ಉತ್ತಮ ಚಿಂತನೆ, ಮಾತುಗಾರಿಕೆಗೆ ರುದ್ರ ಮತ್ತು ಉಮಾದೇವಿಯ ಸ್ಮರಣೆ ಅಗತ್ಯ : ಶ್ರೀ ವಿದ್ಯಾವಲ್ಲಭ ಸ್ವಾಮೀಜಿ

ಜಾಹೀರಾತು/Advertisment
ಜಾಹೀರಾತು/Advertisment

 ಉತ್ತಮ ಚಿಂತನೆ, ಮಾತುಗಾರಿಕೆಗೆ ರುದ್ರ ಮತ್ತು ಉಮಾದೇವಿಯ ಸ್ಮರಣೆ ಅಗತ್ಯ : ಶ್ರೀ ವಿದ್ಯಾವಲ್ಲಭ ಸ್ವಾಮೀಜಿ

ಮೂಡುಬಿದಿರೆ:  ನಮ್ಮ ಮನಸಿನಲ್ಲಿ ಉತ್ತಮ ಚಿಂತನೆಗಳು ಬರಬೇಕಾದರೆ ರುದ್ರ ದೇವರ ಮತ್ತು ಒಳ್ಳೆ ಮಾತುಗಾರಿಕೆ ಬರಲು ಉಮಾದೇವಿಯ ಸ್ಮರಣೆ ಅಗತ್ಯ ಎಂದು ಉಡುಪಿ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ಸ್ವಾಮೀಜಿ ನುಡಿದರು.

  ಅವರುಭಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಪುತ್ತಿಗೆ ಇದರ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದಂಗವಾಗಿ ಭಾನುವಾರ ರಾತ್ರಿ ತಿರುಮಲರಾಯ ಚೌಟ ವೇದಿಕೆಯಲ್ಲಿ ನಡೆದ ಧಾಮಿ೯ಕ ಸಭಾ ಕಾಯ೯ಕ್ರಮವನ್ನು ಉದ್ಘಾಟಸಿ ಆಶೀವ೯ಚನ ನೀಡಿದರು. 

 ಮನಸ್ಸು ಮತ್ತು ಮಾತು ಒಂದುಗೂಡಿದಾಗ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಆದರೆ ಇಂದಿನ ಸಮಾಜದಲ್ಲಿ ಅನೇಕ ಸಮಸ್ಯೆಗಳ ನಡುವೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದು ದಂಪತಿಗಳ ಮಧ್ಯೆ ಸಾಮರಸ್ಯದ ಕೊರತೆ. ಇಬ್ಬರಲ್ಲೂ ಮಾನಸಿಕವಾದ ಏಕಸಾಮ್ಯತೆ ಇಲ್ಲದಾಗಿದೆ ಇದನ್ನು ಹೋಗಲಾಡಿಸಲು ರುದ್ರ ಮತ್ತು ಉಮಾದೇವಿಯ ಸ್ಮರಣೆ ಮಾಡಬೇಕು. ಇದರಿಂದ ದಂಪತಿ ಮಧ್ಯೆ ಇರುವ ಕಲಹ ದೂರವಾಗಿ ದಾಂಪತ್ಯದಲ್ಲಿ ಸಾಮರಸ್ಯ ಮೂಡುತ್ತದೆ ಎಂದರು.

  ಶ್ರೀ ಕ್ಷೇತ್ರ ಧಮ೯ಸ್ಥಳದ ಡಿ. ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. 

 ಪೊಳಲಿಯ ಜ್ಯೋತಿಷ್ಯ ವೇ. ಮೂ. ಶ್ರೀ ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯ ಅವರು ಧಾಮಿ೯ಕ ಉಪನ್ಯಾಸ ನೀಡಿ ಧಾಮಿ೯ಕ ಕ್ಷೇತ್ರಗಳು, ಕೇಂದ್ರಗಳು ಧಾಮಿ೯ಕತೆಯನ್ನು ಬಿಟ್ಟು ಹೋದರೆ ಅವು ವ್ಯಾಪಾರ ಕೇಂದ್ರಗಳಾಗುತ್ತವೆ. ಈಗ ಎಲ್ಲಾ ಕಡೆ ದೇವಸ್ಥಾನಗಳಲ್ಲೂ ಬ್ರಹ್ಮಕಲಶಗಳು ನಡೆಯುತ್ತಿವೆ.  ಖಚು೯ ಮಾಡಿ ದೊಡ್ಡ ದೊಡ್ಡ ದೇವಸ್ಥಾನಗಳನ್ನು ನಿಮಿ೯ಸಿ ಬ್ರಹ್ಮಕಲಶ ನಡೆಸಿದರೂ ನಂತರ ನಿತ್ಯ ಪೂಜೆ ಆಗದಿದ್ದರೆ   ಸಮಪ೯ಕವಾಗಿರುವುದಿಲ್ಲ ಆದ್ದರಿಂದ ಪ್ರಾಚೀನ ದೇವಸ್ಥಾನದ ಮೂಲತತ್ವಗಳು ಬದಲಾಗಬಾರದೆಂದರು.

  ಗುರುಪುರ ಜಂಗಮ ಮಠ ಸಂಸ್ಥಾನದ ಶ್ರೀ ರುದ್ರಮುನಿ ಮಹಾಸ್ವಾಮೀಜಿ, ಕೇಂದ್ರದ ಮಾಜಿ ಸಚಿವ ಎಂ. ವೀರಪ್ಪ ಮೊಯಿಲಿ, ಡಾ. ಪದ್ಮನಾಭ ಉಡುಪ, ಶ್ರೀ ಕ್ಷೇತ್ರ ಕಟೀಲಿನ ವೇ. ಮೂ. ಲಕ್ಷ್ಮೀ ನಾರಾಯಣ ಅಸ್ರಣ್ಣ, ಅನಿತಾ ಸುರೇಂದ್ರ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮಂಗಳೂರು ಶ್ರೀ ಶರವು ಮಹಾಗಣಪತಿ ದೇವಸ್ಥಾನದ ರಾಘವೇಂದ್ರ ಶಾಸ್ತ್ರಿ ಎಸ್., ರಾಮ್ ಪ್ರಸಾದ್ ಭಟ್ ಕಲ್ಲಂಬೆಟ್ಟು ಪುತ್ತಿಗೆ, ಕೆಎಂಎಫ್ ಅಧ್ಯಕ್ಷ ಕೆ. ಪಿ. ಸುಚರಿತ ಶೆಟ್ಟಿ, ಪುತ್ತಿಗೆ ಗ್ರಾ.ಪಂ.ಅಧ್ಯಕ್ಷೆ ರಾಧಾ, ಸುಭಾಷ್ ದೇವಾಡಿಗ ಕಾಯರ್ ಪುಂಡು ಪುತ್ತಿಗೆ, ನಿಡ್ಡೋಡಿ ಮ್ಮೈಂದಾಡಿ ಸದಾನಂದ ಶೆಟ್ಟಿ, ಭಾಸ್ಕರ್ ಕೋಟ್ಯಾನ್ ಜಲಗೋಳಿ, ಲಿಂಗಪ್ಪ ಗೌಡ, ಅಬಿ೯ ಪುತ್ತಿಗೆಪದವು, ಶಕ್ತಿ ಪ್ರಸಾದ್ ಶೆಟ್ಟಿ ಮಿಜಾರು ಗೌರವ ಉಪಸ್ಥಿತರಿದ್ದರು. 

 ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ, ಕ್ಷೇತ್ರದ ಅನುವಂಶಿಕ ಆಡಳಿತ ಮೋಕ್ತೇಸರ ಕುಲದೀಪ ಎಂ. ಅತಿಥಿಗಳನ್ನು ಗೌರವಿಸಿದರು. ಡಾ. ಧನಂಜಯ ಕುಂಬ್ಳೆ ಕಾಯ೯ಕ್ರಮ ನಿರೂಪಿಸಿದರು.

Post a Comment

0 Comments