"ಎಸ್.ಡಿ .ಎಂ. ಆಸ್ಪತ್ರೆಯಿಂದ ಉಚಿತ ಡಯಾಲಿಸಿಸ್ ಸೇವೆ ಡಾ. ಹೇಮಾವತಿ. ವಿ .ಹೆಗಡೆ."
ಬೆಳ್ತಂಗಡಿ ಅಗತ್ಯವಿರುವಂತಹ ಬಡ ರೋಗಿಗಳಿಗೆ ಅನುಕೂಲವಾಗುವಂತೆ ಉಚಿತ ಡಯಾಲಿಸಿ ಸೇವೆಯನ್ನು ನೀಡಲಾಗುತ್ತಿದೆ ಎಂದು ಧರ್ಮಸ್ಥಳದ ಡಾ. ಹೇಮಾವತಿ .ವಿ .ಹೆಗಡೆ ತಿಳಿಸಿದರು.
ಅವರಿಂದು ತಾಲೂಕಿನ ಉಜಿರೆಯ ಎಸ್ .ಡಿ .ಎಂ .ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು.ಡಯಾಲಿಸಿಸ್ ರೋಗಿಗಳಿಗೆ ನಿರಂತರ ಹಾರೈಕೆ ಅಗತ್ಯ, ಅವರ ಆರೋಗ್ಯ ಸುಧಾರಣೆಗೆ ಹೆಚ್ಚು ಖರ್ಚು ಬರಲಿದೆ ,ಬಡ ರೋಗಿಗಳಿಗೆ ಇದು ಸವಾಲ್ ಆಗಿದ್ದು ಈ ಹಣದ ಉಳಿತಾಯದಿಂದ ಜೀವನಕ್ಕೆ ಸಹಾಯವಾಗಲಿದೆ, ಬಡಜನರ ದುಬಾರಿ ಹಣದ ವ್ಯಯ ತಪ್ಪಿಸಲು ಶ್ರೀ ವೀರೇಂದ್ರ ಹೆಗಡೆಯವರು ಆಶಯದಂತೆ ಈ ಉಚಿತ ಡಯಾಲಿಸಿ ಸೇವೆ ಪ್ರಾರಂಭಿಸಲಾಗಿದೆ ಎಂದರು.
ಆರ್ಥಿಕ ಅಶಕ್ತರಿಗೆ ಸಹಾಯ ಅಗತ್ಯವಿರುವವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ .ಜನಾರ್ಧನ್ ಪ್ರಾಸ್ತಾವಿಕ ನುಡಿಗಳ ನಾಡಿದರು. ಎಸ್.ಡಿ.ಎಂ ಆಸ್ಪತ್ರೆಯ ಪಿಜಿಶಿಯನ್ ಡಾ. ಸಾತ್ವಿಕ್ ಜೈನ್, ಡಾ.ಬಾಲಕೃಷ್ಣ ಭಟ್, ಡಾ. ದೇವೇಂದ್ರ ,ಸಿಬ್ಬಂದಿಗಳು ಉಪಸ್ಥಿತರಿದ್ದರು.ಅನುಷಾ ಕಾರ್ಯಕ್ರಮ ನಿರೂಪಿಸಿದರು.ಚಿದಾನಂದ ವಂದಿಸಿದರು
ಜೆ.ರಂಗನಾಥ ತುಮಕೂರು
0 Comments