ಅಳದoಗಡಿ ದ್ವಾದರ್ಶ ವರ್ಷಿಯ ಪ್ರತಿಷ್ಠ ವರ್ಧಂತಿ ಸಂಪನ್ನ"

ಜಾಹೀರಾತು/Advertisment
ಜಾಹೀರಾತು/Advertisment

 "ಅಳದoಗಡಿ ದ್ವಾದರ್ಶ ವರ್ಷಿಯ ಪ್ರತಿಷ್ಠ ವರ್ಧಂತಿ ಸಂಪನ್ನ"


 ಇಲ್ಲಿಗೆ ಸಮೀಪದ  ಅಳದoಗಡಿ ದೊಡ್ಡ ಬಸದಿಯ ಶ್ರೀ ಪಾರ್ಶ್ವನಾಥ ತೀರ್ಥಂಕರರಿಗೆ ದ್ವಾದಶ ವರ್ಷಿಯ ಪ್ರತಿಷ್ಠ ವರ್ಧಂತಿ ಕಾರ್ಯಕ್ರಮ ಇಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು.

 ಬೆಳಗ್ಗೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ  ಅಜಿಲ ದಂಪತಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗ್ಗೆ ತೋರಣ ಮಹೂರ್ತ, ವಿಮಾನ ಶುದ್ದಿ, ನವಗ್ರಹ ಶಾಂತಿ,  ಮುಖ ವಸ್ತ್ರ ಉದ್ಘಾಟನೆ, ಕಲಿಕುಂಡ ಯಂತ್ರರಾಧನೇ, ಕ್ಷೇತ್ರ ಪಾಲರಿಗೆ ನವ ಕಳಶಭಿಷೇಕ, ನಾಗದೇವರಿಗೆ ಅಶ್ಲೇಷ ಬಲಿ, ಶ್ರೀ ಪದ್ಮಾವತಿ ದೇವಿ ಆರಾಧನೆ ಹಾಗೂ ಶ್ರೀ ಜ್ವಾಲಾಮಾಲಿನಿ ದೇವಿ ಆರಾಧನೆಗಳು ನಡೆದವು .  

ಸಂಜೆ ಶ್ರೀ ಪಾರ್ಶ್ವನಾಥ ಸ್ವಾಮಿಗೆ 24 ಕಳಸ ಅಭಿಷೇಕ ಉತ್ಸವ, ಮಹಾಪೂಜೆ ,ಪೂಜ್ಯಶ್ರೀಗಳ ಅವರ ಪಾದಪೂಜೆ ,ಮಂತ್ರಾಕ್ಷತೆ, ತೋರಣ ವಿಸರ್ಜನೆ, ರಾತ್ರಿ ಅಂಗಣ ಪಂಜುರ್ಲಿ ದೈವದ ನೇಮೋತ್ಸವ, ಆಗ್ರೋದಕ ಮೆರವಣಿಗೆ ನಡೆಯಿತು.

 ಕಾರ್ಕಳ ದಾನಶಾಲಾ ಮಠದ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟರಕ ಪಟ್ಟಾಚಾರ್ಯ ಮಹಾಸ್ವಾಮಿಗಳವರ ಪಾವನ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಕಾರ್ಯಕ್ರಮದಲ್ಲಿ ತಿಮ್ಮಣ್ಣರಸ ರಾದ ಡಾ. ಪದ್ಮಪ್ರಸಾದ್ ಅಜಿಲ ದಂಪತಿಗಳು ,ಸ್ಥಳೀಯ ಜೈನ ಮನೆತನಗಳು ,ಜೈನ ಸಂಘಟನೆಗಳು, ಮಹಿಳಾ ಸಂಘಟನೆಗಳು, ಶ್ರಾವಕ- ಶ್ರಾವಕಿಯರು ಭಾಗವಹಿಸಿದ್ದರು .ಪ್ರತಿಷ್ಠಾಪನಾಚಾರ್ಯ ಪದ್ಮ ಪ್ರಭು ಇಂದ್ರ ಶಾಸ್ತ್ರಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಜೆ.ರಂಗನಾಥ ತುಮಕೂರು 

Post a Comment

0 Comments