ಮೂಡುಬಿದಿರೆಯಲ್ಲಿ ಗುರುಪಾದುಕಾ ದಿಗ್ವಿಜಯ ಯಾತ್ರೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ಗುರುಪಾದುಕಾ ದಿಗ್ವಿಜಯ ಯಾತ್ರೆ


ಮೂಡುಬಿದಿರೆ: ಶ್ರೀ ಕಾಶೀಮಠ ಸಂಸ್ಥಾನದ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದಿ ಮಹೋತ್ಸವದ ಅಂಗವಾಗಿ ರಾಷ್ಟ್ರವ್ಯಾಪಿ ಸಂಚರಿಸುತ್ತಿರುವ ಗುರುಪಾದುಕಾ ದಿಗ್ವಿಜಯ ಯಾತ್ರೆ ಕಾಞಂಗಾಡಿನಿಂದ ಸೋಮವಾರ ಮುಸ್ಸಂಜೆ ಮೂಡುಬಿದಿರೆ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಆಗಮಿಸಿದ್ದು ಶ್ರೀ ಹನುಮಂತ ದೇವಸ್ಥಾನದ ಬಳಿ ಪಾದುಕಾ ಯಾತ್ರೆಯನ್ನು ಸ್ವಾಗತಿಸಿ ಆದರದಿಂದ ಬರಮಾಡಿಕೊಳ್ಳಲಾಯಿತು.


ಶ್ರೀ ದೇವಳದಲ್ಲಿ ಆಡಳಿತ ಮಂಡಳಿಯ ವತಿಯಿಂದ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ ಸಹಿತ ಮೊಕ್ತೇಸರರು ಪಾದುಕಾಪೂಜೆ ನಡೆಸಿ ಗೌರವ ಸಮರ್ಪಿಸಿದರು. ದೇವಳದಲ್ಲಿ ರಾತ್ರಿ ಪೂಜೆಯ ಬಳಿಕ ಗುರುಗುಣಗಾನ ನಡೆಯಿತು. ಜಿ.ಉಮೇಶ್ ಪೈ, ಮಾಜಿ ಮೊಕ್ತೇಸರ ಆರ್. ನಂದ ಕುಮಾರ್ ಕುಡ್ವ ಶ್ರೀಗಳವರು ಮೂಡುಬಿದಿರೆ ಪೇಟೆಗೆ ನೀಡಿದ ಅನುಗ್ರಹ ಭೇಟಿಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಯಾತ್ರೆಯ ಉಸ್ತುವಾರಿ ಕೆ. ಗುರುದತ್ತ ಕಾಮತ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಹೊರತು ಪಡಿಸಿದರೆ ಪಾದುಕೆಗಳ ಯಾತ್ರೆ ಮೂಡುಬಿದಿರೆಗೆ ಮೊದಲಾಗಿ ಆಗಮಿಸುತ್ತಿರುವುದು ಯೋಗ ಭಾಗ್ಯ ಎಂದರು. ಯಾತ್ರೆಯ ಸ್ಥಳೀಯ ಪ್ರಮುಖ ರಮಿತ್ ಮಲ್ಯ, ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments