'ಶ್ರೀ ವೀರ ವಿಕ್ರಮ' ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
ಮೂಡುಬಿದಿರೆ: ಮಹಿಷಮರ್ಧಿನಿ ಕಂಬಳ ಸಮಿತಿಯ ವತಿಯಿಂದ ನಡೆಯುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಶನಿವಾರ ಬೆಳಿಗ್ಗೆ ಆರಂಭಗೊಂಡಿತು.
ಶ್ರೀ ಕ್ಷೇತ್ರ ಪೂಂಜದ ಅಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಅವರು ಪರಿಸರದ ವಿವಿಧ ದೈವಸ್ಥಾನ, ದೇವಸ್ಥಾನಗಳ ಪ್ರಸಾದವನ್ನು ಕಂಬಳದ ಕೆರೆಗೆ ಸಂಪ್ರೋಕ್ಷಣೆಗೈದು ನಂತರ ದೀಪ ಬೆಳಗಿಸಿ ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿ
ವೀರ ವಿಕ್ರಮ ಕಂಬಳಕ್ಕೆ ಅದರದ್ದೇ ಆದ ಇತಿಹಾಸವಿದೆ. ತುಳುನಾಡಿನ ಸಂಸ್ಕೃತಿ ಮತ್ತು ಶ್ರೀಮಂತಿಕೆಯನ್ನು ಜಗಜ್ಜಾಹೀರುಗೊಳಿಸಿ ವಿಸ್ತಾರ ಮಾಡುವ ಕ್ರೀಡೆ. ಇದನ್ನು ನಾವು ಆಯೋಜನೆ ಮಾಡುತ್ತಿದ್ದರೆ ತುಳುನಾಡಿನ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಿದಂತ್ತಾಗುತ್ತದೆ ಎಂದು ಹೇಳಿದರು.
ಬಾಲ ಭವನ ಸೊಸೈಟಿ ಯು ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಕುಕ್ಕಿಪಾಡಿ ಗ್ರಾ.ಪಂಚಾಯತ್ ಅಧ್ಯಕ್ಷ ಶೇಖರ ಶೆಟ್ಟಿ ಬದ್ಯಾರು, ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಷ೯ವಧ೯ನ್ ಪಡಿವಾಳ್, ಸಿದ್ಧಕಟ್ಟೆ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರತ್ನಕುಮಾರ್ ಚೌಟ, ಅನಂತಪದ್ಮನಾಭ ಆಸ್ಪತ್ರೆಯ ವೈದ್ಯ ಡಾ.ಸುದೀಪ್, ಸಿದ್ಧಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು, ಹೊಸಂಗಡಿ ಗ್ರಾ.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ , ವಸಂತ್, ಮಿಯಾರು ಬೋಕ೯ಟ್ಟೆಯ ಪ್ರಭಾಕರ ಶೆಟ್ಟಿ, ಅಡ್ವೆ ನಂದಿಕೂರು ಕಂಬಳ ಸಮಿತಿಯ ಶೇಖರ ಶೆಟ್ಟಿ ಮುಂಡ್ಕೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ವೀರ ವಿಕ್ರಮ ಕಂಬಳ ಸಮಿತಿಯ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಪ್ರ. ಕಾಯ೯ದಶಿ೯ ಪ್ರಭಾಕರ್ ಹುಲಿ ಮೇರು, ಕಾರ್ಯದರ್ಶಿ ಪುಷ್ಪರಾಜ್ ಜೈನ್ ನಿಡ್ಡೋಡಿ, ಗೌರವ ಸಲಹೆಗಾರರು, ಕಂಬಳ ಸ್ಥಳ ದಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಂಬಳ ಸಮಿತಿಯ ಅಧ್ಯಕ್ಷ ರಶ್ಮಿತ್ ಶೆಟ್ಟಿ ನೋಣಾಲ್ ಗುತ್ತು ಸ್ವಾಗತಿಸಿದರು. ದಿನೇಶ್ ರಾಯಿ ಕಾಯ೯ಕ್ರಮ ನಿರೂಪಿಸಿ, ವಂದಿಸಿದರು.
0 Comments