ಮೂಡುಬಿದಿರೆ ಗೆ ನಂದಿ ಗೋಯಾತ್ರೆ ಆಗಮನ ರೋಗ ಮುಕ್ತ ದೇಶವಾಗ ಬೇಕಾದರೆ ಗೋ ಸಂಪತ್ತು ಹೆಚ್ಚಬೇಕು- ಭಟ್ಟಾರಕ ಶ್ರೀ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಗೆ ನಂದಿ ಗೋಯಾತ್ರೆ ಆಗಮನ

ರೋಗ ಮುಕ್ತ ದೇಶವಾಗ ಬೇಕಾದರೆ ಗೋ ಸಂಪತ್ತು ಹೆಚ್ಚಬೇಕು- ಭಟ್ಟಾರಕ ಶ್ರೀ


 ಮೂಡುಬಿದಿರೆ: ಗೋ ಸೇವಾ ಗತಿನಿಧಿ ಕರ್ನಾಟಕ ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಪ್ರತಿಷ್ಠಾನವು ರಾಜ್ಯಾದ್ಯಂತ ನಂದಿ ರಥಯಾತ್ರೆ ಆಯೋಜಿಸಿದ್ದು ಬುಧವಾರ ಮೂಡುಬಿದಿರೆ ಗೆ ಆಗಮಿಸಿತು.

   


  ಸ್ವರಾಜ್ಯ ಮೈದಾನ ಬಳಿ ಶಾಸಕ ಉಮಾನಾಥ ಕೋಟ್ಯಾನ ರಥಕ್ಕೆ ಆರತಿ ಬೆಳಗಿ ಸ್ವಾಗತಿಸಿದರು. ಬಳಿಕ ಚೆಂಡುವಾದನ ಕುಣಿತ ಭಜನೆಯೊಂದಿಗೆ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಯಿತು. ರಾತ್ರಿ ನಂದಿಪೂಜೆ ವಿಷ್ಣು ಸಹಸ್ರನಾಮ ಪಠಣ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮ ದಲ್ಲಿ ಆಶೀರ್ವಚನ ನೀಡಿದ ಜೈನಮಠದ ಸ್ಚಸ್ತಿಶ್ರೀ ಭಟ್ಟಾರಕ ಚಾರು ಕೀರ್ತಿ ಸ್ವಾಮೀಜಿ ಗೋ ಸಂಪತ್ತು ಉಳಿದರೆ ದೇಶ ಉಳಿದೀತು . ರೋಗ ಮುಕ್ತ ಭಾರತ ನಿರ್ಮಾಣವಾಗಬೇಕಾದರೆ ಗೋ ಸಂಪತ್ತು ಹೆಚ್ಚಬೇಕು. ‌ಗೋಮೂತ್ರ ಆರೋಗ್ಯ ವರ್ಧಕವಾಗಿದ್ದು ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಯಿದೆ ಎಂದರು. 

 


 ವೀರಮಾರುತಿ ದೇವಸ್ಥಾನ ಟ್ರಸ್ಟಿ ಉದಯಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ನ ಅಧ್ಯಕ್ಷ ಭಕ್ತಿ ಭೂಷಣದಾಸ್ ಗೋವಿನ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಹಕಾರಿ ಧುರೀಣ , ಎಂ. ದಯಾನಂದ ಪೈ , ದೈವಜ್ಞ ಡಾ ಯೋಗಿ ಸುಧಾಕರ ತಂತ್ರಿ , ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮ ಸಂಚಾಲಕ ರಾಘವೇಂದ್ರ ಭಂಡಾರ್ಕಾಕ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಂಯೋಜಕ ಅಶೋಕ ಅಲಂಗಾರು ವಂದಿಸಿದರು.

Post a Comment

0 Comments