ಮೂಡುಬಿದಿರೆ ಮಾಕೆ೯ಟ್ ನಲ್ಲಿ ಅನಧಿಕೃತ ಸೀಯಾಳದಂಗಡಿ: ಅಭಯರ ಸೂಚನೆಗೆ ತೆರವುಗೊಳಿಸಿದ ಪುರಸಭೆ
ಮೂಡುಬಿದಿರೆ: ಇಲ್ಲಿನ ಮಾರ್ಕೆಟ್ ನಲ್ಲಿ ನಿನ್ನೆ ರಾತ್ರಿಯಿಂದ ಅನಧಿಕೃತವಾಗಿ ವ್ಯಾಪಾರ ಮಾಡಲು ಸಿದ್ಧಗೊಂಡಿದ್ದ ಸೀಯಾಳದ ಅಂಗಡಿಯನ್ನು ಮಾಜಿ ಸಚಿವ ಕೆ. ಅಭಯಚಂದ್ರ ಅವರು ತೆರವುಗೊಳಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಪುರಸಭೆಯ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ತೆರವುಗೊಳಿಸಿದ ಘಟನೆ ನಡೆದಿದೆ.
ಹಿನ್ನೆಲೆ : ಕಳೆದ ಹಲವು ವರ್ಷಗಳಿಂದ ದಿನೇಶ್ ಅವರು ಸೀಯಾಳದ ವ್ಯಾಪಾರ ಮಾಡುತ್ತಾ ಬಂದಿದ್ದು ದಿನಕ್ಕೆ 150 ರೂ ಬಾಡಿಗೆಯನ್ನು ಸುಂಕವಸೂಲಿ ಗುತ್ತಿಗೆದಾರರಿಗೆ ನೀಡುತ್ತಿದ್ದರು.
ಇತ್ತೀಚೆಗೆ ಮಾರ್ಕೆಟ್ ನ ಸುಂಕ ವಸೂಲಿ ಗುತ್ತಿಗೆ ಬೇರೊಬ್ಬರ ಪಾಲಾಗಿದ್ದು ಹೊಸ ಗುತ್ತಿಗೆದಾರರು ದಿನಕ್ಕೆ ರೂ 600 ಸುಂಕ ನೀಡಬೇಕೆಂದು ಒತ್ತಾಯಿಸಿದ್ದಾರೆನ್ನಲಾಗಿದೆ. ನನ್ನಿಂದ ಅಷ್ಟು ಹಣ ಕೊಡಲು ಸಾಧ್ಯವಿಲ್ಲ ನಾನು ಹಿಂದೆ ಕೊಡುತಿದ್ದಷ್ಟೇ ಕೊಡುವುದಾಗಿ ಹೇಳಿದ್ದಾರೆನ್ನಲಾಗಿದೆ.ಆದರೂ ಹೊಸ ಗುತ್ತಿಗೆದಾರರು ಹೆಚ್ಚುವರಿ ಕೊಡಬೇಕೆಂದು ಒತ್ತಾಯಿಸಿರುವ ಬಗ್ಗೆ ಮಾಜಿ ಸಚಿವ ಅಭಯಚಂದ್ರ ಅವರಲ್ಲಿ ದೂರು ನೀಡಿದ್ದರು.
ಇದರಿಂದ ರೊಚ್ಚಿಗೆದ್ದ ಗುತ್ತಿಗೆದಾರರು ನಿನ್ನ ಅಂಗಡಿಯನ್ನು ತೆಗೆಯುತ್ತೇವೆಂದು ಬೆದರಿಕೆಯೊಡ್ಡಿದ್ದಾರೆನ್ನಲಾಗಿದೆ.ಆದರೆ ಕಳೆದ ರಾತ್ರಿ ದಿನೇಶ್ ಅವರ ಸೀಯಾಳದಂಗಡಿ ಪಕ್ಕದಲ್ಲೇ ಇನ್ನೊಂದು ಸೀಯಾಳದಂಗಡಿ ದಿಢೀರ್ ಓಪನ್ ಆಗಿದ್ದಲ್ಲದೆ ದಿನೇಶ್ ಅವರ ಅಂಗಡಿಯ ಶೀಟ್, ಚೇರ್, ಸೀಯಾಳಗಳನ್ನು ಎಸೆಯಲಾಗಿತ್ತೆಂದೂ ಹೇಳಲಾಗುತ್ತಿದೆ.
ರಾತ್ರಿ ನಡೆದ ಈ ಕೃತ್ಯವು ಅಭಯರ ಗಮನಕ್ಕೆ ಬಂದಿದ್ದು, ಕೋಪಗೊಂಡ ಅವರು ಬೆಳಿಗ್ಗೆ ಖುದ್ದಾಗಿ ಮಾರ್ಕೆಟ್ ಗೆ ತೆರಳಿ ಪುರಸಭಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪುರಸಭಾಧಿಕಾರಿಗಳು,ಪೊಲೀಸರು ಸ್ಥಳಕ್ಕೆ ಬಂದಿದ್ದು ರಾತ್ರಿ ಹಾಕಿದ್ದ ಅಂಗಡಿಯನ್ನು ತೆರವುಗೊಳಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಪುರಸಭಾ ಸಿಬ್ಬಂದಿಗಳು ಆ ಅನಧಿಕೃತ ಅಂಗಡಿಯನ್ನು ತೆರವುಗೊಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅಭಯಚಂದ್ರ ಜೈನ್ ಅವರು ಹಳೆ ಮಾರ್ಕೆಟ್ ನಿಂದ ಸ್ವರಾಜ್ಯ ಮೈದಾನಕ್ಕೆ ಶಿಫ್ಟ್ ಆಗುವಾಗ 68 ಅಂಗಡಿಗಳಿತ್ತಃ. ಆದರೆ ನಂತರ ಬಂದ ಶಾಸಕರು ತಮ್ಮ ಆಪ್ತರಿಗೆಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಅವುಗಳನ್ನೆಲ್ಲಾ ತೆರವುಗೊಳಿಸಿ ಹಿಂದೆ ಇದ್ದ ಅಷ್ಟೇ ಅಂಗಡಿಗಳಿರಬೇಕು, ಬೇರೆ ಅಂಗಡಿಗಳಿಗೆ ಅವಕಾಶ ನೀಡಬಾರದೆಂದೂ ಪುರಸಭಾಧಿಕಾರಿಗಳಿಗೆ ಅವರು ಎಚ್ಚರಿಕೆ ನೀಡಿ ಟೆಂಡರ್ ಕ್ಯಾನ್ಸಲ್ ಮಾಡುವಂತೆ ತಿಳಿಸಿದರು.
ಕಾಂಗ್ರೆಸ್ ಮುಖಂಡ ಮಿಥುನ್ ರೈ ಸ್ಥಳಕ್ಕೆ ಆಗಮಿಸಿ ಮಾತನಾಡಿ ರೌಡಿ ಶೀಟರ್ ಸಮಿತ್ ಎಂಬಾತ ಕನಾ೯ಟಕದಲ್ಲಿ ಎಲ್ಲೂ ಆಗದ ವಸೂಲಿ ದಂಧೆಯನ್ನು ಇಲ್ಲಿ ಮಾಡುತ್ತಿದ್ದಾನೆ. ಇಲ್ಲಿ ಮುಸ್ಲಿಂರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಇಲ್ಲಿ ಕೋಮುಗಲಭೆ ಆದರೆ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿದರು.
ಮತ್ತೆ ಇನ್ಸ್ಪೆಕ್ಟರ್ ಅವರ ಬಳಿ ಆ ರೌಡಿಶೀಟರನ್ನು ಬಿಡಬಾರದು ಆತನನ್ನು ಚಡ್ಡಿಯಲ್ಲಿ ಮೆರವಣಿಗೆ ಮಾಡಬೇಕೆಂದು ತಿಳಿಸಿದರು.
ಪುರಸಭಾ ಸದಸ್ಯರಾದ ಕೊರಗಪ್ಪ, ಸುರೇಶ್ ಕೋಟ್ಯಾನ್, ಕೊರಗಪ್ಪ, ಸುರೇಶ್ ಪ್ರಭು, ಜೊಸ್ಸಿ ಮಿನೇಜಸ್, ಪುರಂದರ ದೇವಾಡಿಗ, ಇಕ್ಬಾಲ್ ಕರೀಂ, ಮುಡಾ ಅಧ್ಯಕ್ಷ ಹಷ೯ವಧ೯ನ್ ಪಡಿವಾಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್ ಮತ್ತಿತರರು ಈ ಸಂದಭ೯ದಲ್ಲಿದ್ದರು.
0 Comments