ಮುಸ್ಲಿಂ ಗುತ್ತಿಗೆದಾರರಿಗೆ 4% ಮೀಸಲಾತಿ ನೀಡಿರುವುದು ಅಸಂವಿಧಾನಿಕ ನಡೆಯಾಗಿದೆ. ಇದನ್ನು ಪ್ರಶ್ನಿಸುತ್ತೇವೆ ಮತ್ತು ಬಿಲ್ ಪಾಸ್ ಮಾಡಲು ಅವಕಾಶ ನೀಡಲ್ಲ ಎಂಬ ಕಾರಣಕ್ಕೆ ಬಿಜೆಪಿ ಶಾಸಕರನ್ನು ಅಮಾನತು ಮಾಎಲಾಗಿದೆ. ಒಂದು ವೇಳೆ ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇಲ್ಲದಿದ್ದರೆ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಅವರ ಸಂವಿಧಾನ ವಿರೋಧಿ ಮನಸ್ಥಿತಿಯನ್ನು ಬಣ್ಣಿಸುತ್ತದೆ. ಬಿಜೆಪಿ ಪಕ್ಷವು ಸಂವಿಧಾನ ಹಾಗೂ ಅದರ ಸೃಷ್ಟಿಕರ್ತ ಡಾಕ್ಟರ್ ಬಾಬಾ ಸಾಹೇಬ ಅಂಬೇಡ್ಕರ್ ರವರನ್ನು ಪ್ರತಃಸ್ಮರಣೀಯವಾಗಿ ಪೂಜಿಸುವ ಪಕ್ಷವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲೂ ಅಂಬೇಡ್ಕರ್ ರವರನ್ನು ಪ್ರತಃಸ್ಮರಣೀಯವಾಗಿ ಪೂಜಿಸಲ್ಪಡುತ್ತೇವೆ. ಇಂತಹ ಮಹಾನೀಯ ಬರೆದಿರುವ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದಿರುವ ಡಿಕೆ ಶಿವಕುಮಾರ್ ದುರ್ವರ್ತನೆಯು ಅಹಂಕಾರದಿಂದ ಕೂಡಿದೆ. ಕೇವಲ ಅಲ್ಪಸಂಖ್ಯಾತರ ಮತಕ್ಕಾಗಿ ಅವರ ಓಲೈಕೆಗಾಗಿ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂಬ ದರ್ಪದ ಮಾತು ಕಾಂಗ್ರೆಸ್ ಪಕ್ಷಕ್ಕೆ ಹೊಸದಲ್ಲ .ಆದರೆ ಬಿಜೆಪಿ ಪಕ್ಷವು ಇದನ್ನು ಸವಾಲಾಗಿ
ಸ್ವೀಕರಿಸಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಈಶ್ವರ್ ಕಟೀಲು, ಸುನಿಲ್ ಆಳ್ವಾ, ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
0 Comments