ಗೋಮಾಳ ಜಾಗದಲ್ಲಿ ಅಕ್ರಮ ಕಲ್ಲಿನ ಕೋರೆ: ಗ್ರಾಮಸ್ಥರ ವಿರೋಧ, ಡಿಸಿಗೆ ದೂರು

ಜಾಹೀರಾತು/Advertisment
ಜಾಹೀರಾತು/Advertisment

 ಗೋಮಾಳ ಜಾಗದಲ್ಲಿ ಅಕ್ರಮ ಕಲ್ಲಿನ ಕೋರೆ: ಗ್ರಾಮಸ್ಥರ ವಿರೋಧ, ಡಿಸಿಗೆ ದೂರು

ಮೂಡುಬಿದಿರೆ: ಅನಾಧಿ ಕಾಲದಿಂದಲೂ ಪರಿಸರದ ಕೃಷಿಕರು ತಮ್ಮ ಹಸು ಕರುಗಳನ್ನು ಮೇಯಿಸುತ್ತಿದ್ದ ಸರಕಾರಿ ಗೋಮಾಳ

ಜಾಗವನ್ನು ಇದೀಗ ಅಕ್ರಮಿಸಿ ಕಲ್ಲಿನ ಕೋರೆಯನ್ನು ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ವಿರೋಧ ವ್ಯಕ್ತ ಪಡಿಸಿ ಡಿಸಿಗೆ ದೂರು ನೀಡಿದ್ದಾರೆ.

ತಾಲೂಕಿನ ಶಿತಾ೯ಡಿ ಗ್ರಾ.ಪಂ. ವ್ಯಾಪ್ತಿಯ ಮೂಡುಕೊಣಾಜೆ ಗ್ರಾಮದಲ್ಲಿರುವ ನಮ್ಮ ಮೂಡುಕೊಣಜೆ ಗ್ರಾಮದ ನಾಲ್ಕು ಬಾಕರ ಎಂಬಲ್ಲಿ ಸರ್ವೆ ನಂಬ್ರ 106 ರಲ್ಲಿ ಸುಮಾರು 21 ಎಕರೆಯಷ್ಟು ಸರಕಾರಿ ಗೋಮಾಳ ಜಾಗವಿದ್ದು ಇಲ್ಲಿ ಇತ್ತೀಚೆಗೆ ಪ್ರಸಾದ್ ಪೂಜಾರಿ ಪಾದಮನೆ ಅವರು ಅಕ್ರಮವಾಗಿ ಕಲ್ಲಿನ ಕೋರೆ ಮಾಡಿರುತ್ತಾರೆ ಮತ್ತು  ಜಾಗದಲ್ಲಿ ಅಡಿಕೆ ಗಿಡಗಳನ್ನು ನೆಟ್ಟಿದ್ದಾರೆ. ಇವರಲ್ಲದೆ ಸುರೇಶ್ ಪೂಜಾರಿ ಬಂಟಲ್ ಮನೆ ಇವರು ಅದೇ ಸರ್ವೆ ನಂಬ್ರದ ಇನ್ನು ಉಳಿದ ಜಾಗವನ್ನು ಅತಿಕ್ರಮಿಸಿ ಜೆಸಿಬಿ ಯಿಂದ ಅಗೆದಿರುತ್ತಾರೆ.


   ಕೃಷಿಕರು ಗೋವುಗಳನ್ನು ಅಲ್ಲಿ ಮೇಯಿಸಲು ಬಿಟ್ಪಾಗ ತಕರಾರು ಮಾಡಿದ್ದಲ್ಲದೆ  ಸದ್ರಿ ಜಾಗಕ್ಕೆ ಬೇಲಿ ಹಾಕಿರುತ್ತಾರೆ. ಇದರಿಂದಾಗಿ ಕೃಷಿಕರಾದ ನಮಗೆ ಸದ್ರಿ ಗೋಮಾಳ ಜಾಗದಲ್ಲಿ ಗೋವುಗಳನ್ನು ಮೇಯಿಸಲು ಆಗುವುದಿಲ್ಲ.ಗೋಮಾಳ ಜಾಗವನ್ನು ಅತಿಕ್ರಮಿಸಿರುವುದು ಕಾನೂನಿನ ಉಲ್ಲಂಘನೆಯಾಗಿರುತ್ತದೆ.

ಆದುದರಿಂದ ತಾವು ಈ ನಮ್ಮ ಮನವಿಯನ್ನು ಪರಿಶೀಲಿಸಿ ಸರಕಾರಿ ಗೋಮಾಳ ಜಾಗವನ್ನು ಅತಿಕ್ರಮಿಸಿರುವುದನ್ನು ಮನಗಂಡು ಅವರುಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

Post a Comment

0 Comments