ಜೆ ಇ ಇ ಮೈನ್ಸ್ ಪರೀಕ್ಷೆ: ಎಕ್ಸಲೆ೦ಟ್ ಮೂಡುಬಿದಿರೆಯ ವಿದ್ಯಾರ್ಥಿಗಳ ಸಾಧನೆ
ಮೂಡುಬಿದಿರೆ: ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆ೦ಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅ೦ಕಗಳನ್ನು ಪಡೆದು ಉತ್ಕೃಷ್ಟ ಸಾಧನೆಗೈದಿದ್ದಾರೆ.
ಶಿಶಿರ್ ಎಸ್ ಶೆಟ್ಟಿ (99.97143 ಪರ್ಸೆಂಟೈಲ್), ಶ್ರೇಯಾಂಕ್ ಮನೋಹರ ಪೈ (99.82541), ಕಾರ್ತಿಕ್ ಎಸ್ (99.02732 ಪರ್ಸೆಂಟೈಲ್), ಉತ್ತಮ ಅಂಕ ಗಳಿಸುವುದರ ಮೂಲಕ ಸ೦ಸ್ಥೆಗೆ ಕೀರ್ತಿ ತ೦ದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಸ೦ಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾ೦ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಹಾಗೂ ಉಪನ್ಯಾಸಕ ವೃ೦ದದವರು ವಿದ್ಯಾರ್ಥಿಗಳನ್ನು ಅಭಿನ೦ದಿಸಿದ್ದಾರೆ.
0 Comments