ಜಾಮೀನಿಗೆ ನಕಲಿ ಆಧಾರ್ ನೀಡಿದ ಆರೋಪಿಯ ಬಂಧನ
ಮೂಡುಬಿದಿರೆ: ಆರೋಪಿಗೆ ನಿರಕ್ಷೇಪಣಾ ಜಾಮೀನು ಪಡೆಯುವ ಸಂದರ್ಭ ನಕಲಿ ಆಧಾರ್ ಕಾರ್ಡ್ ನೀಡಿ ನ್ಯಾಯಾಲಯವನ್ನು ವಂಚಿಸಲು ಯತ್ನಿಸಿದ ಆರೋಪಿಯನ್ನು ಮೂಡುಬಿದಿರೆ ಸಿವಿಲ್ ಜಡ್ಜ್ ಮತ್ತು ಜೆ. ಎಂ.ಎಫ್. ಸಿ ನ್ಯಾಯಾಧೀಶ ಕೆ.ಮಧುಕರ್ ಪಿ.ಭಾಗವತ್ ಪತ್ತೆ ಮಾಡಿ ಬಂಧನವಾಗುವಂತೆ ಮಾಡಿದ್ದಾರೆ.
ಮಂಗಳೂರು ಕಂಕನಾಡಿ ಸುಲ್ತಾನ್‌ಗೋಲ್ಡ್ ಹತ್ತಿರದ ಸಿಟಿ ರೆಸಿಡೆನ್ಸಿ ನಿವಾಸಿ ಮೊಹಮ್ಮದ್ ಷರೀಫ್ ಬಂಧಿತ ಆರೋಪಿ. ಇನ್ನೊಂದು ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೊಹಮ್ಮದ್ ಇರ್ಫಾನ್ ಎಂಬವರಿಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, ಆತನಿಗೆ ನಿರಪೇಕ್ಷಣಾ ಜಾಮೀನು ಪಡೆಯುವ ಸಲುವಾಗಿ ಶಮೀರ್ ಬಷೀರ್ ಎಂಬ ಹೆಸರಿನ ನಕಲಿ ಆಧಾರ್ ಕಾರ್ಡ್, ಬಂಟ್ವಾಳದ ತುಂಬೆ ಗ್ರಾಮದ ಸರ್ವೆ ನಂಬ್ರ 77/10 ಇದರ ನಕಲು ಪಹಣಿ ಪತ್ರ ಹಾಜರುಪಡಿಸಿದ್ದರು. ಮೂಡುಬಿದಿರೆ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಮಧುಕರ್ ಪಿ. ಭಾಗವತ್ ಅವರು ಮೊಹಮ್ಮದ್ ಷರೀಫ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆತ ಅಸ್ಪಷ್ಟ ಉತ್ತರ ನೀಡಿದ್ದು ಸಂದೇಹಕ್ಕೆ ಕಾರಣವಾಗಿತ್ತು. ಆರೋಪಿಯಿಂದ ಬೇರೆ ಬೇರೆಯಾದ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ದೊರೆತಿದ್ದು, ಈ ಹಿಂದೆಯೂ ಸಹ ನ್ಯಾಯಾಲಯಗಳಿಗೆ ವಂಚನೆ ಮಾಡಿರುವ ವಿಚಾರವೂ ಬೆಳಕಿಗೆ ಬಂದಿದೆ.
ಈ ಸಂಬಂಧ ನ್ಯಾಯಾಲಯದ ಶಿರಸ್ತೇದಾರರಾದ ಪ್ರಸನ್ನ ಬಿ. ಅವರು ನ್ಯಾಯಾಲಯಕ್ಕೆ ನೀಡಿದ ದೂರಿನ ಅನ್ವಯ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಧೀಶರಾದ ಕಾವೇರಮ್ಮ ಎಂ.ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಈ ಹಿಂದೆ ನಕಲಿ ಆಧಾರ್ ಮತ್ತು ಪ್ಯಾನ್ ಕಾಡ್೯ಗಳನ್ನು ಬಳಸಿ ಓವ೯ನೇ ಹಲವು ಆರೋಪಿಗಳಿಗೆ ಜಾಮೀನು ನೀಡಿ ಹೊರ ತರುವಂತಹ ಹಲವಾರು ಪ್ರಕರಣಗಳು ನಡೆಯುತ್ತಿತ್ತು ಆದರೆ ಇದೀಗ ನ್ಯಾಯಾಧೀಶರು ಉತ್ತಮ ರೀತಿಯಲ್ಲಿ ವಿಚಾರಣೆ ನಡೆಸುತ್ತಿರುವುದರಿಂದ ನಕಲಿಗಳಿಗೆ ಕಡಿವಾಣ ಬೀಳುತ್ತಿದೆ.
0 Comments