"ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರಿಗಾಗಿ ಕ್ಯೂ ಕಾಂಪ್ಲೆಕ್ಸ್ ಲೋಕಾರ್ಪಣೆ"

ಜಾಹೀರಾತು/Advertisment
ಜಾಹೀರಾತು/Advertisment

 "ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರಿಗಾಗಿ  ಕ್ಯೂ ಕಾಂಪ್ಲೆಕ್ಸ್ ಲೋಕಾರ್ಪಣೆ"


 "ದೇಶವೇ ಮೊದಲ ಆದ್ಯತೆಯಾಗಬೇಕು : ಜಗ ದೀಪ್  ಧನಕರ್"

 ಶ್ರೀ ಕ್ಷೇತ್ರ ಧರ್ಮಸ್ಥಳ ಯಾವುದೇ ವಿಚಾರವನ್ನು ನಾವು ಗಣನೆಗೆ ತೆಗೆದುಕೊಳ್ಳುವಾಗ ದೇಶ ಮೊದಲ ವಿಚಾರವಾಗಬೇಕು ಅದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಉಪರಾಷ್ಟ್ರಪತಿ ಜಗದ್ಗುರು ತಿಳಿಸಿದರು.ಅವರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಕ್ಯೂ  ಕಾಂಪ್ಲೆಕ್ಸ್ "ಶ್ರೀ ಸಾನಿಧ್ಯ ".   ಸಂಕೀರ್ಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.


 ಜನರು ಎಲ್ಲಾ ಆಡೆ ತಡೆಗಳನ್ನು ಮೀರಿ ಬೆಳೆಯಬೇಕು, ಭಾರತ ತನ್ನ ಗುರಿ ತಲುಪಲು ಜನರು ಸಹಕರಿಸಬೇಕು. ಕೆಲವು ದೇಶಗಳು ವಿಭಜನೆ ಮತ್ತು ತಪ್ಪು ಮಾಹಿತಿಯನ್ನು ಹರಡಿ ನಮ್ಮ ದೇಶವನ್ನು ದುರ್ಬಲಗೊಳಿಸಲು  ಯತ್ನಿಸಿವೆ ಇಂತಹ ವಿರೋಧಿ ಶಕ್ತಿಗಳಿಗೆ ಎದೆ ಗುಂದಬಾರದು ಎಂದರು .ಭಕ್ತರು ಸ್ವಾಮಿಯ ದರ್ಶನ ಪಡೆಯಲು ಅನುಕೂಲತೆಯನ್ನು ಕ್ಯೂ ಕಾಂಪ್ಲೆಕ್ಸ್ ಪದ್ಧತಿ ಜಾರಿಗೆ ತರಲಾಗಿದೆ ಇಲ್ಲಿ ವೈದ್ಯಕೀಯ,    ಟಿ.ವಿ.ಗಳು, ಊಟೋ ಪಚಾರ, ವಿಶ್ರಾಂತಿ ಕೊಠಡಿ ಆರಾಮದಾಯಕ ಆಸನದ ವ್ಯವಸ್ಥೆ, ಶೌಚಾಲಯ ,ವೈದ್ಯಕೀಯ ಸೇವೆ, ವೃದ್ಧರಿಗೆ, ಅಂಗವಿಕಲರಿಗೆ  ,ಮಕ್ಕಳ ಆರೈಕೆಗೆ ವಿಶೇಷ ಕೊಠಡಿ, ಹವಾ ನಿಯಂತ್ರಿತ ಕೊಠಡಿಗಳನ್ನು ನಿರ್ಮಿಸಲಾಗಿದೆ ಹಲವಾರು ಸವಲತ್ತು ಗಳನ್ನು ಕಲ್ಪಿಸಲಾಗಿದ್ದು, ಹೆಚ್ಚು ಸಮಯ ಉಳಿತಾಯದೊಂದಿಗೆ ದೇವರ ದರ್ಶನ ಪಡೆಯಬಹುದು ಎಂದರು .

ಸಮಾಜದ ನಾಗರಿಕ ಜೀವನದ ಬೆಳವಣಿಗೆಗೆ ಸೌಹಾರ್ದ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಶ್ರೀ  ಸಾನಿಧ್ಯ ಎಂಬುದು ಸರ್ವ ರ ಸಮಾನತೆಯನ್ನು ತೋರಿಸುವ ಬಿಂಬವಾಗಿದೆ ಇದು ಭಕ್ತರಿಗೆ ಸಮಾನತೆ ,ವೈವಿಧ್ಯತೆ, ಸೌಹಾರ್ದತೆ ಉಳಿವಿಗೆ ಇವು ಅಗತ್ಯ ಎಂದ ಆವರು ಇದೇ ಸಂದರ್ಭದಲ್ಲಿ ಶೈಕ್ಷಣಿಕ ಸಾಧಕರಿಗೆ ಸುಜ್ಞಾನ ನಿಧಿ ನೀಡಿ ಗೌರವಿಸಿದರು.

 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜರ್ಷಿ,ಪದ್ಮಶ್ರೀ ,ರಾಜ್ಯಸಭಾ ಸದಸ್ಯರಾದ ಡಾ. ಡಿ ವೀರೇಂದ್ರ ಹೆಗ್ಗಡೆ ಮಾತನಾಡಿ 10,000 ಆಸನ ವ್ಯವಸ್ಥೆಯುಳ್ಳ ಈ  ಸಾನಿಧ್ಯ ಲೋಕಾರ್ಪಣೆಗೊಂಡಿರುವುದು ಭಕ್ತರಿಗೆ ಸಂತಸ ತಂದಿದೆ,  ಇದರಿಂದ ಸಮಯ ಉಳಿತಾಯವಾಗಲಿದ್ದು ದೇವರ ದರ್ಶನಕ್ಕೆ ಅನುಕೂಲವಾಗಲಿದೆ ಎಂದರು.

 ಗ್ರಾಮೀಣ ಭಾರತ ನಿಜವಾದ ಭಾರತವಾಗಿದ್ದು ಗ್ರಾಮೀಣ ಅಭಿವೃದ್ಧಿ ,ಶಿಕ್ಷಣ ಬಲಪಡಿಸುವುದು ಪ್ರಮುಖವಾಗಿದೆ ಎಂದ ಅವರು,ಇಂದು ಸರ್ಕಾರಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು ,ಶಿಕ್ಷಕರು ,ಶೌಚಾಲಯ ವ್ಯವಸ್ಥೆ ,ಕುಡಿಯುವ ನೀರು ಇನ್ನಿತರ ಮೂಲಭೂತ ಸೌಲಭ್ಯಗಳು ಕಡಿಮೆ ಇರುವುದರಿಂದ ಗ್ರಾಮೀಣ ಶಿಕ್ಷಣ ಬಲಪಡಿಸಲು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಮುಖೇನ ಜ್ಞಾನ ದೀಪ ಶಿಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

 ಕಾರ್ಯಕ್ರಮದಲ್ಲಿ ಡಾ. ಹೇಮಾವತಿ .ವಿ. ಹೆಗಡೆ ಡಾ.ಸುದೇಶ್ ಧನಕರ್ , ಮಂಗಳೂರು ಸಂಸದ ಬ್ರಿಜೆಶ್ ಚೌಟ ,ಧರ್ಮಸ್ಥಳ ಸುರೇಂದ್ರ ಕುಮಾರ್, ಡಿ ಹರ್ಷಿಂದ್ರ ಕುಮಾರ್  ಉಪಸ್ಥಿತರಿದ್ದರು

 ವರದಿ : ಜೆ.ರಂಗನಾಥ ತುಮಕೂರು 

Post a Comment

0 Comments